ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ಮೂಲಕ 15 ವರ್ಷದಲ್ಲಿ 40 ಲಕ್ಷ ರೂವರೆಗೆ ಆದಾಯ
PPF scheme gives upto Rs 40 lakh returns in 15 years: ಪಿಪಿಎಫ್ ಅಕೌಂಟ್ ತೆರೆದರೆ ದೀರ್ಘಾವಧಿ ಹೂಡಿಕೆಯ ಅವಕಾಶ ದೊರಕುತ್ತದೆ. ಬ್ಯಾಂಕ್ ಎಫ್ಡಿಗಿಂತ ತುಸು ಹೆಚ್ಚು ಬಡ್ಡಿ ಸಿಗುತ್ತದೆ. 15 ವರ್ಷ ಲಾಕಿನ್ ಪೀರಿಯಡ್ ಇರುವ ಈ ಸ್ಕೀಮ್ನಲ್ಲಿ ಒಂದು ವರ್ಷದಲ್ಲಿ 500 ರೂನಿಂದ 1.5 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದರೆ 15 ವರ್ಷದಲ್ಲಿ 40 ಲಕ್ಷ ರೂಗಿಂತ ಹೆಚ್ಚು ಹಣ ಸಿಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪಿಪಿಎಫ್ ಸ್ಕೀಮ್ (PPF) ಬಹಳ ಜನರಿಗೆ ಉಪಯುಕ್ತ ಹೂಡಿಕೆಯಾಗಿ ಪರಿಣಮಿಸಿದೆ. ಸರ್ಕಾರದಿಂದ ಬೆಂಬಲಿತವಾಗಿರುವ, ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಲಭ್ಯ ಇರುವ ಈ ಯೋಜನೆ ಸುರಕ್ಷಿತ ಹೂಡಿಕೆ ಎನಿಸಿದೆ. ತೆರಿಗೆ ಲಾಭವನ್ನೂ ಇದು ಕೊಡುತ್ತದೆ. ದೀರ್ಘಾವಧಿ ಹೂಡಿಕೆ (Long term investment) ಮಾಡುವವರಿಗೆ ಮತ್ತು ಹೆಚ್ಚು ರಿಸ್ಕ್ ಪಡೆಯಲು ಬಯಸದವರಿಗೆ ಸೂಕ್ತವಾಗಿದೆ.
ಪಿಪಿಎಫ್ನಲ್ಲಿ ಹೇಗೆ ಹೂಡಿಕೆ?
ಪಿಪಿಎಫ್ ಅನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತದೆ. ಬ್ಯಾಂಕು ಮತ್ತು ಪೋಸ್ಟ್ ಆಫೀಸ್ಗಳಲ್ಲಿ ಪಿಪಿಎಫ್ ಅಕೌಂಟ್ ತೆರೆಯಬಹುದು. ಇದು 15 ವರ್ಷದ ಲಾಕ್ ಇನ್ ಅವಧಿ ಇರುವ ಸ್ಕೀಮ್. ಕನಿಷ್ಠ 15 ವರ್ಷ ಹೂಡಿಕೆ ಮಾಡಬೇಕು. 15 ವರ್ಷದ ಬಳಿಕ ಹಣ ವಿತ್ಡ್ರಾ ಮಾಡಬಹುದು. ಹೂಡಿಕೆ ಮುಂದುವರಿಸುವ ಅವಕಾಶವೂ ಇರುತ್ತದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು
ಪಿಪಿಎಫ್ನಲ್ಲಿ ಎಷ್ಟು ಹೂಡಿಕೆ?
ಪಿಪಿಎಫ್ನಲ್ಲಿ ವರ್ಷಕ್ಕೆ 500 ರೂನಿಂದ 1,50,000 ರೂವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ವರ್ಷದಲ್ಲಿ ಒಮ್ಮೆಗೇ ಬೇಕಾದರೂ ಹೂಡಿಕೆ ಮಾಡಬಹುದು, ಅಥವಾ 12 ಬಾರಿ ಪಾವತಿ ಮಾಡಬಹುದು. ಆದರೆ, ಹಣಕಾಸು ವರ್ಷದಲ್ಲಿ ಒಟ್ಟು ಹೂಡಿಕೆ 1.5 ಲಕ್ಷ ಮೀರುವಂತಿಲ್ಲ.
ವರ್ಷದಲ್ಲಿ 500 ರೂ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್?
ನೀವು ಪಿಪಿಎಫ್ನಲ್ಲಿ ವರ್ಷಕ್ಕೆ ಕೇವಲ 500 ರೂ ಮಾತ್ರವೇ ಪಾವತಿಸಿಕೊಂಡು ಹೋಗುತ್ತೀರೆಂದರೆ, 15 ವರ್ಷದಲ್ಲಿ 7,500 ರೂ ಕಟ್ಟುತ್ತೀರಿ. ಇದರಿಂದ ಸಿಗುವ ರಿಟರ್ನ್ 13,561 ರೂ.
ವರ್ಷಕ್ಕೆ 1.5 ಲಕ್ಷ ರೂ ಹೂಡಿಕೆ ಮಾಡಿದರೆ?
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿ ನೀವು ವರ್ಷಕ್ಕೆ 1.5 ಲಕ್ಷ ರೂನಂತೆ 15 ವರ್ಷ ಹೂಡಿಕೆ ಮಾಡಿದರೆ 40,68,209 ರೂ ಸಿಗುತ್ತದೆ. ಈ ಸ್ಕೀಮ್ನಲ್ಲಿ 15 ವರ್ಷಕ್ಕೆ ಮೆಚ್ಯೂರಿಟಿ ಆದ ಬಳಿಕ ಬೇಕೆಂದರೆ ಹೂಡಿಕೆ ಮುಂದುವರಿಸಬಹುದು. ಪ್ರತಿ 5 ವರ್ಷಕ್ಕೊಮ್ಮೆ ವಿಸ್ತರಿಸುತ್ತಾ ಹೋಗಬಹುದು. ಈ ರೀತಿ ನಿಮ್ಮ ಹೂಡಿಕೆ ಅವಧಿ 50 ವರ್ಷದವರೆಗೂ ಮುಂದುವರಿದಲ್ಲಿ ಹೂಡಿಕೆ ಮೌಲ್ಯ 6.75 ಕೋಟಿ ರೂ ದಾಟಿರುತ್ತದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?
ಇಲ್ಲಿ ಮೇಲೆ ತಿಳಿಸಿದ ರಿಟರ್ನ್ಗಳು ಈಗಿನ ಪಿಪಿಎಫ್ ಬಡ್ಡಿದರ ಆಧರಿಸಿ ಲೆಕ್ಕ ಮಾಡಲಾಗಿದೆ. ಸದ್ಯ ಪಿಪಿಎಫ್ಗೆ ಶೇ. 7.1 ಬಡ್ಡಿ ದರ ನಿಗದಿ ಮಾಡಲಾಗಿದೆ. ಪ್ರತೀ ತ್ರೈಮಾಸಿಕದಲ್ಲೂ ಇದರ ಬಡ್ಡಿ ಪರಿಷ್ಕರಣೆ ನಡೆಯುತ್ತಿರುತ್ತದೆ. ಬಡ್ಡಿ ಹೆಚ್ಚು ಮಾಡಿದರೆ ಹೆಚ್ಚು ರಿಟರ್ನ್ ಸಿಗುತ್ತದೆ. ಬಡ್ಡಿ ಕಡಿಮೆಗೊಳಿಸಿದರೆ ಸಿಗುವ ರಿಟರ್ನ್ ಕಡಿಮೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




