Forex: ಮಾರ್ಚ್ 15ಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪಿಸಿದ ಭಾರತದ ಫಾರೆಕ್ಸ್ ಮೀಸಲು ಸಂಪತ್ತು

India's Foreign Exchange Reserves on March 15th: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಮಾರ್ಚ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ 642.492 ಬಿಲಿಯನ್ ಡಾಲರ್​ಗೆ ಏರಿದೆ. 2021ರ ಅಕ್ಟೋಬರ್​ನಲ್ಲಿ ವಿದೇಶೀ ವಿನಿಮಯ ಮೀಸಲು ಸಂಪತ್ತು 645 ಬಿಲಿಯನ್ ಡಾಲರ್​ನಷ್ಟಿತ್ತು. ಅದು ಈವರೆಗಿನ ಗರಿಷ್ಠ ನಿಧಿ ಎನಿಸಿದೆ. ಇದೀಗ ಆ ಮಟ್ಟದ ಸಮೀಪಕ್ಕೆ ಹೋಗಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ಬಿಟ್ಟರೆ ಭಾರತವೇ ಅತಿಹೆಚ್ಚು ಫಾರೆಕ್ಸ್ ಮೀಸಲು ಸಂಪತ್ತು ಹೊದಿರುವುದು.

Forex: ಮಾರ್ಚ್ 15ಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪಿಸಿದ ಭಾರತದ ಫಾರೆಕ್ಸ್ ಮೀಸಲು ಸಂಪತ್ತು
ಆರ್​​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2024 | 10:18 AM

ನವದೆಹಲಿ, ಮಾರ್ಚ್ 24: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) ಕಳೆದ ಕೆಲ ವಾರಗಳಿಂದ ಕಾಣುತ್ತಿರುವ ಏರಿಕೆ ಮುಂದುವರಿದಿದೆ. ಮೊನ್ನೆ ಆರ್​​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ 642.492 ಬಿಲಿಯನ್ ಡಾಲರ್​ಗೆ ಇದು. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 645 ಬಿಲಿಯನ್ ಡಾಲರ್​ಗೆ ಹತ್ತಿರ ಇದೆ. ಮಾರ್ಚ್ 15ರಂದು ಅಂತ್ಯಗೊಂಡ ವಾರದಲ್ಲಿ 6.396 ಬಿಲಿಯನ್ ಡಾಲರ್​ನಷ್ಟು ನಿಧಿ ಹೆಚ್ಚಳವಾಗಿದೆ. ಅದಕ್ಕೆ ಹಿಂದಿನ ವಾರದಲ್ಲಿ 10.47 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿತ್ತು. ಸತತ ನಾಲ್ಕೈದು ವಾರಗಳ ಫಾರೆಕ್ಸ್ ಸಂಪತ್ತು ಹೆಚ್ಚಳ ಗಳಿಸುತ್ತಾ ಬಂದಿದೆ.

ಆರ್​​ಬಿಐ ದತ್ತಾಂಶದ ಪ್ರಕಾರ ವಿದೇಶೀ ವಿನಿಮಯ ಮೀಸಲು ನಿಧಿ ಪೈಕಿ ಪ್ರಮುಖ ಭಾಗವಾಗಿರುವ ಕರೆನ್ಸಿ ಆಸ್ತಿಯೇ 6.034 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಗೋಲ್ಡ್ ರಿಸರ್ವ್ಸ್ 425 ಮಿಲಿಯನ್ ಡಾಲರ್, ಎಸ್​ಡಿಆರ್ 65 ಮಿಲಿಯನ್ ಡಾಲರ್ ಮತ್ತು ಐಎಂಎಫ್​ನಲ್ಲಿನ ನಿಧಿ 129 ಮಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿರುವುದು ತಿಳಿದುಬಂದಿದೆ.

ಇಲ್ಲಿ ಫಾರೀನ್ ಕರೆನ್ಸಿ ಅಸೆಟ್​ನಲ್ಲಿ ಭಾರತದ ಫಾರೆಕ್ಸ್ ಮೀಸಲು ಸಂಪತ್ತಿನಲ್ಲಿರುವ ಯೂರೋ, ಪೌಂಡ್, ಯೆನ್ ಇತ್ಯಾದಿ ಡಾಲರೇತರ ಕರೆನ್ಸಿಗಳ ಮೌಲ್ಯವೂ ಒಳಗೊಂಡಿರುತ್ತದೆ.

ಇದನ್ನೂ ಓದಿ: 50 ಸಾವಿರ ರೂ.ಗಿಂತ ಹೆಚ್ಚಿನ ಹಣ ಠೇವಣಿ, ವಿತ್​ಡ್ರಾ ಮಾಡುವುದಿದ್ದರೆ ಗಮನಿಸಿ

ಎಸ್​ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಎಂಬುದು ಅಂತರರಾಷ್ಟ್ರೀಯ ಮೀಸಲು ಸಂಪತ್ತು. ಅದು ಕರೆನ್ಸಿ ಅಲ್ಲವಾದರೂ ವಿಶ್ವದ ಪ್ರಮುಖ ಐದು ಕರೆನ್ಸಿಗಳಾದ ಅಮೆರಿಕನ್ ಡಾಲರ್, ಯೂರೋ, ಚೀನಾದ ರೆನ್​ಮಿನ್ಬಿ, ಜಪಾನ್​ನ ಯೆನ್, ಬ್ರಿಟನ್​ನ ಪೌಂಡ್ ಸ್ಟರ್ಲಿಂಗ್ ಇವುಗಳ ಒಂದು ಗುಂಪಿನ ಮೌಲ್ಯವಾಗಿರುತ್ತದೆ.

ಭಾರತದ ಫಾರೆಕ್ಸ್ ಮೀಸಲು ನಿಧಿ ಮಾರ್ಚ್ 15ಕ್ಕೆ

ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 642.492 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 568.386 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 51.14 ಬಿಲಿಯನ್ ಡಾಲರ್
  • ಎಸ್​ಡಿಆರ್: 18.276 ಬಿಲಿಯನ್ ಡಾಲರ್
  • ಐಎಂಎಫ್​ನೊಂದಿಗಿನ ಮೀಸಲು: 4.689 ಬಿಲಿಯನ್ ಡಾಲರ್

ಒಂದು ದೇಶವು ಎಷ್ಟು ವಿದೇಶೀ ಕರೆನ್ಸಿಗಳನ್ನು ಹೊಂದಿದೆ ಎಂಬುದು ಫಾರೆಕ್ಸ್ ರಿಸರ್ವ್ಸ್ ಆಗುತ್ತದೆ. ಇದರ ಜೊತೆಗೆ ಚಿನ್ನ, ಎಸ್​ಡಿಆರ್ ಇತ್ಯಾದಿ ಆಸ್ತಿಗಳನ್ನೂ ಇದರಲ್ಲಿ ಒಳಗೊಳ್ಳಲಾಗಿರಬಹುದು. ಆದರೆ, ಸಾಮಾನ್ಯವಾಗಿ ವಿದೇಶೀ ಕರೆನ್ಸಿ ಆಸ್ತಿ ಫಾರೆಕ್ಸ್ ಮೀಸಲು ಸಂಪತ್ತಿನಲ್ಲಿ ಪ್ರಮುಖ ಭಾಗವಾಗಿರುತ್ತದೆ. ಅದರಲ್ಲೂ ಹೆಚ್ಚು ಟ್ರೇಡಿಂಗ್ ಮಾಡುವ ವಿದೇಶಗಳ ಕರೆನ್ಸಿ ಸಂಗ್ರಹ ಇದು. ಆ ದೇಶದ ಕರೆನ್ಸಿ ಮೌಲ್ಯವನ್ನು ರಕ್ಷಿಸಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ಹಣದುಬ್ಬರದ ತಲೆನೋವು ಬಿಟ್ಟರೆ, ಭಾರತದ ಆರ್ಥಿಕತೆಯ ಸದ್ಯೋಭವಿಷ್ಯ ಉತ್ತಮ: ಸರ್ಕಾರದ ವರದಿ

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ಗೆ ಹೋಗಿತ್ತು. ಈಗ ಅದಕ್ಕೆ ಸಮೀಪಕ್ಕೆ ಹೋಗಿದೆ. ಆದರೆ, ಇದೇ ವೇಳೆ ರುಪಾಯಿ ಕರೆನ್ಸಿ ಮೌಲ್ಯ ಕುಸಿಯುತ್ತಲೇ ಇದೆ. ಒಂದು ಯುಎಸ್ ಡಾಲರ್​ಗೆ ರುಪಾಯಿ ಮೌಲ್ಯ 83.59 ಆಗಿದೆ. ಮೊನ್ನೆ ಅದು 84ರ ಸಮೀಪಕ್ಕೆ ಕುಸಿದುಹೋಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ