ಭಾರತದಲ್ಲಿ ಎಐ ಯೋಜನೆಗಳಿಗೆ ಭವಿಷ್ಯ ಇಲ್ಲ: ಮಾಜಿ ಗೂಗಲ್ ಉದ್ಯೋಗಿ ಹತಾಶೆಯಿಂದ ಹೇಳಿದ್ದು ಯಾಕೆ ಗೊತ್ತಾ?

Ananas Labs Founder Gaurav Aggarwal on his AI journey: ಭಾರತದಲ್ಲಿ ಎಐ ಸ್ಟಾರ್ಟಪ್​ಗಳು ಸಾಕಷ್ಟು ಇವೆಯಾದರೂ ಡೀಪ್ ಟೆಕ್​ನ ಕಂಪನಿಗಳು ಬಹಳ ಕಡಿಮೆ. ಹೆಚ್ಚಿನ ಸ್ಟಾರ್ಟಪ್​ಗಳು ಎಲ್​ಎಲ್​ಎಂಗಳನ್ನು ನಕಲು ಮಾಡಿ ಹೊಸ ಅಪ್ಲಿಕೇಶನ್ ರೂಪಿಸುವಂಥವು. ಇಂಥ ಕಂಪನಿಗಳಿಗೆ ಬಂಡವಾಳ ಹರಿದುಹೋಗುತ್ತದೆ. ಸ್ವಂತವಾಗಿ ಎಐ ಅಭಿವೃದ್ದಿಪಡಿಸುವ ತಮ್ಮ ಅನಾನಸ್ ಲ್ಯಾಬ್​ನಂಥ ಕಂಪನಿಗಳಿಗೆ ಬಂಡವಾಳ ಸಿಗುತ್ತಿಲ್ಲ ಎಂದು ಅದರ ಸಂಸ್ಥಾಪಕ ಗೌರವ್ ಅಗರ್ವಾಲ್ ವಿಷಾದಿಸಿದ್ದಾರೆ.

ಭಾರತದಲ್ಲಿ ಎಐ ಯೋಜನೆಗಳಿಗೆ ಭವಿಷ್ಯ ಇಲ್ಲ: ಮಾಜಿ ಗೂಗಲ್ ಉದ್ಯೋಗಿ ಹತಾಶೆಯಿಂದ ಹೇಳಿದ್ದು ಯಾಕೆ ಗೊತ್ತಾ?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2024 | 1:31 PM

ನವದೆಹಲಿ, ಮಾರ್ಚ್ 24: ಭಾರತದಲ್ಲಿ ಸಾಕಷ್ಟು ಸ್ಟಾರ್ಟಪ್​ಗಳಿವೆ. ವಿಶ್ವದಲ್ಲಿ ಅತಿಹೆಚ್ಚು ಸ್ಟಾರ್ಟಪ್​ಗಳು ಆರಂಭವಾಗುವ ದೇಶಗಳ ಸಾಲಿನಲ್ಲಿ ಭಾರತವನ್ನೂ ಸೇರಿಸಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲೂ (Artificial Intelligence) ಭಾರತದ ಹಲವು ಸ್ಟಾರ್ಟಪ್​ಗಳು ಶುರುವಾಗಿವೆ. ಭಾರತದಲ್ಲಿ ಓಪನ್​ಎಐ ರೀತಿ ಒಂದು ಕಂಪನಿ ಸ್ಥಾಪನೆಯಾಗುವುದು ಬಹಳ ಕಷ್ಟ ಎಂದು ಹಿಂದೊಮ್ಮೆ ಆ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಹೇಳಿದ್ದು ಹಲವರಿಗೆ ನೆನಪಿರಬಹುದು. ಈಗ ಭಾರತದಲ್ಲಿ ಹೇಗೆ ಹಲವು ಎಐ ಸ್ಟಾರ್ಟಪ್​ಗಳು ಬರುತ್ತಿವೆ ಎಂದೂ ಅಚ್ಚರಿ ಆಗುತ್ತಿರಬಹುದು. ಸ್ಯಾಮ್ ಆಲ್ಟ್​ಮ್ಯಾನ್ ಹೇಳಿದ ಅಭಿಪ್ರಾಯಕ್ಕೆ ಪೂರಕವೆಂಬಂತೆ ಗೂಗಲ್​ನ ಮಾಜಿ ಉದ್ಯೋಗಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗೌರವ್ ಅಗರ್ವಾಲ್ ಎಂಬುವವರ ಪ್ರಕಾರ ಭಾರತದಲ್ಲಿ ಎಐ ತಂತ್ರಜ್ಞಾನದ ಬೆಳವಣಿಗೆಗೆ ಉಜ್ವಲ ಭವಿಷ್ಯ ಬಹಳ ಕಷ್ಟವಂತೆ. ಇವರು ನೀಡುವ ಕಾರಣ ನಿಜಕ್ಕೂ ಚಿಂತನೆಗೆ ಹಚ್ಚುತ್ತದೆ. ಭಾರತದ ಸರ್ಕಾರ ಮತ್ತು ಹೂಡಿಕೆದಾರರಿಗೆ ಕಣ್ತೆರೆಯಲು ಅವಕಾಶ ಕೊಡಬಹುದು.

ಸ್ಟಾರ್ಟಪ್ ತೆರೆದು ಮುಚ್ಚುವ ಸ್ಥಿತಿಗೆ ಬಂದ ಗೌರವ್ ಅಗರ್ವಾಲ್

ಗೌರವ್ ಅಗರ್ವಾಲ್ ಗೂಗಲ್​ನ ಮಾಜಿ ಉದ್ಯೋಗಿ. ಭಾರತದಲ್ಲಿ ಅನಾನಸ್ ಲ್ಯಾಬ್ಸ್ ಎಂಬ ಸ್ವಂತ ಎಐ ಕಂಪನಿ ಸ್ಥಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭಾರತದಲ್ಲಿನ ವಾಸ್ತವಿಕ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಬಹಳ ಮಹತ್ವಾಕಾಂಕ್ಷೆ ಇಟ್ಟುಕೊಂಡು ತೆರೆದಿದ್ದ ತಮ್ಮ ಕಂಪನಿಯನ್ನು ಮುಚ್ಚುವ ಹತಾಶೆಗೆ ಅವರು ಬಂದಿದ್ದಾರೆ.

ಅವರ ಅನಾನಸ್ ಲ್ಯಾಬ್ಸ್ ಕಂಪನಿಗೆ ಬಂಡವಾಳ ಹಾಕಲು ಯಾರೂ ಮುಂದೆ ಬರುತ್ತಿಲ್ಲವಂತೆ. ಇಡೀ ವಿಶ್ವವೇ ತಿರುಗಿನೋಡುವಂತೆ ಎಐ ಕಂಪನಿಯನ್ನು ಬೆಳೆಸಬೇಕೆಂದು ಆಕಾಂಕ್ಷೆ ಇಟ್ಟುಕೊಂಡಿರುವ ಅಗರ್ವಾಲ್​ಗೆ ಈಗ ದಾರಿ ತೋಚದಂತಾಗಿದೆ. ವೆಂಚರ್ ಕ್ಯಾಪಿಟಲ್ ಸಂಸ್ಥೆಗಳನ್ನು ಕಾಡಿ ಬೇಡಿದರೂ ಬಂಡವಾಳ ಹುಟ್ಟುತ್ತಿಲ್ಲ.

ಇದನ್ನೂ ಓದಿ: 63 ಜನರಿದ್ದ ಕೂಡು ಕುಟುಂಬದಲ್ಲಿ ಜನಿಸಿದ ಉದಯ್ ಕೋಟಕ್​ಗೆ, ಇಡೀ ಕಂಪನಿ ಒಂದು ಜಾಯಿಂಟ್ ಫ್ಯಾಮಿಲಿ ಇದ್ದಂತೆ

ಬಂಡವಾಳ ತುಂಬಿದೆ, ಆದರೆ ಹರಿದುಹೋಗುತ್ತಿರುವುದು ಎಲ್ಲಿಗೆ?

ಭಾರತದಲ್ಲಿ ಹಲವು ಎಐ ಸ್ಟಾರ್ಟಪ್​ಗಳು ಬರುತ್ತಿವೆ. ಅವುಗಳಿಗೆ ಬಂಡವಾಳ ಸಿಗುತ್ತಿದೆ. ಆದರೆ, ಗೌರವ್ ಅಗರ್ವಾಲ್ ಅವರ ಅನಾನಸ್ ಲ್ಯಾಬ್ಸ್​ಗೆ ಯಾಕೆ ಹಣ ಸಿಗುತ್ತಿಲ್ಲ? ಇದಕ್ಕೆ ಅವರು ಕುತೂಹಲ ಮೂಡಿಸುವ ಕಾರಣ ನೀಡುತ್ತಾರೆ.

ಭಾರತದಲ್ಲಿರುವ ಎಐ ಸ್ಟಾರ್ಟಪ್​ಗಳು ಅಮೆರಿಕದ ಕಂಪನಿಗಳು ತಯಾರಿಸುವ ಎಲ್​ಎಲ್​ಎಂಗಳ ನಕಲು ರೂಪಗಳೇ ಆಗಿವೆ. ಆಳವಾದ ಎಐ ಟೆಕ್ನಾಲಜಿ ಅಭಿವೃದ್ದಿಪಡಿಸುವ ಯಾವ ಕಂಪನಿಯೂ ಇಲ್ಲ. ಎಐ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಪಶ್ಚಿಮ ದೇಶಗಳು, ಚೀನಾ ಅಥವಾ ಯುಎಇಯಿಂದಲೇ ಬರುತ್ತಿರುವುದು. ಭಾರತದಿಂದ ಯಾವ ಆವಿಷ್ಕಾರವೂ ಇಲ್ಲ. ಇಲ್ಲಿರುವ ಎಐ ಸ್ಟಾರ್ಟಪ್​ಗಳಿಗೆ ಡೀಪ್ ಎಐ ಸಾಮರ್ಥ್ಯವಾಗಲೀ, ಜ್ಞಾನವಾಗಲೀ ಇಲ್ಲ. ಆದರೂ ಕೂಡ ಈ ಕಂಪನಿಗಳಿಗೆ ಬಂಡವಾಳ ಹಾಕಲು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಮುಂದೆ ಹೋಗುತ್ತವೆ. ಇವರಿಗೆ ಡೀಪ್ ಟೆಕ್ ಏನೆಂದು ಸರಿಯಾಗಿ ಅರ್ಥವಾಗುವುದಿಲ್ಲ ಎಂದು ಗೌರವ್ ಅಗರ್ವಾಲ್ ವಿಷಾದಿಸುತ್ತಾರೆ.

ಭಾರತದಲ್ಲಿ ಡೀಪ್ ಟೆಕ್ ಕಂಪನಿಗಳು ಇವೆಯಾದರೂ ಅವುಗಳು ಬಿಸಿನೆಸ್ ಆವಿಷ್ಕಾರಗಳಿಗೆ ಸೀಮಿತವಾಗಿವೆ. ಓಪನ್​ಎಐ ಅಥವಾ ಡೀಪ್​ಮೈಂಡ್​​ನಂಥ ಕಂಪನಿಗಳು ಯಾವುವೂ ಇಲ್ಲ. ಭಾರತಲ್ಲಿರುವ ಹೆಚ್ಚಿನ ಎಐ ಕಂಪನಿಗಳು ಓಪನ್​ಎಐನ ಎಪಿಐಗಳನ್ನು ಅನುಕರಿಸುತ್ತಾ, ಸುಂದರವಾದ ಆ್ಯಪ್​ಗಳನ್ನು ತಯಾರಿಸುತ್ತಿವೆಯಷ್ಟೇ. ಭಾರತದಲ್ಲಿ ಕೆಲವರಿಗಷ್ಟೇ ಮಾಡಲ್ ಟ್ರೈನ್ ಮಾಡುವ ಜ್ಞಾನ ತಿಳಿದಿರುವುದು ಎನ್ನುತ್ತಾರೆ ಅನಾನಸ್ ಲ್ಯಾಬ್ಸ್ ಸಂಸ್ಥಾಪಕರು.

ಇದನ್ನೂ ಓದಿ: ಅಮೆರಿಕದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ಚೀಫ್ ರಾಜೀನಾಮೆ

ಪೆಟ್ರೋಲ್​ನಂತೆ ಎಐ ಅನ್ನೂ ಭಾರತ ಆಮದು ಮಾಡಿಕೊಳ್ಳಬೇಕಾದೀತು

ಗೌರವ್ ಅಗರ್ವಾಲ್ ಅವರ ಅನಾನಸ್ ಲ್ಯಾಬ್ಸ್ ಸಂಸ್ಥೆ ಬಹಳ ಉತ್ತಮವಾದ ಮಲ್ಟಿಲಿಂಗ್ವಲ್ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಈಗಿರುವ ಹೆಚ್ಚಿನ ಎಲ್​ಎಲ್​ಎಂಗಳು ಇಂಗ್ಲೀಷ್​ನ ಡಾಟಾಸೆಟ್​ಗಳಿಗೆ ಟ್ರೈನ್ ಆಗಿರುವಂಥವು. ಭಾರತೀಯ ಭಾಷೆಗಳಲ್ಲಿ ಇದನ್ನು ಟ್ರೈನ್ ಮಾಡಬೇಕೆಂದರೆ ದುಬಾರಿ ಆಗುತ್ತದೆ. ಅನಾನಸ್ ಲ್ಯಾಬ್ಸ್ ಈ ಕೊರತೆ ನೀಗಿಸುವುದಾಗಿ ಹೇಳುತ್ತದೆ.

‘ಭಾರತದಲ್ಲಿ ನೂರು ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ನಾವು ಬಳಸುವ ಪ್ರತಿಯೊಂದು ಕೂಡ ಎಐನಿಂದ ಪ್ರಭಾವಿತಗೊಂಡಿರುತ್ತದೆ. ನಮ್ಮದೇ ಸ್ವಂತ ಎಐ ಮಾಡಲ್ ನಿರ್ಮಿಸುವ ಸಾಮರ್ಥ್ಯವನ್ನ ನಾವು ಬೆಳೆಸಿಕೊಳ್ಳದೇ ಹೋದರೆ ಬೇರೆ ದೇಶಗಳಿಗೆ ಹಣ ಕೊಟ್ಟು ಆ ಸೌಲಭ್ಯ ಪಡೆಯಬೇಕಾಗುತ್ತದೆ. ಮುಂದಿನ ಐದತ್ತು ವರ್ಷದಲ್ಲಿ ಪೆಟ್ರೋಲ್ ಆಮದು ಮಾಡಿಕೊಂಡಂತೆ ಎಐ ಅನ್ನೂ ಆಮದು ಮಾಡಿಕೊಳ್ಳಬೇಕಾಗುತ್ತದೆ,’ ಎಂದು ಗೌರವ್ ಅಗರ್ವಾಲ್ ಎಚ್ಚರಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ