Paytm IPO: ಪೇಟಿಎಂ ಐಪಿಒಗೆ ತಡೆ ನೀಡುವಂತೆ ಮಾಜಿ ನಿರ್ದೇಶಕರಿಂದ ಒತ್ತಾಯ; ಒತ್ತಡದಲ್ಲಿ ಸಿಲುಕಿಕೊಂಡ ಕಂಪೆನಿ

| Updated By: Srinivas Mata

Updated on: Aug 12, 2021 | 11:31 PM

ಪೇಟಿಎಂ ಐಪಿಒಗೆ ತಡೆ ನೀಡಬೇಕು ಎಂದು ಕೋರಿ ಕಂಪೆನಿಯ ಮಾಜಿ ನಿರ್ದೇಶಕರೊಬ್ಬರು ಮನವಿ ಮಾಡಿದ್ದಾರೆ. ಏಕೆ ಹೀಗೆ ಎಂಬುದರ ವಿವರ ಇಲ್ಲಿದೆ.

Paytm IPO: ಪೇಟಿಎಂ ಐಪಿಒಗೆ ತಡೆ ನೀಡುವಂತೆ ಮಾಜಿ ನಿರ್ದೇಶಕರಿಂದ ಒತ್ತಾಯ; ಒತ್ತಡದಲ್ಲಿ ಸಿಲುಕಿಕೊಂಡ ಕಂಪೆನಿ
ಪ್ರಾತಿನಿಧಿಕ ಚಿತ್ರ
Follow us on

ಪೇಟಿಎಂನ 2.2 ಬಿಲಿಯನ್ ಅಮೆರಿಕನ್ ಡಾಲರ್ ಐಪಿಒಗೆ ದೊಡ್ಡ ತಡೆ ಎದುರಾಗಿದೆ. 71 ವರ್ಷ ವಯಸ್ಸಿನ ಕಂಪೆನಿಯ ಮಾಜಿ ನಿರ್ದೇಶಕರೊಬ್ಬರು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗೆ ಒತ್ತಾಯ ಮಾಡಿ, ಈ ಐಪಿಒಗೆ ತಡೆ ಕೋರಿದ್ದಾರೆ. “ನಾನು ಪೇಟಿಎಂನ ಸಹ ಸಂಸ್ಥಾಪಕ. ಎರಡು ದಶಕದ ಹಿಂದೆ 27,500 ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದೆ. ಆದರೆ ಅದಕ್ಕೆ ಪ್ರತಿಯಾಗಿ ಯಾವುದೇ ಷೇರು ಪಡೆದಿಲ್ಲ,” ಎಂಬುದು ಆರೋಪ. ಈ ಬಗ್ಗೆ ವರದಿ ಮಾಡಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ, ಕಾನೂನು ದಾಖಲಾತಿಗಳನ್ನು ನೋಡಿರುವುದಾಗಿ ತಿಳಿಸಿದೆ. ಆದರೆ ಪೇಟಿಎಂ ಇದಕ್ಕೆ ನೀಡಿದ ಉತ್ತರ ಏನೆಂದರೆ, ಅಶೋಕ್​ ಕುಮಾರ್​ ಸಕ್ಸೇನಾ ಮಾಡಿರುವ ಕ್ಲೇಮ್ ಹಾಗೂ ನವದೆಹಲಿಯ ಪೊಲೀಸ್ ಠಾಣೆಯಲ್ಲಿ ನೀಡಿರುವ ವಂಚನೆಯ ದೂರು ಸಂಸ್ಥೆಯನ್ನು ಶೋಷಿಸುವ ಕಿಡಿಗೇಡಿ ಪ್ರಯತ್ನ ಎಂದಿದೆ. ಆದರೂ ನಿಯಂತ್ರಕರ ಅನುಮತಿಗಾಗಿ ಪೇಟಿಎಂನಿಂದ ಜುಲೈನಲ್ಲಿ ಸಲ್ಲಿಸಲಾದ ಐಪಿಒ ಪ್ರಾಸ್ಪೆಕ್ಟಸ್​ಗೆ ಈ ವ್ಯಾಜ್ಯ “ಕ್ರಿಮಿನಲ್ ಮೊಕದ್ದಮೆ” ಅಡಿಯಲ್ಲಿ ಬರುತ್ತದೆ.

ಆದರೆ, ತಮ್ಮ ಮೇಲಿನ ಶೋಷಣೆ ಆರೋಪವನ್ನು ನಿರಾಕರಿಸಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿ, ಪೇಟಿಎಂ ಹೈ ಪ್ರೊಫೈಲ್ ಸ್ಥಾನದಲ್ಲಿ ಇದ್ದು, ತನ್ನಂಥ ಖಾಸಗಿ ವ್ಯಕ್ತಿಗಳು ಕಂಪೆನಿಯನ್ನು ಶೋಷಿಸುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ. ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾದ ಬಳಿ ತೆರಳಿರುವ ಸಕ್ಸೇನಾ, ಐಪಿಒ ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ಒಂದು ವೇಳೆ ಕ್ಲೇಮ್ ನಿಜ ಎಂದು ಸಾಬೀತಾದಲ್ಲಿ ಹೂಡಿಕೆದಾರರು ಹಣವನ್ನು ಕಳೆದುಕೊಳ್ಳುತ್ತಾರೆ, ಎಂದು ಈ ಹಿಂದೆ ವರದಿ ಆಗದ ದೂರನ್ನು ಗಮನಿಸಿ, ರಾಯಿಟರ್ಸ್ ಸುದ್ದಿ ಸಂಸ್ಥೆ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸೆಬಿ ನಿರಾಕರಿಸಿದೆ. ಷೇರುದಾರರ ಸಲಹಾ ಸಂಸ್ಥೆ InGovernಗೆ ಸೇರಿದ ಶ್ರೀರಾಮ್ ಸುಬ್ರಮಣಿಯನ್, ಈಗಿನ ತಿಕ್ಕಾಟದಿಂದ ನಿಯಂತ್ರಕರ ವಿಚಾರಣೆಗೆ ಮತ್ತು ಪೇಟಿಎಂ ಐಪಿಒ ಮಂಜೂರಾತಿ ವಿಳಂಬಕ್ಕೆ ಕಾರಣ ಆಗಬಹುದು. ಅಂದಹಾಗೆ ಈ ಐಪಿಒ ಮೌಲ್ಯ 25 ಬಿಲಿಯನ್ ಅಮೆರಿಕನ್ ಡಾಲರ್ ತನಕ ಆಗಲಿದೆ. ನಿಯಂತ್ರಕರು ಏನೇ ನಿರ್ಧಾರ ಕೈಗೊಳ್ಳಬಹುದು. ಈ ವ್ಯಾಜ್ಯವು ಕಾನೂನು ವಿಚಾರವಾಗಿ ತಲೆನೋವಾಗಿ ಪರಿಣಮಿಸಿದೆ. ಚೀನಾದ ಅಲಿಬಾಬ ಮತ್ತು ಜಪಾನ್​ನ ಸಾಫ್ಟ್​ಬ್ಯಾಂಕ್​ ಕೂಡ ಹೂಡಿಕೆ ಮಾಡಿವೆ.

ಈ ವ್ಯಾಜ್ಯದ ಮುಖ್ಯ ಭಾಗವಾಗಿ ಒಂದು ಪುಟದ ದಾಖಲಾತಿಗೆ ಸಕ್ಸೇನಾ ಮತ್ತು ಪೇಟಿಎಂನ ಬಿಲಿಯನೇರ್ ಸಿಇಒ ವಿಜಯ್ ಶೇಖರ್ ಶರ್ಮಾ ಮಧ್ಯೆ 2001ರಲ್ಲಿ ಸಹಿ ಆಗಿದೆ. ಅದರಲ್ಲಿ ರಾಯಿಟರ್ಸ್ ನೋಡಿರುವ ಪ್ರಕಾರ, ಸಕ್ಸೇನಾಗೆ ಪೇಟಿಎಂನ ಮಾತೃ ಸಂಸ್ಥೆ One97 ಕಮ್ಯುನಿಕೇಷನ್ಸ್​ನಲ್ಲಿ ಶೇ 55ರಷ್ಟು ಈಕ್ವಿಟಿ ಷೇರು ಬರುತ್ತದೆ. ಬಾಕಿ ಶರ್ಮಾಗೆ ಹೋಗುತ್ತದೆ. ಪೇಟಿಎಂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಶರ್ಮಾ ಕೂಡ ಯಾವ ಪ್ರತಿಕ್ರಿಯೆ ನೀಡಲು ಒಪ್ಪಿಲ್ಲ.

ಇದನ್ನೂ ಓದಿ: Paytm IPO: ಪೇಟಿಎಂ ಆಡಳಿತ ಮಂಡಳಿಯಲ್ಲಿ ಚೀನೀ ನಾಗರಿಕರಿರುವ ಹುದ್ದೆಗಳಿಗೆ ಭಾರತೀಯರು, ಅಮೆರಿಕನ್ನರ ನೇಮಕ

(Former Director Urges India Market Regulators To Stall Paytm IPO Know The Reason Why)