Foxconn: ಕರ್ನಾಟಕದಲ್ಲಿ ಫಾಕ್ಸ್ಕಾನ್ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು
Foxconn Big Investment in Karnataka: ಜಾಗತಿಕ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್ಕಾನ್ ಕರ್ನಾಟಕದಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. 350 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಐಫೋನ್ ಕೇಸಿಂಗ್ ಭಾಗ ತಯಾರಿಸುವ ಘಟಕ ಹಾಗೂ 250 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಚಿಪ್ ಮೇಕಿಂಗ್ ಟೂಲ್ ತಯಾರಿಸುವ ಘಟಕ ಸ್ಥಾಪನೆಯಾಗಲಿದೆ.
ಬೆಂಗಳೂರು, ಆಗಸ್ಟ್ 2: ಆ್ಯಪಲ್ ಸಂಸ್ಥೆಗೆ ಅತಿಹೆಚ್ಚು ಐಫೋನ್ ತಯಾರಿಸಿಕೊಡುವ ಫಾಕ್ಸ್ಕಾನ್ ಸಂಸ್ಥೆ (Foxconn) ಕರ್ನಾಟಕದಲ್ಲಿ ಇನ್ನೂ ಎರಡು ಘಟಕಗಳನ್ನು ಸ್ಥಾಪಿಸುತ್ತಿದೆ. ಐಫೋನ್ಗಳಿಗೆ ಕೇಸಿಂಗ್ ಭಾಗಗಳನ್ನು ತಯಾರಿಸುವ ಘಟಕ, ಹಾಗೂ ಚಿಪ್ ತಯಾರಿಸುವ ಉಪಕರಣಗಳ ತಯಾರಿಕೆಗೆ ಇನ್ನೊಂದು ಘಟಕವನ್ನು ಕರ್ನಾಟಕದಲ್ಲಿ ಫಾಕ್ಸ್ಕಾನ್ ಸ್ಥಾಪಿಸಲಿದೆ. ತೈವಾನ್ ಮೂಲದ ಈ ಕಂಪನಿ ಈ ಎರಡು ಯೋಜನೆಗಳಲ್ಲಿ ಒಟ್ಟು 600 ಮಿಲಿಯನ್ ಡಾಲರ್ (ಸುಮಾರು 5,000 ಕೋಟಿ ರೂ) ಹಣ ಹೂಡಿಕೆ ಮಾಡಲಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫಾಕ್ಸ್ಕಾನ್ ತಮಿಳುನಾಡಿನಲ್ಲಿ ಈಗಾಗಲೇ ಐಫೋನ್ ಅಸೆಂಬ್ಲಿಂಗ್ ಯೂನಿಟ್ ಹೊಂದಿದೆ. ಚೆನ್ನೈನಲ್ಲಿರುವ ಅದರ ಫ್ಯಾಕ್ಟರಿ ಜೊತೆಗೆ ಇನ್ನೆರಡು ಘಟಕಗಳನ್ನು ಸ್ಥಾಪಿಸುವ ಆಲೋಚನೆಯಲ್ಲಿದೆ. ಅಲ್ಲಿ ಹೊಸದಾಗಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ಸ್ಥಾಪಿಸಲಿದ್ದು ಅದಕ್ಕೆ 195 ಮಿಲಿಯನ್ ಡಾಲರ್ ಬಂಡವಾಳ ಹಾಕಲಿದೆ. ಈ ಘಟಕದಿಂದ 6,000 ಮಂದಿಗೆ ಉದ್ಯೋಗ ಸಿಗಲಿದೆ.
ಇದನ್ನೂ ಓದಿ: Ola Dog: ಬೆಂಗಳೂರಿನ ಒಲಾ ಕಂಪನಿಗೆ ನಾಯಿ ಹೊಸ ಉದ್ಯೋಗಿ; ಐಡಿ ಹಂಚಿಕೊಂಡ ಸಿಇಒ
ಫಾಕ್ಸ್ಕಾನ್ ಸಂಸ್ಥೆ ಹೈದರಾಬಾದ್ನಲ್ಲೂ ಒಂದು ಘಟಕ ತೆರೆಯಲು ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಈಗ ಎರಡು ಘಟಕಗಳು ಬರಲಿರುವುದು ಕುತೂಹಲ ಮೂಡಿಸಿದೆ. ಐಫೋನ್ ಬಿಡಿಭಾಗ ತಯಾರಿಕೆಗೆ ನಿರ್ಮಿಸಲಾಗುವ ಘಟಕಕ್ಕೆ 350 ಮಿಲಿಯನ್ ಡಾಲರ್ ವಿನಿಯೋಗವಾಗುವ ಸಾಧ್ಯತೆ ಇದೆ. ಈ ಘಟಕದಿಂದ ಬರೋಬ್ಬರಿ 12,000 ಮಂದಿಗೆ ಕೆಲಸ ಸಿಗುವ ನಿರೀಕ್ಷೆ ಇದೆ. ಫಾಕ್ಸ್ಕಾನ್ ಈಗಾಗಲೇ ದೊಡ್ಡಬಳ್ಳಾಪುರದಲ್ಲಿ 14,000 ಕೋಟಿ ರೂ ಒತ್ತದ ಐಫೋನ್ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿದೆ. ಹೆಚ್ಚುವರಿಯಾಗಿ ಈಗ ಎರಡು ಹೊಸ ಯೋಜನೆಗಳನ್ನು ಆರಂಭಿಸಲಿದೆ. ಈ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
Karnataka Govt. signs a Letter of Intent (LOI) with Foxconn, paving the way for two groundbreaking projects with an investment of Rs. 5,000 crore in addition to the ongoing Rs. 14,000 crore iPhone Manufacturing project.
Recently met the CEO and Chairman of Hon Hai Technology… pic.twitter.com/62qQH42EOP
— M B Patil (@MBPatil) August 2, 2023
ಇನ್ನು, ಚಿಪ್ ಮೇಕಿಂಗ್ ಟೂಲ್ಗಳ ತಯಾರಿಕೆಗೆ 250 ಮಿಲಿಯನ್ ಡಾಲರ್ ಯೋಜನೆಯನ್ನು ಬೆಂಗಳೂರಿನಲ್ಲಿ ಕೈಗೆತ್ತಿಕೊಳ್ಳುತ್ತಿದೆ ಫಾಕ್ಸ್ಕಾನ್. ಈ ಘಟಕಕ್ಕೆ ಅಮೆರಿಕದ ಚಿಪ್ ಟೂಲ್ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್ನೊಂದಿಗೆ ಫಾಕ್ಸ್ಕಾನ್ ಒಪ್ಪಂದ ಮಾಡಿಕೊಳ್ಳಲಿರುವುದು ತಿಳಿದುಬಂದಿದೆ. ಫಾಕ್ಸ್ಕಾನ್ ಮುಖ್ಯಸ್ಥ ಯಂಗ್ ಲಿಯು ಅವರು ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿಯಾದ ಬಳಿಕ ಈ ಎರಡು ಯೋಜನೆಗಳಿಗೆ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಚೀನಾದ ಕಾರ್ ಕಂಪನಿ ಬಿವೈಡಿ ಮೋಟಾರ್ಸ್ ವಿರುದ್ಧ ತೆರಿಗೆ ವಂಚನೆ ಆರೋಪ; ಡಿಆರ್ಐನಿಂದ ತನಿಖೆ
ಭಾರತದ ಸೆಮಿಕಂಡಕ್ಟರ್ ಬೆಳವಣಿಗೆ ಭಾಗವಾಗಲಿರುವ ಫಾಕ್ಸ್ಕಾನ್
ಭಾರತವನ್ನು ವಿಶ್ವದ ಎಲೆಕ್ಟ್ರಾನಿಕ್ ತಯಾರಿಕಾ ಅಡ್ಡೆಯಾಗಿಸುವ ಗುರಿಯಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆ ಪ್ರಮುಖವಾದುದು. ಭಾರತದಲ್ಲಿ ಸಮಗ್ರ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ಸರ್ಕಾರ ಉತ್ತೇಜನ ಕೊಡುತ್ತಿದೆ. ಫಾಕ್ಸ್ಕಾನ್ ಸಂಸ್ಥೆ ಗುಜರಾತ್ನಲ್ಲಿ ಚಿಪ್ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಚಿಪ್ ಮೇಕಿಂಗ್ ಟೂಲ್ಗಳನ್ನು ತಯಾರಿಸುವ ಮೂಲಕ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಬೇಕಾದ ಇನ್ಫ್ರಾಸ್ಟ್ರಕ್ಚರ್ ಅನ್ನು ಫಾಕ್ಸ್ಕಾನ್ ಅಭಿವೃದ್ಧಿಪಡಿಸಿಕೊಳ್ಳಲು ಹೊರಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 2 August 23