ನವೆಂಬರ್ ದ್ವಿತೀಯಾರ್ಧದಲ್ಲಿ ಷೇರು ಮಾರಾಟಕ್ಕಿಂತ ಖರೀದಿ ಹೆಚ್ಚಿಸಿದ ವಿದೇಶೀ ಹೂಡಿಕೆದಾರರು

|

Updated on: Dec 08, 2024 | 5:32 PM

Foreign investment in Indian stocks: ನವೆಂಬರ್ ಎರಡನೇ ಭಾಗದಲ್ಲಿ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ನೆಟ್ ಸೆಲ್ಲರ್​ನಿಂದ ನೆಟ್ ಬಯರ್​ಗಳಾಗಿದ್ದಾರೆ. ನವೆಂಬರ್ ಮೊದಲಾರ್ಧದಲ್ಲಿ 22,400 ಕೋಟಿ ರೂ ಮೌಲ್ಯದ ಷೇರುಗಳನ್ನು ಎಫ್​ಪಿಐಗಳು ಮಾರಿದ್ದವು. ದ್ವಿತೀಯಾರ್ಧದಲ್ಲಿ ಮಾರುವುದಕ್ಕಿಂತ ಖರೀದಿ ಹೆಚ್ಚಾಗಿದೆ. ಹಣಕಾಸು ಸೇವೆ, ಐಟಿ, ಎಫ್​ಎಂಸಿಜಿ ಮೊದಲಾದ ಕೆಲ ಸೆಕ್ಟರ್​ಗಳಲ್ಲಿ ಎಫ್​ಪಿಐಗಳಿಂದ ಹೆಚ್ಚು ಹೂಡಿಕೆ ಆಗಿದೆ.

ನವೆಂಬರ್ ದ್ವಿತೀಯಾರ್ಧದಲ್ಲಿ ಷೇರು ಮಾರಾಟಕ್ಕಿಂತ ಖರೀದಿ ಹೆಚ್ಚಿಸಿದ ವಿದೇಶೀ ಹೂಡಿಕೆದಾರರು
ಷೇರು ಮಾರುಕಟ್ಟೆ
Follow us on

ನವದೆಹಲಿ, ಡಿಸೆಂಬರ್ 8: ನವೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ ವಿದೇಶೀ ಹೂಡಿಕೆದಾರರು ಮಾರುವುದಕ್ಕಿಂತ ಖರೀದಿಸುವುದೇ ಅಧಿಕ ಆಗಿತ್ತು. ಹಿಂದಿನ ಕೆಲ ತಿಂಗಳಿಂದ ಎಫ್​ಪಿಐಗಳು ನೆಟ್ ಸೆಲ್ಲರ್​ಗಳಾಗಿದ್ದರು. ನವೆಂಬರ್ ಮೊದಲಾರ್ಧದಲ್ಲಿ ಎಫ್​ಪಿಐಗಳೀಂದ 22,400 ಕೋಟಿ ರೂಗೂ ಅಧಿಕ ಹೂಡಿಕೆ ಹಿಂತೆಗೆತ ಆಗಿತ್ತು. ದ್ವಿತೀಯಾರ್ಧದಲ್ಲಿ 809 ಕೋಟಿ ರೂ ನಿವ್ವಳ ಹೂಡಿಕೆಯಾಗಿದೆ. ಇದು ಪ್ರೈಮ್ ಇನ್ಫೋ ಬೇಸ್ ಡಾಟ್ ಕಾಮ್​ನಿಂದ ಸಂಗ್ರಹವಾಗಿರುವ ದತ್ತಾಂಶದಿಂದ ತಿಳಿದುಬರುತ್ತದೆ.

ವಿದೇಶೀ ಹೂಡಿಕೆದಾರರು ನವೆಂಬರ್ ದ್ವಿತೀಯಾರ್ಧದಲ್ಲಿ ಫೈನಾನ್ಷಿಯಲ್ ಸರ್ವಿಸ್ ಮತ್ತು ಐಟಿ ಕ್ಷೇತ್ರದ ಸ್ಟಾಕ್​ಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದಾರೆ. ವಿದೇಶಿಗರ ಹೂಡಿಕೆಗಳು ಹೊರಹೋಗಿದ್ದು ಹೆಚ್ಚಾಗಿ ತೈಲ ಮತ್ತು ಅನಿಲ, ಆಟೊಮೊಬೈಲ್ ಸೆಕ್ಟರ್​ನಿಂದ ಎಂದೆನ್ನಲಾಗಿದೆ.

ಇದನ್ನೂ ಓದಿ: ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್​ಡಿಐ

ಎಫ್​ಪಿಐಗಳು ಹಣಕಾಸು ಸೇವಾ ವಲಯದ ಸ್ಟಾಕ್​ಗಳಲ್ಲಿ 9,597 ಕೋಟಿ ರೂ ಹೂಡಿಕೆ ಮಾಡಿವೆ. ಐಟಿ ವಲಯದ ಷೇರುಗಳಲ್ಲಿ ಎಫ್​​ಪಿಐ ಹೂಡಿಕೆ ಆಗಿರುವುದು 2,429 ಕೋಟಿ ರೂ. ಇದೇ ವೇಳೆ, ತೈಲ ಮತ್ತು ಅನಿಲ ವಲಯದ ಸ್ಟಾಕುಗಳಿಂದ 6,132 ಕೋಟಿ ರೂ ಮೊತ್ತದ ಹೂಡಿಕೆಯನ್ನು ಎಫ್​ಪಿಐಗಳು ಮಾರಿದ್ದಾರೆ.

ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆಯ ಲಕ್ಷಣ ತೋರಿದ್ದರಿಂದ ಭಾರತೀಯ ಐಟಿ ಸ್ಟಾಕ್​ಗಳತ್ತ ವಿದೇಶೀ ಹೂಡಿಕೆ ಹರಿದುಬಂದಿದೆ. ಇನ್ನು, ಹಣಕಾಸು ಸೇವಾ ಕ್ಷೇತ್ರವು ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ತೋರುವ ಸಾಧ್ಯತೆ ಇರುವುದರಿಂದ ಎಫ್​ಪಿಐ ಆಕರ್ಷಿತವಾಗಿರಬಹುದು.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಬೇರೆಲ್ಲಾ ಸೆಂಟ್ರಲ್ ಬ್ಯಾಂಕುಗಳಿಗಿಂತ ಆರ್​ಬಿಐನಿಂದಲೇ ಅತಿಹೆಚ್ಚು ಚಿನ್ನ ಖರೀದಿ

ಫೈನಾನ್ಷಿಯಲ್ ಸರ್ವಿಸ, ಐಟಿ ಮಾತ್ರವಲ್ಲ, ಎಫ್​ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ಕ್ಯಾಪಿಟಲ್ ಗೂಡ್ಸ್ ಸೆಕ್ಟರ್​ನ ಷೇರುಗಳತ್ತ ಎಫ್​ಪಿಐಗಳ ಒಳಹರಿವು ನಡೆದಿದೆ. ಆಯಿಲ್ ಅಂಡ್ ಗ್ಯಾಸ್, ಆಟೊಮೊಬೈಲ್ ಹಾಗೂ ಟೆಲಿಕಾಂ, ಕಟ್ಟಡ ನಿರ್ಮಾಣ ಕ್ಷೇತ್ರದ ಷೇರುಗಳನ್ನು ಎಫ್​ಪಿಐಗಳು ಹೆಚ್ಚು ಮಾರಾಟ ಮಾಡಿರುವುದು ದತ್ತಾಂಶದಿಂದ ತಿಳಿದುಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ