ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್​ಡಿಐ

Food industry updates: ಭಾರತದ ಆಹಾರ ಸಂಸ್ಕರಣಾ ವಲಯಕ್ಕೆ 2024ರ ಏಪ್ರಿಲ್​ನಿಂದ ಸೆಕ್ಟೆಂಬರ್​ವರೆಗಿನ ಏಳು ತಿಂಗಳಲ್ಲಿ 368.37 ಮಿಲಿಯನ್ ಡಾಲರ್​ನಷ್ಟು ಎಫ್​ಡಿಐ ಬಂದಿದೆ. 2023-24ರ ಹಣಕಾಸು ವರ್ಷದಲ್ಲಿ 600 ಮಿಲಿಯನ್ ಡಾಲರ್​ಗೂ ಅಧಿಕ ವಿದೇಶೀ ನೇರ ಬಂಡವಾಳ ಬಂದಿತ್ತು. ಇದೇ ವೇಳೆ, ಕೇಂದ್ರ ಸರ್ಕಾರ ಆಹಾರಧಾನ್ಯಗಳ ಸಮರ್ಪಕ ವಿತರಣೆಗೆ ‘ಅನ್ನ ಚಕ್ರ’ ಎನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್​ಡಿಐ
ಆಹಾರಧಾನ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2024 | 4:38 PM

ನವದೆಹಲಿ, ಡಿಸೆಂಬರ್ 8: ಭಾರತದ ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಏಳು ತಿಂಗಳಲ್ಲಿ 368 ಮಿಲಿಯನ್ ಡಾಲರ್​ನಷ್ಟು ವಿದೇಶೀ ನೇರ ಹೂಡಿಕೆಗಳು ಹರಿದು ಬಂದಿವೆ. ಸರ್ಕಾರದಿಂದ ಸಂಸತ್​ಗೆ ನೀಡಿದ ಮಾಹಿತಿ ಪ್ರಕಾರ 2024-25ರ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ 368.37 ಮಿಲಿಯನ್ ಡಾಲರ್ ಮೊತ್ತದಷ್ಟು ಎಫ್​ಡಿಐ ಬಂದಿದೆಯಂತೆ. ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಲ್ಲಿ ಹೂಡಿಕೆಯಾದ 368 ಮಿಲಿಯನ್ ಡಾಲರ್ ವಿದೇಶೀ ಬಂಡವಾಳದಲ್ಲಿ ಹೆಚ್ಚಿನದು ಐರ್ಲೆಂಡ್ ದೇಶದಿಂದ ಬಂದಿದೆ. ಐರ್ಲೆಂಡ್​ನಿಂದ 83.84 ಮಿಲಿಯನ್ ಡಾಲರ್, ಸಿಂಗಾಪುರ್​ನಿಂದ 48.45 ಮಿಲಿಯನ್, ಆಸ್ಟ್ರೇಲಿಯಾದಿಂದ 20.18 ಮಿಲಿಯನ್ ಡಾಲರ್, ಮೆಕ್ಸಿಕೋದಿಂದ 9.59 ಮಿಲಿಯನ್ ಡಾಲರ್ ಮೊತ್ತದ ನೇರ ಹೂಡಿಕೆಯು ಭಾರತದ ಆಹಾರ ಸಂಸ್ಕರಣಾ ಸೆಕ್ಟರ್​ಗೆ ಬಂದಿದೆ.

ಇದನ್ನೂ ಓದಿ: ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ

ಪಿಎಂ ಕಿಸಾನ್ ಸಂಪದ ಯೋಜನೆ, ಪಿಎಂ ಎಫ್​ಎಂಇ ಯೋಜನೆ, ಪಿಎಲ್​ಐ ಸ್ಕೀಮ್ ಇವು ಭಾರತದ ಫೂಡ್ ಪ್ರೋಸಸಿಂಗ್ ಸೆಕ್ಟರ್​ಗೆ ಪುಷ್ಟಿ ನೀಡಲು ಯಶಸ್ವಿಯಾಗಿವೆ. 2023-24ರ ಹಣಕಾಸು ವರ್ಷದಲ್ಲಿ ಈ ಕ್ಷೇತ್ರಕ್ಕೆ ಹರಿದುಬಂದ ಎಫ್​ಡಿಐ 608.31 ಮಿಲಿಯನ್ ಡಾಲರ್ ಎನ್ನಲಾಗಿದೆ.

ಕೇಂದ್ರದಿಂದ ಅನ್ನ ಚಕ್ರ…

ಕೇಂದ್ರದ ಪಿಡಿಎಸ್ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೇಂದ್ರ ಆಹಾರ ಸಚಿವಾಲಯವು ‘ಅನ್ನ ಚಕ್ರ’ ಎನ್ನುವ ಸಾಧನವನ್ನು ಅಳವಡಿಸಿದೆ. ಇದು ಪಿಡಿಎಸ್ ಸ್ಕೀಮ್​ನಲ್ಲಿ ಆಹಾರಧಾನ್ಯಗಳ ಸರಬರಾಜು ಸರಪಳಿಯ ಬಲಪಡಿಸಲಿದೆ. ಒಂದು ಅಂದಾಜು ಪ್ರಕಾರ 80 ಕೋಟಿ ಬಡಜನರಿಗೆ ಉಚಿತವಾಗಿ ಗೋಧಿ ಮತ್ತು ಅಕ್ಕಿಯನ್ನು ಸಾಗಿಸಲು ಆಗುವ ವಾರ್ಷಿಕ ವೆಚ್ಚದಲ್ಲಿ 250 ಕೋಟಿ ರೂನಷ್ಟು ಹಣವನ್ನು ಉಳಿತಾಯ ಮಾಡಲು ಅನ್ನ ಚಕ್ರ ಸಹಾಯವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್

ಅನ್ನ ಚಕ್ರ ಯೋಜನೆಯನ್ನು 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈ ವೇಳೆ, ಪಡಿತರ ಅಂಗಡಿಗಳಿಗೆ ಆಹಾರಧಾನ್ಯಗಳನ್ನು ಸರಬರಾಜು ಮಾಡಲು ಅತಿ ಸಮೀಪ ಇರುವ ಎಫ್​ಸಿಐ ಗೋದಾಮುಗಳನ್ನು ಗುರುತಿಸಿ ಮಾರ್ಗಗಳ ಮರುರಚನೆ ಮಾಡಲಾಯಿತು. ಇದರಿಂದ ಸರಬರಾಜು ಮಾರ್ಗದ ಅಂತರ ಶೇ. 15ರಿಂದ 50ರಷ್ಟು ಕಡಿಮೆ ಆಗಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಈಗ ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲಾಗುತ್ತಿದೆ.

ವರ್ಲ್ಡ್ ಫೂಡ್ ಪ್ರೋಗ್ರಾಮ್ ಮತ್ತು ಐಐಟಿ ದಿಲ್ಲಿ ಸಹಯೋಗದಲ್ಲಿ ಅನ್ನ ಚಕ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಆಹಾರ ಮತ್ತು ಸಂಸ್ಕರಣೆ ಸಚಿವ ಪ್ರಹ್ಲಾದ್ ಜೋಷಿ ಈ ಟೂಲ್ ಅನ್ನು ಅನಾವರಣಗೊಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ