AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ

e-Shram portal, unemployment update news: ಅಸಂಘಟಿತ ವಲಯದ 30.43 ಕೋಟಿ ಕಾರ್ಮಿಕರು ಇ-ಶ್ರಮ್ ಪೋರ್ಟಲ್​ನಲ್ಲಿ ನೊಂದಣಿ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಸರ್ಕಾರ ತಿಳಿಸಿದೆ. ಕೇಂದ್ರದ ವಿವಿಧ ಸಚಿವಾಲಯಗಳ 12 ಯೋಜನೆಗಳು ಇ-ಶ್ರಮ್ ಪೋರ್ಟಲ್​ನಲ್ಲಿ ಲಿಂಕ್ ಆಗಿದೆ. ಇದೇ ವೇಳೆ, ದೇಶದಲ್ಲಿ 15 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರ 7 ವರ್ಷದಲ್ಲಿ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ ಆಗಿದೆ.

ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ
ಉದ್ಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2024 | 2:47 PM

Share

ನವದೆಹಲಿ, ಡಿಸೆಂಬರ್ 8: ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿಗೂ ಅಧಿಕ ಕಾರ್ಮಿಕರು ನೊಂದಣಿ ಮಾಡಿದ್ದಾರೆ. ಅಸಂಘಟಿತ ಕಾರ್ಮಿಕರ ರಾಷ್ಟ್ರಮಟ್ಟದ ಡಾಟಾಬೇಸ್ ಅನ್ನು ರಚಿಸಲು ಇ-ಶ್ರಮ್ ಪೋರ್ಟಲ್ ಅನ್ನು 2021ರ ಆಗಸ್ಟ್ 26ರಂದು ಆರಂಭಿಸಲಾಗಿದೆ. ಡಿಸೆಂಬರ್ 1ರವರೆಗೆ ಈ ಪೋರ್ಟಲ್​ನಲ್ಲಿ ನೊಂದಣಿ ಮಾಡಿರುವ ಇಂಥ ಕಾರ್ಮಿಕರ ಸಂಖ್ಯೆ 30.4 ಕೋಟಿ ಎನ್ನುವ ಮಾಹಿತಿಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೀಡಿದ್ದಾರೆ.

ಇ-ಶ್ರಮ್ ಪೋರ್ಟಲ್​ನಲ್ಲಿ ನೊಂದಣಿಯಾಗುವ ಅಸಂಘಟಿತ ಕಾರ್ಮಿಕರಿಗೆ ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ ನೀಡಲಾಗುತ್ತದೆ. ಸ್ವ ಘೋಷಣೆಯ ಆಧಾರದ ಮೇಲೆ ಪೋರ್ಟಲ್​ನಲ್ಲಿ ನೊಂದಾಯಿಸಿಕೊಳ್ಳಲು ಅವಕಾಶ ಇದೆ. ನೊಂದಣಿಯಾದ 30.43 ಕೋಟಿ ಅಸಂಘಟಿಕ ಕಾರ್ಮಿರಲ್ಲಿ ಗ್ರಾಮೀಣ ಭಾಗದವರ ಸಂಖ್ಯೆಯೇ 27.22 ಕೋಟಿ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್

ಕೇಂದ್ರದ ವಿವಿಧ ಸಚಿವಾಲಯ ಮತ್ತು ಇಲಾಖೆಗಳ 12 ಸ್ಕೀಮ್​ಗಳನ್ನು ಇ-ಶ್ರಮ್​ನಲ್ಲಿ ಜೋಡಿಸಲಾಗಿದೆ. ಪಿಎಂ ಸುರಕ್ಷಾ ಬಿಮಾ ಯೋಜನೆ, ಪಿಎಂ ಜೀವನಜ್ಯೋತಿ ಬಿಮಾ ಯೋಜನೆ, ಆಯುಷ್ಮಾನ್ ಭಾರತ್, ಬೀದಿಬದಿ ವ್ಯಾಪಾರಿಗಳ ಪಿಎಂ ಸ್ವನಿಧಿ ಯೋಜನೆ, ಪಿಎಂ ಆವಾಸ್ ಯೋಜನೆ ಮೊದಲಾದವರು ಇದರಲ್ಲಿ ಸೇರಿವೆ.

ಶೇ. 3.2ಕ್ಕೆ ಇಳಿದ ನಿರುದ್ಯೋಗ…

ಸಚಿವೆ ಶೋಭಾ ಕರಂದ್ಲಾಜೆ ಇದೇ ವೇಳೆ ನಿರುದ್ಯೋಗ ಕುರಿತು ಮತ್ತೊಂದು ಮುಖ್ಯ ಮಾಹಿತಿ ಹೊರಗೆಡವಿದ್ದಾರೆ. ಕಳೆದ ಏಳು ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗ ದರ ಶೇ. 6ರಿಂದ ಶೇ. 3.2ಕ್ಕೆ ಇಳಿದಿದೆ. 2017-18ರಲ್ಲಿ 15 ವರ್ಷ ಮೇಲ್ಪಟ್ಟ ವಯೋಮಾನದವರಲ್ಲಿ ನಿರುದ್ಯೋಗ ದರ ಶೇ. 6ರಷ್ಟಿತ್ತು. ಈಗ ಅದು ಶೇ. 3.2ಕ್ಕೆ ಇಳಿದಿದೆ.

ಇದನ್ನೂ ಓದಿ: ಭಾರತದಲ್ಲಿ ಯಶಸ್ವಿಯಾದ ಯುಪಿಐ ಪಾವತಿ ವ್ಯವಸ್ಥೆ ಇತರ ದೇಶಗಳಿಗೂ ಮಾದರಿ

ವಾರ್ಷಿಕ ಕಾರ್ಮಿಕ ಶಕ್ತಿ ಸಮೀಕ್ಷೆಯ (ಪಿಎಲ್​ಎಫ್​ಎಸ್) ಇತ್ತೀಚಿನ ವರದಿ ಪ್ರಕಾರ ಕಾರ್ಮಿಕ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) 2017-18ರಲ್ಲಿ ಶೇ. 46.8ರಷ್ಟಿದ್ದದ್ದು 2023-24ರಲ್ಲಿ ಶೇ. 58.2ಕ್ಕೆ ಹೆಚ್ಚಿದೆ.. ಆರೇಳು ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ