ಭಾರತದಲ್ಲಿ ಯಶಸ್ವಿಯಾದ ಯುಪಿಐ ಪಾವತಿ ವ್ಯವಸ್ಥೆ ಇತರ ದೇಶಗಳಿಗೂ ಮಾದರಿ

UPI system's success: ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ ಎಂದು ವಿವಿಧ ತಜ್ಞರು ಸೇರಿ ರಚಿಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಯುಪಿಐ ಸಿಸ್ಟಂ ಅನ್ಯ ದೇಶಗಳಿಗೂ ಇದು ಮಾದರಿಯಾಗಬಲ್ಲುದು ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ನಡೆಯುವ ರೀಟೇಲ್ ಡಿಜಿಟಲ್ ಪಾವತಿಯಲ್ಲಿ ಶೇ. 75ರಷ್ಟು ಪ್ರಮಾಣವು ಯುಪಿಐ ಮೂಲಕ ಆಗುತ್ತದೆ ಎನ್ನಲಾಗಿದೆ.

ಭಾರತದಲ್ಲಿ ಯಶಸ್ವಿಯಾದ ಯುಪಿಐ ಪಾವತಿ ವ್ಯವಸ್ಥೆ ಇತರ ದೇಶಗಳಿಗೂ ಮಾದರಿ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2024 | 1:14 PM

ನವದೆಹಲಿ, ಡಿಸೆಂಬರ್ 8: ಭಾರತದಲ್ಲೇ ದೇಶೀಯವಾಗಿ ರೂಪಿತವಾದ ಪಾವತಿ ವಿಧಾನವಾದ ಯುಪಿಐ ನಿರೀಕ್ಷೆಮೀರಿದ ಯಶಸ್ಸು ಪಡೆದಿದೆ. ದೇಶದ ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ಇದು ಭರ್ಜರಿ ಪುಷ್ಟಿ ಕೊಟ್ಟಿರುವುದು ಹೌದು. ಯುಪಿಐನ ಈ ಯಶಸ್ಸು ಈಗ ಅದರ ಮೇಲೆ ಜಾಗತಿಕವಾಗಿ ಚಿತ್ತ ನೆಡುವಂತೆ ಮಾಡಿದೆ. ಹಲವು ದೇಶಗಳು ಯುಪಿಐ ಬಗ್ಗೆ ಆಸಕ್ತವಾಗಿವೆ. ತಜ್ಞರು ಸೇರಿ ಬರೆದಿರುವ ಸಂಶೋಧನಾ ವರದಿ ಪ್ರಕಾರ, ಇತರ ದೇಶಗಳಲ್ಲೂ ಯಪಿಐ ರೀತಿಯ ಪಾವತಿ ಸಿಸ್ಟಂ ಅನ್ನು ಜಾರಿಗೆ ತರಬಹುದು.

ಶಾಶ್ವತ್ ಅಲೋಕ್, ಪುಳಕ್ ಘೋಷ್, ನಿರುಪಮಾ ಕುಲಕರ್ಣಿ, ಮಂಜು ಪುರಿ ಅವರು ರಚಿಸಿರುವ 67 ಪುಟಗಳ ವರದಿಯಲ್ಲಿ, ಯುಪಿಐನ ಪರಿಣಾಮಗಳನ್ನು ಚಿತ್ರಿಸಲಾಗಿದೆ. ಬೇರೆ ದೇಶಗಳಿಗೆ ಇದು ಹೇಗೆ ಮಾದರಿಯಾಗಬಲ್ಲುದು ಎಂಬುದನ್ನು ಎತ್ತಿ ತೋರಿಸಲಾಗಿದೆ. ಮುಕ್ತ ಬ್ಯಾಂಕಿಂಗ್ ನೀತಿಯೊಂದಿಗೆ ಸಾರ್ವಜನಿ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಜೋಡಿಸುವ ಕೆಲಸವನ್ನು ಯುಪಿಐ ಮಾಡಿದೆ. ಇದರಿಂದ ಆರ್ಥಿಕ ಒಳಗೊಳ್ಳುವಿಕೆ, ನಾವೀನ್ಯತೆ ಮತ್ತು ಸಮಾನ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಇದರಿಂದ ಸಾಧ್ಯವಾಗಿದೆ ಎಂಬುದು ಈ ತಜ್ಞರ ಅನಿಸಿಕೆ.

ಇದನ್ನೂ ಓದಿ: ಬರುತ್ತಿದೆ ಇಪಿಎಫ್​ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್​ಡ್ರಾ ಮಾಡಿ

2016ರಲ್ಲಿ ಯುಪಿಐ ಪೇಮೆಂಟ್ ಸಿಸ್ಟಂ ಅನ್ನು ಜಾರಿಗೆ ತರಲಾಗಿದೆ. 30 ಕೋಟಿ ಜನರು ಇದನ್ನು ಬಳಸುತ್ತಿದ್ದಾರೆ. 5 ಕೋಟಿ ವರ್ತಕರಿಗೆ ಇದು ವರದಾನವಾಗಿದೆ. 2023ರ ಅಕ್ಟೋಬರ್ ತಿಂಗಳ ದತ್ತಾಂಶದ ಪ್ರಕಾರ ಶೇ. 75ರಷ್ಟು ರೀಟೇಲ್ ಡಿಜಿಟಲ್ ಪಾವತಿಯು ಯುಪಿಐ ಮೂಲಕ ಆಗಿದೆ.

‘ಕೆಲವೇ ಕಾಲಘಟ್ಟದಲ್ಲಿ ಭಾರತದಾದ್ಯಂತ ಡಿಜಿಟಲ್ ಪಾವತಿಗಳು ಸಾಕಷ್ಟು ಹೆಚ್ಚಲು ಯುಪಿಐ ಪ್ರಮುಖ ಕಾರಣವಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್​ಗಳವರೆಗೆ ಎಲ್ಲಾ ಮಟ್ಟಗಳಲ್ಲೂ ಯುಪಿಐ ಪಾವತಿಯನ್ನು ಬಳಸಲಾಗುತ್ತಿದೆ,’ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಡ್ಡಿ ಇಳಿಕೆಗೆ ವೇದಿಕೆ ಸಜ್ಜು..! ಮುಂದಿನ ದಿನಗಳಲ್ಲಿ ಬಡ್ಡಿದರ 100 ಮೂಲಾಂಕಗಳಷ್ಟು ಇಳಿಯುತ್ತೆ: ತಜ್ಞರ ನಿರೀಕ್ಷೆ

ಯುಪಿಐ ಬಳಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೊಸ ಸಾಲಗಾರರ ಸಂಖ್ಯೆ ಶೇ. 4ರಷ್ಟು ಹೆಚ್ಚಿದೆ. ಸಾಲ ಪಡೆಯಲು ಕಷ್ಟವಾಗಿರುವಂತಹ ಸಾಲಗಾರರ ಪ್ರಮಾಣ ಶೇ. 8ರಷ್ಟು ಹೆಚ್ಚಿದೆ. ಫಿನ್​ಟಕ್ ಸಂಸ್ಥೆಗಳು ನೀಡುವ ಸರಾಸರಿ ಸಾಲದ ಗಾತ್ರ 27,778 ರೂ ಇದೆ. ಇದು ಗ್ರಾಮೀಣ ಭಾಗದ ಮಾಸಿಕ ವೆಚ್ಚದ ಏಳು ಪಟ್ಟು ಹಣ. ಈ ಕುತೂಹಲಕಾರಿ ಅಂಶವನ್ನು ತಜ್ಞರ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?