ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಹೆಸರು ಇತ್ಯಾದಿ ವಿವರ ಬಹಳ ಮುಖ್ಯ. ಹಲವರ ಆಧಾರ್ ಕಾರ್ಡ್ನಲ್ಲಿ ಹೆಸರಿನಲ್ಲಿ ತಪ್ಪುಗಳಾಗಿರಬಹುದು. ಅಕ್ಷರದೋಷ ಆಗಿರಬಹುದು. ವಿಳಾಸ ಬದಲಾಗಿರಬಹುದು. ಆಧಾರ್ನಲ್ಲಿ ಇವುಗಳ ಮಾಹಿತಿ ಸರಿಯಾಗಿ ಇದ್ದರೆ ಅನುಕೂಲವಾಗುತ್ತದೆ. ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಯನ್ನು ಆನ್ಲೈನ್ನಲ್ಲಿ ಪರಿಷ್ಕರಿಸಲು ಸಾಧ್ಯವಿದೆ. ಸದ್ಯಕ್ಕೆ ಯಾವುದೇ ಶುಲ್ಕ ಇಲ್ಲದೇ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಬಹುದು. ಈ ಉಚಿತ ಸೇವೆ ಡಿಸೆಂಬರ್ 14ರವರೆಗೂ ಇದೆ.
10 ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡದೇ ಇರುವವರು, ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ವಿನಂತಿಸಿದೆ. ಜನರ ಬಯೋಮೆಟ್ರಿಕ್ ಮತ್ತು ಡೆಮಾಗ್ರಾಫಿಕ್ ಮಾಹಿತಿ ಅಪ್ಟುಡೇಟ್ ಆಗಿರಲಿ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಕಳೆದ ಕೆಲ ತಿಂಗಳುಗಳಿಂದಲೂ ಆನ್ಲೈನ್ನಲ್ಲಿ ಆಧಾರ್ ಮಾಹಿತಿ ಪರಿಷ್ಕರಣೆಗೆ ಗಡುವು ವಿಸ್ತರಣೆ ಮಾಡುತ್ತಲೇ ಬರಲಾಗಿದೆ. ಈಗ ಡಿಸೆಂಬರ್ 14ರವರೆಗೂ ಕಾಲಾವಕಾಶ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಬ್ರಿಟನ್ ಸೂಪರ್ ಪವರ್ ಆಗಿದ್ದ ಟೆಕ್ನಾಲಜಿಯಿಂದಲಾ? ಸೂಪರ್ ಪವರ್ ಆದ್ದರಿಂದ ತಂತ್ರಜ್ಞಾನ ಪಡೆಯಿತಾ?: ಪೂರ್ಣೇಂದು ಪ್ರಶ್ನೆ
2024ರ ಡಿಸೆಂಬರ್ 14ರ ಬಳಿಕವೂ ಆಧಾರ್ ಅಪ್ಡೇಟ್ ಮಾಡಬಹುದು. ಆದರೆ, ಉಚಿತ ಇರುವುದಿಲ್ಲ. ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲೂ ನೀವು ಶುಲ್ಕ ತೆರಬೇಕಾಗುತ್ತದೆ. ಶುಲ್ಕ ಹೆಚ್ಚೇನೂ ಇರುವುದಿಲ್ಲ. ಸುಮಾರು 50 ರೂ ಆಸುಪಾಸಿನ ಶುಲ್ಕ ವಿಧಿಸಲಾಗುತ್ತದೆ.
ಆಧಾರ್ ಕೇಂದ್ರಕ್ಕೆ ಹೋಗಿಯೂ ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬಹುದು. ಅಲ್ಲಿಯೂ ಒಂದು ಮಾಹಿತಿ ಬದಲಾವಣೆಗೆ 50 ರೂ ಶುಲ್ಕ ಪಡೆಯುತ್ತಾರೆ.
ಇದನ್ನೂ ಓದಿ: ಬ್ಯಾಂಕ್ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…
ಯುಐಡಿಎಐನ ಮೈ ಆಧಾರ್ ಪೋರ್ಟಲ್ಗೆ ಹೋಗಿ ಮಾಹಿತಿ ಅಪ್ಡೇಟ್ ಮಾಡಬಹುದು. ವಿಳಾಸ ಬದಲಿಸಿದ್ದರೆ ಹೊಸ ದಾಖಲೆಯ ಸ್ಕ್ಯಾನ್ಡ್ ಕಾಪಿ ಸಿದ್ಧವಿರಲಿ. ಹೆಸರು ಬದಲಾವಣೆ ಇದ್ದರೆ ಅದರ ಪ್ರೂಫ್ ದಾಖಲೆಯೂ ಜೊತೆಯಲ್ಲಿರಲಿ. ನೀವು ಪೋರ್ಟಲ್ಗೆ ಲಾಗಿನ್ ಆಗಿ ಈ ಮಾಹಿತಿಯನ್ನು ಅಪ್ಡೇಟ್ ಮಾಡಿ, ಸಂಬಂಧಿತ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನೂ ಲಗತ್ತಿಸಬೇಕಾಗುತ್ತದೆ. ಆಗ ಆಧಾರ್ ಅಪ್ಡೇಟ್ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ