Freshworks Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು

| Updated By: Srinivas Mata

Updated on: Sep 23, 2021 | 12:28 PM

ಚೆನ್ನೈನಲ್ಲಿ ಸ್ಥಾಪಿಸಲಾದ ಈ ಕಂಪೆನಿಯಲ್ಲಿ ಇರುವ 500ಕ್ಕೂ ಹೆಚ್ಚು ಸಿಬ್ಬಂದಿ ಕೋಟ್ಯಧಿಪತಿಗಳು. ಆ ಪೈಕಿ 69 ಮಂದಿ 30 ವರ್ಷದ ಒಳಗಿನವರು. ಅದು ಹೇಗೆ ಮತ್ತು ಯಾವ ಕಂಪೆನಿ ಎಂಬ ವಿವರ ಇಲ್ಲಿದೆ.

Freshworks Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು
ಗಿರೀಶ್​ ಮಾತೃಬೂತಮ್ (ಸಂಗ್ರಹ ಚಿತ್ರ)
Follow us on

ನಿಮಗೊಂದು ಸಕ್ಸಸ್ ಸ್ಟೋರಿ ಬಗ್ಗೆ ಹೇಳಬೇಕು. ಈ ಯಶಸ್ಸು ಯಾರದು ಅನ್ನೋದನ್ನು ಕೊನೆಯಲ್ಲಿ ನೀವೇ ನಿರ್ಧರಿಸಬೇಕು. ಗಿರೀಶ್​ ಮಾತೃಬೂತಮ್ಸ್​ ಅವರ ಸಾಫ್ಟ್​ವೇರ್​-ಆಸ್-ಸರ್ವೀಸ್ (SaaS) ಸಂಸ್ಥೆಯಾದ ಫ್ರೆಷ್​ವರ್ಕ್ಸ್​ (Freshworks) ನಾಸ್ಡಾಕ್ ಷೇರುಪೇಟೆ ಸೂಚ್ಯಂಕದಲ್ಲಿ ಪ್ರತಿ ಷೇರಿಗೆ 36 ಅಮೆರಿಕನ್ ಡಾಲರ್​ನಂತೆ ಬುಧವಾರ ಲಿಸ್ಟಿಂಗ್ ಮಾಡಿತು. ಅಮೆರಿಕದ ಮಾರುಕಟ್ಟೆಯಲ್ಲಿ ಹೀಗೆ ಪದಾರ್ಪಣೆ ಮಾಡುತ್ತಿರುವ ಮೊದಲ ಭಾರತೀಯ ಸ್ಟಾರ್ಟ್​ ಅಪ್ ಇದು. ಕಂಪೆನಿಯ ಈ ಸಾಧನೆ ಬಗ್ಗೆ ಗಿರೀಶ್ ಅವರು ಎಕನಾಮಿಕ್ ಟೈಮ್ಸ್​ ಜತೆಗೆ ಮಾತನಾಡಿದ್ದು, ಭಾರತದ ಇತರ SaaS ಕಂಪೆನಿಗಳಿಗೆ ಸಾರ್ವಜನಿಕ ಷೇರು ವಿತರಣೆಗೆ ನಮ್ಮ ಕಂಪೆನಿಯು ಒಂದು ದಾರಿಯನ್ನು ಹಾಕಿಕೊಟ್ಟಿವುದು ಮಾತ್ರವಲ್ಲ, ಇದೀಗ ಷೇರು ಮಾರ್ಕೆಟ್​ನಲ್ಲಿ ಲಿಸ್ಟ್​ ಆಗುವ ಮೂಲಕ ಸಿಬ್ಬಂದಿಯ ಸಾಕಷ್ಟು ಸಂಪತ್ತು ಹೆಚ್ಚಳಕ್ಕೂ ಕಾರಣ ಆಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಇದೇ ಮಾಧ್ಯಮ ಸಂಸ್ಥೆಗೆ ಗಿರೀಶ್ ಸಂದರ್ಶನ ನೀಡಿದ್ದಾಗ, ನಾನು ಬಿಎಂಡಬ್ಲ್ಯು ಕಾರು ಖರೀದಿಸುವುದಕ್ಕೆ ಮಾತ್ರ ಈ ಸಂಸ್ಐಎ ಆರಂಭಿಸಿಲ್ಲ. ನಮ್ಮ ಎಲ್ಲ ಸಿಬ್ಬಂದಿ ಆ ಎತ್ತರಕ್ಕೆ ಏರಬೇಕು ಎಂದಿದ್ದರು.

ನಮ್ಮ ಕಂಪೆನಿಯ ಷೇರುಗಳು ಸೋಮವಾರ ಸಾರ್ವಜನಿಕ ವಿತರಣೆ ಆದ ಮೇಲೆ 500 ಸಿಬ್ಬಂದಿ ಕೋಟ್ಯಧಿಪತಿಗಳಾಗಿದ್ದಾರೆ. ಆ ಪೈಕಿ 69 ಮಂದಿ 30 ವರ್ಷದ ಒಳಗಿನವರು. ಫ್ರೆಷ್​ವರ್ಕ್ಸ್​ನಲ್ಲಿ ಕಾರ್ಯ ನಿರ್ವಹಿಸುವ ಮೂರನೇ ಎರಡರಷ್ಟು ಉದ್ಯೋಗಿಗಳು ಷೇರುದಾರರಾಗಿರುವವರು ಎಂದಿದ್ದಾರೆ. “ಈ ಕಂಪೆನಿಯನ್ನು ರೂಪಿಸುವುದಕ್ಕೆ ನಿಜವಾಗಲೂ ಭಾಗವಹಿಸಿದ ಎಲ್ಲ ಸಿಬ್ಬಂದಿಗೆ ಪ್ರತಿಫಲ ಹಂಚಿಕೊಳ್ಳಬೇಕು. ಭಾರತದಲ್ಲಿ ಇರುವ ನಮ್ಮ 500ಕ್ಕೂ ಹೆಚ್ಚು ಸಿಬ್ಬಂದಿ ಕೋಟ್ಯಧಿಪತಿಗಳು. ಮತ್ತು ಆ ಪೈಕಿ 69 ಮಂದಿ 30 ವರ್ಷದೊಳಗಿನವರು,” ಎಂದು ಫ್ರೆಷ್​ವರ್ಕ್ಸ್​ ಸಹಸಂಸ್ಥಾಪಕ ಮತ್ತು ಸಿಇಒ ಹೇಳಿದ್ದಾರೆ.

ಈ ಯಶಸ್ಸನ್ನು ತಮ್ಮ ಕಂಪೆನಿಯ ಸಿಬ್ಬಂದಿಗೆ ಅರ್ಪಿಸಿದ್ದಾರೆ. ಈ ವಲಯದಲ್ಲಿ 120 ಬಿಲಿಯನ್ ಡಾಲರ್ ಮಾರ್ಕೆಟ್​ ಅವಕಾಶ ಇದ್ದು, ನಮ್ಮ ಕಂಪೆನಿ ಈಗಿನ್ನೂ ತಳಮಟ್ಟದಲ್ಲಿ ನಮ್ಮ ಕಂಪೆನಿ ಇದೆ ಎಂದು ಅವರು ಹೇಳಿದ್ದಾರೆ. ನಮ್ಮ ಸಿಬ್ಬಂದಿ ನೀಡಿದ ಕೊಡುಗೆಯಿಂದ ನನಗೆ ಬಹಳ ಸಂತೋಷ ಆಗಿದೆ. ನಾನೊಬ್ಬನೇ ಫ್ರೆಷ್​​ವರ್ಕ್ಸ್​ ಕಟ್ಟುತ್ತಿಲ್ಲ, ನಾವೆಲ್ಲ ಸೇರಿ ಕಟ್ಟುತ್ತಿದ್ದೇವೆ ಎಂದು ನಿಜವಾಗಿಯೂ ನಂಬಿದವನು ನಾನು. ಯುಎಸ್​ ಲಿಸ್ಟಿಂಗ್​ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಗಿರೀಶ್, ಆರಂಭದಿಂದಲೂ ಫ್ರೆಷ್​ವರ್ಕ್ಸ್​ ಜಾಗತಿಕ ಕಂಪೆನಿ. ಇದರ ಗ್ರಾಹಕರು 120+ ದೇಶಗಳಲ್ಲಿ ಇದ್ದಾರೆ ಮತ್ತು ಎಲ್ಲ ಆದಾಯವನ್ನೂ ಅಮೆರಿಕದಲ್ಲಿ ತೆಗೆದುಕೊಳ್ಳಲಾಗುತ್ತದೆ. ರಚನೆ ದೃಷ್ಟಿಯಿಂದ ನಾವು ಅಮೆರಿಕ- ಕೇಂದ್ರಕಚೇರಿಯ ಕಂಪೆನಿ. ಮತ್ತು ಆ ಕಾರಣಕ್ಕೆ ಅಮೆರಿಕದಲ್ಲಿ ಲಿಸ್ಟಿಂಗ್ ಮಾಡುವುದು ವಿವೇಕಯುತವಾದ ನಿರ್ಧಾರಮ ಎಂದಿದ್ದಾರೆ.

ಈ ಸಾಫ್ಟ್​ವೇರ್​ ಉತ್ಪಾದಕ ಸಂಸ್ಥೆಯು ನಾಸ್ಡಾಕ್​ನಲ್ಲಿ ಪದಾರ್ಪಣೆ ಮಾಡಿದ ದಿನವೇ ಐಪಿಒಗಿಂತ ಶೇ 21ರಷ್ಟು ಹೆಚ್ಚು ಮೇಲೇರಿತು. ಈಗ ಕಂಪೆನಿಯ ಮೌಲ್ಯ 1220 ಕೋಟಿ ಅಮೆರಿಕನ್ ಡಾಲರ್. ಅಂದಹಾಗೆ ಈ ಕಂಪೆನಿಯು ಸ್ಥಾಪಿಸಿದ್ದು ಚೆನ್ನೈನಲ್ಲಿ. ಫ್ರೆಷ್​ವರ್ಕ್ಸ್​ ಮಾಡುವ ಸಾಫ್ಟ್​ವೇರ್ ಗ್ರಾಹಕರ ಮ್ಯಾನೇಜ್​ಮೆಂಟ್​ಗೆ ಉದ್ಯಮಕ್ಕೆ ಸಹಾಯ ಮಾಡುತ್ತದೆ. ಮೆಸೇಜಿಂಗ್ ಪ್ಲಾಟ್​ಫಾರ್ಮ್​ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮೂಲಕ ಚಾಟ್​ಬಾಟ್ ಕಸ್ಟಮರ್​ ಸಪೋರ್ಟ್​ ಆಗಿದೆ. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಇರುವ ಫ್ರೆಷ್​ವರ್ಕ್ಸ್​ ಅನ್ನು ಸ್ಥಾಪಿಸಿದ್ದು ಗಿರೀಶ್​ ಮಾತೃಬೂತಮ್ ಹಾಗೂ ಶನ್ ಕೃಷ್ಣಸಾಮಿ. ಈ ಕಂಪೆನಿಯ ಬೆನ್ನಿಗೆ ಸೆಕೊಯಿಯ ಕ್ಯಾಪಿಟಲ್ ಮತ್ತು ಟೈಗರ್ ಗ್ಲೋಬಲ್ ಮ್ಯಾನೇಜ್​ಮೆಂಟ್​ ಇದ್ದು, 50 ಸಾವಿರಕ್ಕೂ ಹೆಚ್ಚು ಕಂಪೆನಿಗಳಿಗೆ ಫ್ರೆಷ್​​ವರ್ಕ್ಸ್​ ಸೇವೆ ಒದಗಿಸುತ್ತದೆ.

ಇದನ್ನೂ ಓದಿ: 30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್

(Freshworks Company’s More Than 500 Employees Are Now Crorepatis Know The Reason How And Why)

Published On - 11:34 am, Thu, 23 September 21