ಸಾಮಾನ್ಯ ಕುಟುಂಬದಲ್ಲಿ ಬೆಳೆದ ವ್ಯಕ್ತಿ ಸಂತೋಷ್ ಕಾಶಿದ್ (Santhosh Kashid), ಮುಂಬೈನ ಘನ್ಸೋಲಿಯವರು (Ghansoli of Navi Mumbai). ಆದರೆ ಸಂತೋಷ್ ಅವರ ತಂದೆಯ ಮರಣದ ನಂತರ ತನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಇವರ ಬದುಕು ಬಹುದೊಡ್ಡ ತಿರುವು ಪಡೆದುಕೊಂಡಿತು. ಬೆನ್ನ ಮೇಲೆ ಮನೆಯ ಜವಾಬ್ದಾರಿಯಿದ್ದ ಕಾರಣ ಏನಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಇತ್ತು. ಹೀಗಾಗಿ ಜವಾಬ್ದಾರಿಗಳ ನಡುವೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ಎಲ್ಲಾ ಆಯಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಆರಂಭದಲ್ಲಿ ಸಂತೋಷ್ ಅವರ ಕಾರ್ಯಾಚರಣೆಗಳು ದೊಡ್ಡ ಟ್ರಕ್‌ಗಳ ಖರೀದಿಯತ್ತ ಇತ್ತು. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರ ನಡುವೆ ಕಾಶಿದ್ ತಮ್ಮ ವಾಹನ ಸಮೂಹವನ್ನು ವೈವಿಧ್ಯಗೊಳಿಸುವ ಮಹತ್ವವನ್ನು ಅರಿತುಕೊಂಡರು. ಹೀಗಾಗಿ ಸರಿಯಾದ ಗಾತ್ರ, ದಕ್ಷತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುವ ವಾಹನಗಳತ್ತ ಹುಡುಕಾಟ ನಡೆಸಿದರು. ಈ ವೇಳೆಯಲ್ಲಿ ಕಾಶಿದ್ ಅವರ ಉದ್ಯಮಕ್ಕೆ ಟಾಟಾ ಏಸ್ ಹೊಸ ಸೇರ್ಪಡೆಯಾಯಿತು.
ಟಾಟಾ ಏಸ್ ಸೇರ್ಪಡೆಯಿಂದ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಸೇವೆ ಸಲ್ಲಿಸಲು, ವಿತರಣೆಗಳನ್ನು ಅತ್ಯುತ್ತಮವಾಗಿಸಲು, ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಸಂತೋಷ್ ಅವರ ಪಾಲಿಗೆ ಕೇವಲ ವಾಹನವಾಗಿರದೇ ತಮ್ಮ ವ್ಯವಹಾರದ ಭಾಗವೇ ಆಗಿತ್ತು. ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುವ ಕಾರ್ಯತಂತ್ರದ ಮೂಲ ಆಧಾರವಾಗಿತ್ತು. ಇಂದು, ಅವರ ಉದ್ಯಮ ಅನುಭವ ಮತ್ತು ಟಾಟಾ ಎಸಿಇ ಮೇಲೆ ಅವರು ಇಟ್ಟಿರುವ ನಂಬಿಕೆಯಿಂದ ಯಶಸ್ಸಿನತ್ತ ಸಾಗಿಸಿದ್ದಾರೆ. ಸರಿಯಾದ ಮನಸ್ಥಿತಿ ಮತ್ತು ಸರಿಯಾದ ಪಾಲುದಾರರಿದ್ದರೆ, ಪ್ರಗತಿ ಸಾಧ್ಯ ಎನ್ನುವುದಕ್ಕೆ ಇವರ ಯಶಸ್ಸಿನ ಹಾದಿಯೇ ಉತ್ತರವಾಗಿದೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ`