AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25,000 ರೂಗಿಂತ ಹೆಚ್ಚಿನ ಮೊತ್ತದ ಆನ್​ಲೈನ್ ಟ್ರಾನ್ಸ್ಫರ್; ಈ ಬ್ಯಾಂಕ್ ವಿಧಿಸುತ್ತೆ ಶುಲ್ಕ

SBI to impose nominal charges on IMPS beyond Rs 25,000 fund transfer: ಎಸ್​ಬಿಐನ ಆನ್​ಲೈನ್ ಚಾನಲ್​ಗಳಲ್ಲಿ ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿದರೆ ಸರ್ವಿಸ್ ಚಾರ್ಜ್ ತೆರಬೇಕಾಗುತ್ತದೆ. 25,000 ರೂವರೆಗಿನ ಫಂಡ್ ಟ್ರಾನ್ಸ್​ಫರ್​ಗೆ ಸರ್ವಿಸ್ ಚಾರ್ಜ್ ಇರುವುದಿಲ್ಲ. 25,000 ರೂ ಮೇಲ್ಪಟ್ಟು 5 ಲಕ್ಷ ರೂವರೆಗಿನ ಹಣ ವರ್ಗಾವಣೆಗೆ 2ರಿಂದ 10 ರೂವರೆಗೆ ಶುಲ್ಕ, ಜೊತೆಗೆ ಜಿಎಸ್​ಟಿ ಅನ್ವಯ ಆಗುತ್ತದೆ.

25,000 ರೂಗಿಂತ ಹೆಚ್ಚಿನ ಮೊತ್ತದ ಆನ್​ಲೈನ್ ಟ್ರಾನ್ಸ್ಫರ್; ಈ ಬ್ಯಾಂಕ್ ವಿಧಿಸುತ್ತೆ ಶುಲ್ಕ
ಆನ್​ಲೈನ್ ಟ್ರಾನ್ಸ್ಫರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 14, 2025 | 4:24 PM

Share

ಬೆಂಗಳೂರು, ಆಗಸ್ಟ್ 14: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಐಎಂಪಿಎಸ್ ಮೂಲಕ ಮಾಡಲಾಗುವ ಫಂಡ್ ಟ್ರಾನ್ಸ್​ಫರ್​ಗಳಿಗೆ (Online Transfer) ಆಗಸ್ಟ್ 15ರಿಂದ ಶುಲ್ಕ ವಿಧಿಸಲಿದೆ. ಇದು ಆನ್​ಲೈನ್​ನಲ್ಲಿ ಐಎಂಪಿಎಸ್ ಮೂಲಕ ಮಾಡಲಾಗುವ ಪೇಮೆಂಟ್​​ಗಳಿಗೆ ಅನ್ವಯ ಆಗುತ್ತದೆ. ಬ್ಯಾಂಕ್​ಗೆ ಹೋಗಿ ಅಲ್ಲಿಂದ ಐಎಂಪಿಎಸ್ ಮೂಲಕ ಮಾಡುವ ಹಣ ವರ್ಗಾವಣೆಗೆ ಈ ಹೊಸ ಶುಲ್ಕ ಅನ್ವಯ ಆಗುವುದಿಲ್ಲ. ಆನ್​ಲೈನ್ ಮೂಲಕ 25,000 ರೂವರೆಗಿನ ಫಂಡ್ ಟ್ರಾನ್ಸ್​ಫರ್​ಗೆ ಯಾವ ಶುಲ್ಕ ಇರುವುದಿಲ್ಲ.

ಐಎಂಪಿಎಸ್​ಗೆ ಶುಲ್ಕ ಎಷ್ಟು?

ಆನ್​ಲೈನ್ ಚಾಲನ್ಸ್ ಮೂಲಕ ಐಎಂಪಿಎಸ್ ಬಳಸಿ 25,000 ರೂಗಿಂತ ಹೆಚ್ಚಿನ ಫಂಡ್ ಟ್ರಾನ್ಸ್​ಫರ್ ಮಾಡಿದರೆ 2ರಿಂದ 10 ರೂ ಶುಲ್ಕ, ಜೊತೆಗೆ ಜಿಎಸ್​ಟಿಯನ್ನೂ ಹಾಕಲಾಗುತ್ತದೆ.

ಇದನ್ನೂ ಓದಿ: ಆರ್​ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ

  • 25,000 ರೂಗಿಂತ ಹೆಚ್ಚಿನ ಮತ್ತು ಒಂದು ಲಕ್ಷ ರೂಗಿಂತ ಕಡಿಮೆ ಮೊತ್ತದ ಹಣ ವರ್ಗಾವಣೆಗೆ ಸರ್ವಿಸ್ ಚಾರ್ಜ್ ಎರಡು ರೂ ಇದೆ.
  • ಒಂದು ಲಕ್ಷ ರೂನಿಂದ ಎರಡು ಲಕ್ಷ ರೂ ಹಣ ವರ್ಗಾವಣೆಗೆ ಆರು ರೂ ಶುಲ್ಕ ಹಾಕುತ್ತದೆ ಎಸ್​ಬಿಐ.
  • ಹಾಗೆಯೇ, ಎರಡರಿಂದ ಐದು ಲಕ್ಷ ರೂವರೆಗಿನ ಹಣ ವರ್ಗಾವಣೆಗೆ 10 ರೂ ಸರ್ವಿಸ್ ಚಾರ್ಜ್ ಹಾಕಲಾಗುತ್ತದೆ.

ಈ ಸರ್ವಿಸ್ ಚಾರ್ಜ್​ನ ಹಣದ ಮೇಲೆ ಜಿಎಸ್​ಟಿಯನ್ನೂ ಸೇರಿಸಲಾಗುತ್ತದೆ. ಎಸ್​ಬಿಐನ ಕಾರ್ಪೊರೇಟ್ ಗ್ರಾಹಕರಿಗೆ ಈ ಪರಿಷ್ಕೃತ ಸರ್ವಿಸ್ ಚಾರ್ಜ್​ಗಳು ಸೆಪ್ಟೆಂಬರ್ 8ರಿಂದ ಜಾರಿಗೆ ಬರುತ್ತವೆ. ಇತರರಿಗೆ ಆಗಸ್ಟ್ 15ರಿಂದಲೇ ಜಾರಿಗೆ ಬರುತ್ತವೆ.

ಎಸ್​ಬಿಐನಲ್ಲಿ ಸ್ಯಾಲರಿ ಅಕೌಂಟ್ ಹೊಂದಿರುವವರಿಗೆ ಈ ಶುಲ್ಕ ಇರುವುದಿಲ್ಲ. ಗೋಲ್ಡ್, ಡೈಮಂಡ್, ಪ್ಲಾಟಿನಂ, ರೋಡಿಯಂ, ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಕರೆಂಟ್ ಅಕೌಂಟ್​ಗಳಿಗೂ ಐಎಂಪಿಎಸ್ ಟ್ರಾನ್ಸಾಕ್ಷನ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ಅಲ್ಲ, 15,000 ರೂ

ಇನ್ನು, ಯುಪಿಐ ಕೂಡ ಐಎಂಪಿಎಸ್ ನೆಟ್ವರ್ಕ್ ಮೇಲೆಯೇ ರೂಪಿತವಾಗಿದೆಯಾದರೂ, ಯುಪಿಐ ಪೇಮೆಂಟ್​​ಗಳಿಗೆ ಈ ಸರ್ವಿಸ್ ಚಾರ್ಜ್ ಅನ್ವಯ ಆಗುವುದಿಲ್ಲ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Thu, 14 August 25

ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್