AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICICI bank: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ಅಲ್ಲ, 15,000 ರೂ

ICICI bank minimum monthly balance rule: ಐಸಿಐಸಿಐ ಬ್ಯಾಂಕ್ ತನ್ನ ಹೊಸ ಖಾತೆಗಳಿಗೆ ಕನಿಷ್ಠ ಬ್ಯಾಲನ್ಸ್​ನ ನಿಯಮವನ್ನು ಮತ್ತೆ ಪರಿಷ್ಕರಿಸಿದೆ. ಸೇವಿಂಗ್ಸ್ ಅಕೌಂಟ್​ಗಳಿಗೆ ಕನಿಷ್ಠ ಬ್ಯಾಲನ್ಸ್ ಅನ್ನು 50,000 ರೂಗೆ ಏರಿಸಿದ್ದ ಈ ಬ್ಯಾಂಕು ಈಗ ಅದನ್ನು 15,000 ರೂಗೆ ಇಳಿಸಿದೆ. ಇದು ಆಗಸ್ಟ್ 1ರಿಂದ ನಗರ ಪ್ರದೇಶಗಳಲ್ಲಿ ತೆರೆಯಲಾದ ಸೇವಿಂಗ್ಸ್ ಅಕೌಂಟ್​ಗಳಿಗೆ ಅನ್ವಯ ಆಗುತ್ತದೆ.

ICICI bank: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ಅಲ್ಲ, 15,000 ರೂ
ಐಸಿಐಸಿಐ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2025 | 2:30 PM

Share

ನವದೆಹಲಿ, ಆಗಸ್ಟ್ 14: ನಗರ ಪ್ರದೇಶಗಳಲ್ಲಿ ಗ್ರಾಹಕರ ಸೇವಿಂಗ್ಸ್ ಅಕೌಂಟ್​ನಲ್ಲಿ ಬರೋಬ್ಬರಿ 50,000 ರೂಗೆ ಮಿನಿಮಮ್ ಬ್ಯಾಲನ್ಸ್ ಅನ್ನು ಏರಿಸಿದ್ದ ಐಸಿಐಸಿಐ ಬ್ಯಾಂಕ್ (ICICI Bank) ಇದೀಗ ಅದನ್ನು 15,000 ರೂಗೆ ಇಳಿಸಿದೆ. ಆಗಸ್ಟ್ 1ರಿಂದ ಐಸಿಐಸಿಐ ಬ್ಯಾಂಕಲ್ಲಿ ಖಾತೆ ತೆರೆದವರು ಇರಿಸಬೇಕಾದ ಕನಿಷ್ಠ ಸರಾಸರಿ ಬ್ಯಾಂಕ್ ಬ್ಯಾಲನ್ಸ್ 10,000 ರೂನಿಂದ 50,000 ರೂಗೆ ಏರಿಸಲಾಗಿತ್ತು. ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಈಗ 15,000 ರೂಗೆ ಇಳಿಸಿದೆ.

‘2025ರ ಆಗಸ್ಟ್ 1ರಿಂದ ತೆರೆಯಲಾದ ಹೊಸ ಉಳಿತಾಯ ಖಾತೆಗಳಿಗೆ ಮಾಸಿಕ ಸರಾಸರಿ ಬ್ಯಾಲನ್ಸ್ (ಎಂಎಬಿ) ವಿಚಾರದಲ್ಲಿ ಹೊಸ ಅವಶ್ಯಕತೆಗಳನ್ನು ಜಾರಿಗೆ ತಂದಿದ್ದೆವು. ನಮ್ಮ ಗ್ರಾಹಕರಿಂದ ಅಮೂಲ್ಯ ಸಲಹೆಗಳು ಬಂದ ಬಳಿಕ, ಅವರ ನಿರೀಕ್ಷೆ ಮತ್ತು ಆದ್ಯತೆಗಳಿಗೆ ಅನುಸಾರವಾಗಿ ಆ ಅವಶ್ಯಕತೆಗಳನ್ನು ಪರಿಷ್ಕರಿಸಿದ್ದೇವೆ’ ಎಂದು ಐಸಿಐಸಿಐ ಬ್ಯಾಂಕ್ ಹೇಳಿಕೆ ನೀಡಿದೆ.

ಇದನ್ನೂ ಓದಿ: ತಿಂಗಳಿಗೆ 11,000 ಹೂಡಿಕೆ; 9 ಕೋಟಿ ರೂ ಮೊತ್ತಕ್ಕೆ ಎಷ್ಟು ವರ್ಷ ಬೇಕು?

ಈಗ ಪರಿಷ್ಕೃತ ದರಗಳ ಪ್ರಕಾರ, ನಗರ ಭಾಗದಲ್ಲಿ ಹೊಸ ಐಸಿಐಸಿಐ ಬ್ಯಾಂಕ್ ಖಾತೆಗಳು ಹೊಂದಿರಬೇಕಾದ ಕನಿಷ್ಠ ಬ್ಯಾಲನ್ಸ್ 15,000 ರೂ ಇರುತ್ತದೆ. ಸೆಮಿ ಅರ್ಬನ್ ಅಥವಾ ಪಟ್ಟಣಗಳಲ್ಲಿ ಮಿನಿಮಮ್ ಬ್ಯಾಲನ್ಸ್ 7,500 ರೂ ಹೊಂದಿರಬೇಕು. ಗ್ರಾಮೀಣ ಭಾಗದಲ್ಲಿ ಇದರ ಅವಶ್ಯಕತೆ 2,500 ರೂ ಇದೆ.

ಈ ಕನಿಷ್ಠ ಮಾಸಿಕ ಬ್ಯಾಲನ್ಸ್​ನಲ್ಲಿ ಕೊರತೆ ಕಂಡು ಬಂದರೆ 500 ರೂ ಅಥವಾ ಕೊರತೆಯ ಮೊತ್ತಕ್ಕೆ ಶೇ. 6ರಷ್ಟು ದಂಡ ವಿಧಿಸಲಾಗುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್​ನಿಂದಲೂ ಕನಿಷ್ಠ ಬ್ಯಾಲನ್ಸ್ ಹೆಚ್ಚಳ

ಎಚ್​ಡಿಎಫ್​ಸಿ ಬ್ಯಾಂಕ್ ಕೂಡ ಹೊಸ ಸೇವಿಂಗ್ಸ್ ಅಕೌಂಟ್​ಗಳಿಗೆ ಕನಿಷ್ಠ ಬ್ಯಾಲನ್ಸ್ ಅಗತ್ಯವನ್ನು 10,000 ರೂನಿಂದ 25,000 ರೂಗೆ ಏರಿಸಿದೆ. ಐಡಿಎಫ್​ಸಿ ಫಸ್ಟ್ ಬ್ಯಾಂಕು ಕೂಡ ಮಿನಿಮಮ್ ಬ್ಯಾಲನ್ಸ್ ಆಗಿ 25,000 ರೂ ಇರಬೇಕೆಂದು ನಿಯಮ ಮಾಡಿದೆ.

ಇದನ್ನೂ ಓದಿ: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಗಮನಿಸಬೇಕಾದ ಕೆಲ ನಿಯಮಗಳು

ಎಕ್ಸಿಸ್ ಬ್ಯಾಂಕಲ್ಲಿ ಇದು 12,000 ರೂ ಇದೆ. ಬ್ಯಾಂಕ್ ಆಫ್ ಬರೋಡಾದಲ್ಲಿ 2,000 ರೂ ಇದ್ದರೆ, ಎಸ್​ಬಿಐನದ್ದು ಝೀರೋ ಬ್ಯಾಲನ್ಸ್ ಅಕೌಂಟ್ ಆಗಿದೆ.

ಕನಿಷ್ಠ ಸರಾಸರಿ ಬ್ಯಾಲನ್ಸ್ ಲೆಕ್ಕಾಚಾರ ಹೇಗೆ?

ನಿಮ್ಮ ಅಕೌಂಟ್​ನಲ್ಲಿ ಒಂದು ತಿಂಗಳಲ್ಲಿ ಪ್ರತೀ ದಿನಾಂತ್ಯದಲ್ಲಿ ಎಷ್ಟು ಬ್ಯಾಲನ್ಸ್ ಇದೆ, ಅಷ್ಟನ್ನೂ ಕೂಡಿಸಬೇಕು. ಆ ಮೊತ್ತವನ್ನು ಆ ತಿಂಗಳ ಒಟ್ಟು ದಿನಗಳ ಸಂಖ್ಯೆಯಿಂದ ಭಾಗಿಸಬೇಕು. ಆಗ ಸರಾಸರಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ