AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರು ಉದ್ಯಮಿಗಳಾಗುವ ಕನಸಿಗೆ ಕೈಜೋಡಿಸುತ್ತಿದೆ ಏಸ್ ಪ್ರೊ: ಪ್ರೊಫೆಸರ್ ಅರುಣ್ ಕುಮಾರ್

ಅರ್ಥಶಾಸ್ತ್ರಜ್ಞ ಮತ್ತು ಜೆಎನ್‌ಯು ಮಾಜಿ ಪ್ರಾಧ್ಯಾಪಕ ಪ್ರೊಫೆಸರ್‌ ಅರುಣ್ ಕುಮಾರ್ ಭಾರತದ ವಿಕಸನಗೊಳ್ಳುತ್ತಿರುವ ಕಾರ್ಮಿಕವರ್ಗವು ಮಾಲೀಕರಾಗಿ ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸಿದ್ದಾರೆ. ಇಲ್ಲಿ ಕಾರ್ಮಿಕರು ಮಾಲೀಕರಾಗಿ ಬೆಳೆಯುತ್ತಿದ್ದಾರೆ. ಈ ಬದಲಾವಣೆಯ ಹಿಂದೆ ಏಸ್ ಪ್ರೊ ಕೊಡುಗೆ ಅಗಾಧವಾಗಿದೆ. ಇದು ವ್ಯಕ್ತಿಗಳು ಸ್ಥಿರ ಆದಾಯದೊಂದಿಗೆ ಉದ್ಯಮಶೀಲತೆಯೆಡೆಗೆ ಮುಖ ಮಾಡಲು ಸಹಾಯ ಮಾಡುತ್ತದೆ ಎನ್ನುವುದನ್ನು ತಿಳಿಸಿದ್ದಾರೆ. ಈ ಕುರಿತಾದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Aug 07, 2025 | 11:57 AM

Share

ಭಾರತದಾದ್ಯಂತ, ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯ ಅಲೆ ಹೆಚ್ಚುತ್ತಿದೆ. ಹೀಗಾಗು ದೇಶದ ಕಾರ್ಮಿಕ ವರ್ಗದಲ್ಲಿ ದುಡಿಯುತ್ತಿರುವ ಜನರು ನಿಗದಿತ ದೈನಂದಿನ ವೇತನದಿಂದ ದೂರ ಸರಿದು ತಮ್ಮದೇ ಆದ ಆರ್ಥಿಕ ಭವಿಷ್ಯವನ್ನು ಕಟ್ಟಿಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ. ಕಾರ್ಮಿಕರಾಗಿ ಉಳಿಯುವುದಕ್ಕಿಂತ ಮಾಲೀಕರಾಗುವುದು ಉತ್ತಮ ಎನ್ನುವ ಸ್ಪಷ್ಟ ನಿಲುವು ಅವರಲ್ಲಿದೆ. ಈ ಬದಲಾವಣೆಯೆ ಕೇಂದ್ರಬಿಂದುವೇ ಏಸ್ ಪ್ರೊ ಎಂದು ಅರ್ಥಶಾಸ್ತ್ರಜ್ಞ ಮತ್ತು ಜೆಎನ್‌ಯು ಮಾಜಿ ಪ್ರಾಧ್ಯಾಪಕ ಪ್ರೊಫೆಸರ್‌ ಅರುಣ್ ಕುಮಾರ್ (Economist and former JNU professor, Prof. Arun Kumar) ಹೇಳಿದ್ದಾರೆ.

ಏಸ್ ಪ್ರೊ ಕೇವಲ ಮಿನಿ ಟ್ರಕ್ ಅಲ್ಲ; ಇದು ಉದ್ಯಮಶೀಲತೆಗೆ ಪ್ರವೇಶ ಪಡೆಯಲು ಕಾರ್ಮಿಕ ವರ್ಗಕ್ಕೆ ಇರುವ ಭರವಸೆಯ ಸೆಲೆ. ಇದೊಂದು ಮಾಲೀಕತ್ವದ ಹೆಮ್ಮೆಯಾಗಿದೆ. ಆದಾಯದ ಹೆಚ್ಚಳ ಹಾಗೂ ಸ್ವಾತಂತ್ರ್ಯವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಏಸ್ ಪ್ರೊ ಸಮಾಜದಲ್ಲಿ ಹೊಸ ಗುರುತು ಬರೆಯಲು ಮೊದಲ ಹೆಜ್ಜೆ ಇಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಈ ಬದಲಾವಣೆಯು ಸಮಾಜದಲ್ಲಿ ಘನತೆ, ಅವಕಾಶಗಳನ್ನು ತರುತ್ತದೆ. ಸ್ವಾವಲಂಬನೆಯನ್ನು ಗೌರವಿಸುವ ದೇಶವಾದ ನವ ಭಾರತದ ವಿಕಸನಗೊಳ್ಳುತ್ತಿರುವ ಮನಸ್ಥಿತಿಯೊಂದಿಗೆ ಏಸ್ ಪ್ರೊ ಹೇಗೆ ಹೊಂದಿಕೆಯಾಗುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ. ಇದು ಸಾವಿರಾರು ಜನರು ಆತ್ಮವಿಶ್ವಾಸದಿಂದ “ಅಬ್ ಮೇರಿ ಬಾರಿ” ಎಂದು ಹೇಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳು ಈ ಪರಿವರ್ತನೆಯನ್ನು ಬಲಪಡಿಸುತ್ತದೆ. ಹಣಕಾಸು, ತರಬೇತಿ ಮತ್ತು ಡಿಜಿಟಲ್ ಪರಿಹಾರಗಳು ಸೇರಿದಂತೆ ಮೊದಲ ಬಾರಿಗೆ ವಾಹನ ಖರೀದಿಸುವವರು ವಾಹನವನ್ನು ಖರೀದಿಸಲು ಮಾತ್ರವಲ್ಲದೆ ಯಶಸ್ವಿಯಾಗಲು ಸಾಧ್ಯ ಎನ್ನುವುದನ್ನು ಖಚಿತ ಪಡಿಸುತ್ತದೆ. ಕಾರ್ಮಿಕವರ್ಗದಿಂದ ಮಾಲೀಕತ್ವದವರೆಗೆ ಈ ಪರಿವರ್ತನೆಯೂ ದೂರದ ಕನಸಾಗಿ ಉಳಿದಿಲ್ಲ. ಈ ಕನಸು ರಾಷ್ಟ್ರವ್ಯಾಪಿ ನನಸಾಗುತ್ತಿದ್ದು, ಈ ಪಯಣಕ್ಕೆ ಶಕ್ತಿ ತುಂಬುತ್ತಿರುವುದೇ ಈ ಏಸ್ ಪ್ರೊ ಎಂದು ಮಾಜಿ ಪ್ರಾಧ್ಯಾಪಕ ಪ್ರೊ. ಅರುಣ್ ಕುಮಾರ್ ತಿಳಿಸಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ`