ನವದೆಹಲಿ, ಮೇ 26: ಆಹಾರ ಸುರಕ್ಷತೆ ಮತ್ತು ಪ್ರಮಾಣ ಕಾಯ್ದೆ 2006ರ ಅಡಿಯಲ್ಲಿ ಮನುಷ್ಯರ ಹಾಲಿನ (ತಾಯಿ ಎದೆ ಹಾಲು) ಮಾರಾಟ ಅಥವಾ ಸಂಸ್ಕರಣೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಎಫ್ಎಸ್ಎಸ್ಎಐ (FCCAI) ಹೇಳಿದೆ. ಮಹಿಳೆಯ ಹಾಲು ಮತ್ತು ಅದರಿಂದ ತಯಾರಿಸಲಾಗುವ ಉತ್ಪನ್ನಗಳ (Human milk and products) ವಾಣಿಜ್ಯೀಕರಣಗೊಳಿಸುವುದು (commercialization) ಇತ್ಯಾದಿ ಸಂಬಂಧಿತ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣ ಪ್ರಾಧಿಕಾರ ಮೇ 24 ಎಂದು ಹೊರಡಿಸಿದ ಪ್ರಕಟಣೆಯಲ್ಲಿ (advisory) ಸೂಚಿಸಿದೆ.
ಮಾನವ ಹಾಲು ಮತ್ತದರ ಉತ್ಪನ್ನಗಳ ವಾಣಿಜ್ಯೀಕರಣ ಸಂಬಂಧ ಹಲವು ನೊಂದಾಯಿತ ಸಂಸ್ಥೆಗಳು ನೀಡಿರುವ ದೂರನ್ನು ಪರಿಗಣಿಸಿ ಆ ಉತ್ಪನ್ನಗಳ ಅನಧಿಕೃತ ವಾಣಿಜ್ಯೀಕರಣ ವಿರುದ್ಧ ಪ್ರಕಟಣೆ ಹೊರಡಿಸಲಾಗುತ್ತಿದೆ. ಎಫ್ಸಿಸಿ ಕಾಯ್ದೆ ಅಡಿಯಲ್ಲಿ ಮಾನವ ಹಾಲಿನ ಮಾರಾಟ ಅಥವಾ ಸಂಸ್ಕರಣೆಗೆ ಅನುಮತಿ ಇರುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್ವೇರ್ ಸ್ಪೆಷಲಿಸ್ಟ್ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ
ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರಿಗೆ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು. ತಾಯಿ ಹಾಲು ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿ ಕಾಯ್ದೆ ನಿಯಮ ಮೀರುವ ಇಂಥ ಸಂಸ್ಥೆಗಳಿಗೆ ಯಾವ ಪರವಾನಿಗೆ ಅಥವಾ ನೊಂದಣಿ ಸಿಗದಂತೆ ಸರ್ಕಾರದ ಪ್ರಾಧಿಕಾರಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದೆ.
Food Safety and Standards Authority of India (FSSAI) denies permission for the processing or selling of human milk under the FSS Act, 2006 and advises that all activities related to the commercialization of human milk and its products should be stopped. pic.twitter.com/dTtEOvQ7KM
— ANI (@ANI) May 25, 2024
ಬೆಂಗಳೂರಿನ ವಾಣಿ ವಿಲಾಸ್ ಸೇರಿದಂತೆ ವಿವಿಧೆಡೆ ಸರ್ಕಾರದಿಂದಲೇ ಎದೆ ಹಾಲು ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ, ಖಾಸಗಿ ಸಂಸ್ಥೆಗಳು ವಾಣಿಜ್ಯಾತ್ಮಕವಾಗಿ ಲಾಭ ಮಾಡುವ ಉದ್ದೇಶದಿಂದ ಎದೆ ಹಾಲು ಸಂಗ್ರಹಿಸಿ ಮಾರುವ ಪ್ರಯತ್ನಗಳು ನಡೆಯುತ್ತಿವೆ. ಎಫ್ಸಿಸಿಐ ಇಂಥ ವಾಣಿಜ್ಯೀಕರಣಕ್ಕೆ ಅನುಮತಿ ನಿರಾಕರಿಸಿದೆ.
ಸಂಬಾರ್ ಪದಾರ್ಥಗಳನ್ನು ತಯಾರಿಸಿ ಮಾರುವ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲ ಸಂಸ್ಥೆಗಳಿಗೆ ನಿರಾಳ ತರುವ ಬೆಳವಣಿಗೆಯಲ್ಲಿ, ಈ ಸಂಸ್ಥೆಗಳ ಉತ್ಪನ್ನಗಳಿಗೆ ಎಫ್ಸಿಸಿಎಐ ಹೆಚ್ಚೂಕಡಿಮೆ ಕ್ಲೀನ್ ಚಿಟ್ ಕೊಟ್ಟಿದೆ.
ಇದನ್ನೂ ಓದಿ: 648 ಬಿಲಿಯನ್ ಡಾಲರ್ ಗಡಿ ದಾಟಿದ ಫಾರೆಕ್ಸ್ ರಿಸರ್ವ್ಸ್; ಹೊಸ ದಾಖಲೆ ಮಟ್ಟದಲ್ಲಿ ನಿಧಿ
ಹಾಂಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತೆ ಪ್ರಾಧಿಕಾರಗಳು ಈ ಎರಡು ಸಂಸ್ಥೆಗಳ ಉತ್ಪನ್ನಗಳಲ್ಲಿ ಎಥಿಲಿನ್ ಆಕ್ಸೈಡ್ ಅಂಶ ಇದೆ ಎಂದು ಹೇಳಿ ನಿರ್ಬಂಧ ಹಾಕಿತ್ತು. ಆದರೆ, ಭಾರತದಲ್ಲಿ ವಿವಿಧ ಲ್ಯಾಬ್ಗಳಲ್ಲಿ ಈ ಉತ್ಪನ್ನಗಳನ್ನು ಪರೀಕ್ಷಿಸಲಾಗಿದೆ. 28 ಲ್ಯಾಬ್ಗಳಲ್ಲಿ ನಡೆದ ಪರೀಕ್ಷೆಯಲ್ಲಿ, ಈ ಉತ್ಪನ್ನಗಳಲ್ಲಿ ಯಾವ ಎಥಿಲೀನ್ ಆಕ್ಸೈಡ್ ಅಂಶ ಇರುವುದು ಕಂಡು ಬಂದಿಲ್ಲ ಎನ್ನಲಾಗಿದೆ. ಇನ್ನೂ ಆರು ಲ್ಯಾಬ್ಗಳ ಪರೀಕ್ಷಾ ವರದಿ ಬರಬೇಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sun, 26 May 24