ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್ವೇರ್ ಸ್ಪೆಷಲಿಸ್ಟ್ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ
IT jobs in India: 2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗಿನ ಅವಧಿಯಲ್ಲಿ ಇಂಡೀಡ್ನಲ್ಲಿ ದಾಖಲಾದ ದತ್ತಾಂಶ ಪ್ರಕಾರ ಐಟಿ ಸೆಕ್ಟರ್ನ ಕೆಲಸಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಜಾಬ್ ಪೋಸ್ಟಿಂಗ್ಸ್ ಕಡಿಮೆ ಆಗಿದೆ. ದೇಶಾದ್ಯಂತ ಐಟಿ ಜಾಬ್ ಪೋಸ್ಟಿಂಗ್ಸ್, ಅಂದರೆ ಹೈರಿಂಗ್ ಶೇ. 3.6ರಷ್ಟು ಕಡಿಮೆ ಆಗಿದೆ. ಸಲ್ಲಿಕೆಯಾಗಿರುವ ಜಾಬ್ ಪೋಸ್ಟಿಂಗ್ಗಳಲ್ಲಿ ಹೈದರಾಬಾದ್ ಶೇ. 41.5ರಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಶೇ. 24ರಷ್ಟು ಜಾಬ್ ಪೋಸ್ಟಿಂಗ್ಸ್ ಹೆಚ್ಚಳವಾಗಿದೆ.
ನವದೆಹಲಿ, ಮೇ 26: ಕಳೆದ ಒಂದು ವರ್ಷದಲ್ಲಿ ಐಟಿ ಸೆಕ್ಟರ್ನಲ್ಲಿ ದೇಶಾದ್ಯಂತ ಜಾಬ್ ಪೋಸ್ಟಿಂಗ್ಸ್ ಕಡಿಮೆ ಆಗಿದೆ. ಐಟಿ ಕಂಪನಿಗಳು ಹೈರಿಂಗ್ ಮಾಡಿಕೊಳ್ಳುತ್ತಿರುವುದು ಇಳಿಕೆ ಆಗಿದೆ. ‘ಇಂಡೀಡ್’ ಎಂಬ ಹೈರಿಂಗ್ ಪ್ಲಾಟ್ಫಾರ್ಮ್ (Indeed) ಪ್ರಕಾರ 2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗಿನ 13 ತಿಂಗಳಲ್ಲಿ ಜಾಬ್ ಪೋಸ್ಟಿಂಗ್ಸ್ ಶೇ. 3.6ರಷ್ಟು ಕಡಿಮೆ ಆಗಿದೆ. ಆದರೆ, ಉದ್ಯೋಗ ಬಯಸಿ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೂಯವಾಗಿ ಹೆಚ್ಚಾಗಿದೆ. ಐಟಿ ಸಿಟಿಯಾದ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ. ಕುತೂಹಲವೆಂದರೆ ಬೆಂಗಳೂರಿಗಿಂತ ಹೈದರಾಬಾದ್ನಲ್ಲಿ ಐಟಿ ಉದ್ಯೋಗಗಳಿಗೆ ಅವಕಾಶ ಹೆಚ್ಚಾಗಿದೆ.
ಇಂಡೀಡ್ ಪ್ರಕಾರ ಹೈದರಾಬಾದ್ನಲ್ಲಿ ಐಟಿ ಜಾಬ್ ಪೋಸ್ಟಿಂಗ್ ಶೇ. 41.5ರಷ್ಟು ಏರಿದೆ. ಅಲ್ಲಿ ಐಟಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಶೇ. 161ರಷ್ಟು ಹೆಚ್ಚಾಗಿದೆ. ಇನ್ನು, ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಐಟಿ ಜಾಬ್ ಪೋಸ್ಟಿಂಗ್ನಲ್ಲಿ ಶೇ. 24ರಷ್ಟು ಹೆಚ್ಚಾಗಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಸಂಖ್ಯೆಯಲ್ಲಿ ಶೇ. 80ರಷ್ಟು ಏರಿಕೆ ಆಗಿದೆ. ಆದರೆ, ಐಟಿ ಕಂಪನಿಗಳಿಂದ ಜಾಬ್ ಆಫರ್ ಕಡಿಮೆ ಆಗಿರುವುದು ಹೌದು.
ಇದನ್ನೂ ಓದಿ: ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್
‘ಸಾಫ್ಟ್ವೇರ್ ಮತ್ತು ಐಟಿ ಜಾಬ್ಗಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕ್ಷೇತ್ರದಲ್ಲಿ ಇರುವ ಉದ್ಯೋಗಿಗಳು ಮಾತ್ರವಲ್ಲ, ಹೊಸ ವೃತ್ತಿ ಅವಕಾಶ ಕೋರುವ ಅಭ್ಯರ್ಥಿಗಳೂ ಕೂಡ ಈ ಸೆಕ್ಟರ್ನಲ್ಲಿ ಉದ್ಯೋಗಕ್ಕೆ ಆಸಕ್ತಿ ತೋರುತ್ತಿದ್ದಾರೆ. ಐಟಿ ಸೆಕ್ಟರ್ನಲ್ಲಿ ಲೇ ಆಫ್ ಹೆಚ್ಚಿದ್ದರೂ ಅದರ ಆಕರ್ಷಣೆ ಕೂಡ ಹೆಚ್ಚಿದೆ,’ ಎಂದಿದ್ದಾರೆ ಇಂಡೀಡ್ ಇಂಡಿಯಾದ ಸೇಲ್ಸ್ ಮುಖ್ಯಸ್ಥ ಶಶಿಕುಮಾರ್.
2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗೆ ಇಂಡೀಡ್ನಲ್ಲಿ ಸಲ್ಲಿಕೆಯಾದ ಜಾಬ್ ಪೋಸ್ಟಿಂಗ್ಸ್ ಮತ್ತು ಜಾಬ್ ಅರ್ಜಿಗಳ ದತ್ತಾಂಶ ಆಧಾರಿತವಾಗಿ ಈ ವಿಶ್ಲೇಷಣೆ ಮಾಡಲಾಗಿದೆ.
ಯಾವ ಸಾಫ್ಟ್ವೇರ್ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ ನೋಡಿ…
- ಅನಾಲಿಸಿಸ್: ಶೇ. 5.51
- ಎಜೈಲ್: ಶೇ. 5.39
- ಎಪಿಐ: ಶೇ. 4.5
- ಜಾವಾ ಸ್ಕ್ರಿಪ್ಟ್: ಶೇ. 4
- ಎಸ್ಕ್ಯೂಎಲ್: ಶೇ. 4
ಇದನ್ನೂ ಓದಿ: ಮೋದಿ ಮಾಡಿದಷ್ಟು ಬದಲಾವಣೆ ಯಾವ ವಿಶ್ವನಾಯಕನಿಂದಲೂ ಆಗಿಲ್ಲ: ಕ್ರಿಸ್ಟೋಫರ್ ವುಡ್
ಇಲ್ಲಿ ಎಜೈಲ್ ಎಂಬುದು ಸಾಫ್ಟ್ವೇರ್ ಪ್ರಾಜೆಕ್ಟ್ಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವ ಒಂದು ಪ್ರಕ್ರಿಯೆಯಾಗಿದೆ. ಬಹುತೇಕ ಐಟಿ ಸರ್ವಿಸ್ ಕಂಪನಿಗಳು ಈ ಫ್ರೇಮ್ವರ್ಕ್ ಅಳವಡಿಸಿಕೊಂಡಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ