ಎಫ್ ಅಂಡ್ ಒನಲ್ಲಿ ವೀಕ್ಲಿ ಎಕ್ಸ್​ಪೆರಿ ಸೇರಿದಂತೆ ಐದಾರು ನಿಯಮಗಳನ್ನು ಬದಲಿಸಿದ ಸೆಬಿ

|

Updated on: Nov 21, 2024 | 12:22 PM

F & O rules change: ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಸಾಕಷ್ಟು ಹೂಡಿಕೆದಾರರು ಬಹಳ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸರಿಪಡಿಸಲು ಸೆಬಿ ಒಂದಷ್ಟು ಕ್ರಮ ತೆಗೆದುಕೊಂಡಿದೆ. ವೀಕ್ಲಿ ಎಕ್ಸ್​ಪೈರಿ ಸೇರಿದಂತೆ ಕೆಲ ಪ್ರಮುಖ ನಿಯಮ ಬದಲಾವಣೆಗಳ ವಿವರ ಇಲ್ಲಿದೆ...

ಎಫ್ ಅಂಡ್ ಒನಲ್ಲಿ ವೀಕ್ಲಿ ಎಕ್ಸ್​ಪೆರಿ ಸೇರಿದಂತೆ ಐದಾರು ನಿಯಮಗಳನ್ನು ಬದಲಿಸಿದ ಸೆಬಿ
ಷೇರು ಮಾರುಕಟ್ಟೆ
Follow us on

ನವದೆಹಲಿ, ನವೆಂಬರ್ 21: ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಎಫ್ ಅಂಡ್ ಒ ವಿಷಯದಲ್ಲಿ ಆರು ಹೊಸ ಕ್ರಮಗಳನ್ನು ಇಂದಿನಿಂದ ಜಾರಿಗೊಳಿಸುತ್ತಿದೆ. ಷೇರು ಮಾರುಕಟ್ಟೆಯ ಟ್ರೇಡಿಂಗ್​ನ ಒಂದು ಭಾಗವಾಗಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್​ನಲ್ಲಿ ಸಾಕಷ್ಟು ಮಂದಿ ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಬಿ ಈ ನಡೆ ಇಟ್ಟಿದೆ. ನವೆಂಬರ್ 20ರಂದು ಹೊಸ ಕ್ರಮಗಳು ಜಾರಿಗೆ ಬರಬೇಕಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಚುನಾವಣೆ ನಿಮಿತ್ತ ಷೇರು ಮಾರುಕಟ್ಟೆಗೆ ರಜೆ ಇತ್ತು. ಇವತ್ತಿನಿಂದ ಈ ಹೊಸ ನಿಯಮಗಳು ಚಾಲನೆಗೆ ಬರಲಿವೆ.

ಕನಿಷ್ಠ ಗುತ್ತಿಗೆ ಮೌಲ್ಯವನ್ನು (Minimum contract value) 15 ಲಕ್ಷ ರೂಗೆ ಏರಿಸಲಾಗಿದೆ. ಇದು ಸೆಬಿ ಕೈಗೊಂಡಿರುವ ಆರೇಳು ಕ್ರಮಗಳಲ್ಲಿ ಒಂದು.

ವೀಕ್ಲಿ ಎಕ್ಸ್​ಪೈರಿಗಳ ಇಳಿಕೆ…

ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಇಂಡೆಕ್ಸ್ ಡಿರೈವೇಟಿವ್ ಕಾಂಟ್ರಾಕ್ಟ್​ಗಳ ವಾರದ ಎಕ್ಸ್​ಪೈರಿಗಳು ಹಲವಿವೆ. ಈ ಸಂಖ್ಯೆಯನ್ನು ಒಂದು ಬೆಂಚ್​ಮಾರ್ಕ್ ಇಂಡೆಕ್ಸ್​ಗೆ ವೀಕ್ಲಿ ಎಕ್ಸ್​ಪೈರಿ ಸಂಖ್ಯೆಯನ್ನು ಒಂದಕ್ಕೆ ಮಾತ್ರ ಸೀಮಿತಗೊಳಿಸಬೇಕೆಂದು ಸೆಬಿ ಹೇಳಿದೆ.

ಕಾಂಟ್ರಾಕ್ಟ್ ಸೈಜ್ ಹೆಚ್ಚಳ

ಡಿರೈವೇಟಿವ್​ಗಳಿಗೆ ಕನಿಷ್ಠ ಕಾಂಟ್ರಾಕ್ಟ್ ವ್ಯಾಲ್ಯೂ 5-10 ಲಕ್ಷ ರೂ ಇತ್ತು. ಇದನ್ನು 15 ಲಕ್ಷ ರೂಗೆ ಏರಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾಂಟ್ರಾಕ್ಟ್ ವ್ಯಾಲ್ಯೂ 15ರಿಂದ 20 ಲಕ್ಷ ಶ್ರೇಣಿಗೆ ತರಲಾಗುತ್ತದೆ.

ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್

ಅಧಿಕ ಮಾರ್ಜಿನ್ ಅವಶ್ಯಕತೆ

ಎಕ್ಸ್​ಪೈರಿ ಹಂತದಲ್ಲಿ ಎಲ್ಲಾ ಓಪನ್ ಶಾರ್ಟ್ ಆಪ್ಷನ್​ಗಳಲ್ಲಿ ಶೇ. 2ರ ನಷ್ಟದ ಮಾರ್ಜಿನ್ (ಇಎಲ್​ಎಂ) ಅನ್ನು ಇಡಲಾಗಿದೆ. ಮಾರುಕಟ್ಟೆಯ ಅತಿಯಾದ ವೈಪರೀತ್ಯಗಳಿಂದ ಹೂಡಿಕೆದಾರರನ್ನು ರಕ್ಷಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕ ಪ್ರಮಾಣದಲ್ಲಿ ಟ್ರೇಡಿಂಗ್ ಆಗುತ್ತಿರುವ ಅವಧಿಯಲ್ಲಿ ಇಂಥ ರಿಸ್ಕ್ ಅಧಿಕ ಇರುತ್ತದೆ.

ಪ್ರೀಮಿಯಮ್ ಕಲೆಕ್ಷನ್

ಆಪ್ಷನ್ ಟ್ರೇಡಿಂಗ್​ನಲ್ಲಿ ಕಾಂಟ್ರಾಕ್ಟ್ ಅನ್ನು ಮಾರಿದಾಗ ಇಡೀ ಪ್ರೀಮಿಯಮ್​ ಹಣವನ್ನು ಖರೀದಿದಾರರು ತತ್​ಕ್ಷಣವೇ ಪಾವತಿಸಬೇಕು. ಆಪ್ಷನ್ಸ್ ಕಾಂಟ್ರಾಕ್ಟ್ ಅವಧಿ ಮುಗಿಯುವವರೆಗೂ ಕಾಯಬಾರದು. ಈ ನಿಯಮ ಫೆಬ್ರುವರಿ 1ರಿಂದ ಜಾರಿಗೆ ಬರಬಹುದು. ಜನರು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಮಿತಿಮೀರಿ ತೊಡಗಿಸಿಕೊಳ್ಳುವುದನ್ನು ನಿಯಂತ್ರಿಸಲು ಇದರಿಂದ ಸಾಧ್ಯ.

ಕ್ಯಾಲಂಡರ್ ಸ್ಪ್ರೆಡ್​ಗೆ ನಿರ್ಬಂಧ

ಟ್ರೇಡರ್​ಗಳು ಹೆಚ್ಚಾಗಿ ಬಳಸುವ ಕ್ಯಾಲಂಡರ್ ಸ್ಪ್ರೆಡ್ ವಿಧಾನಕ್ಕೆ ಅಂಕುಶ ಹಾಕಲಾಗಿದೆ. ಒಂದೇ ದಿನ ಎಕ್ಸ್​ಪೈರಿ ಆಗುವ ಕಾಂಟ್ರಾಕ್ಟ್​ಗಳಿಗೆ ಕ್ಯಾಲಂಡರ್ ಸ್ಪ್ರೆಡ್ ವಿಧಾನ ಅನುಸರಿಸಲು ಆಗುವುದಿಲ್ಲ.

ಇದನ್ನೂ ಓದಿ: ಭಾರತದ ಮೊದಲ ಮೊಬೈಲ್ ಕರೆ ಯಾರು ಮಾಡಿದ್ದು, ಯಾವ ಹ್ಯಾಂಡ್​ಸೆಟ್, ಆಗ ನಿಮಿಷಕ್ಕೆ ಎಷ್ಟು ದುಡ್ಡಿತ್ತು, ಇಲ್ಲಿದೆ ಡೀಟೇಲ್ಸ್

ಪೊಸಿಶನ್ ಲಿಮಿಟ್ಸ್​ನ ಇಂಟ್ರಾಡೇ ಮಾನಿಟರಿಂಗ್

ಈಕ್ವಿಟಿ ಇಂಡೆಕ್ಸ್ ಡಿರೈವೇಟಿವ್​ಗಳ ಪೊಸಿಶನ್ ಲಿಮಿಟ್​ಗಳ ಬಗ್ಗೆ ಷೇರು ವಿನಿಮಯ ಕೇಂದ್ರಗಳು ನಿಗಾ ಇಡಬೇಕು. ಟ್ರೇಡರ್​ಗಳು ಪೊಸಿಶನ್ ಲಿಮಿಟ್​ನ ಮಿತಿಮೀರಿ ಹೋಗದಂತೆ ಎಚ್ಚರವಹಿಸಲು ಸಾಧ್ಯವಾಗುತ್ತದೆ. ಪೊಸಿಶನ್ ಲಿಮಿಟ್ ಎಂಬುದು ಒಬ್ಬ ಟ್ರೇಡರ್ ಒಂದು ಸಮಯದಲ್ಲಿ ಹೊಂದಿರಬಹುದಾದ ಗರಿಷ್ಠ ಆಪ್ಷನ್ ಕಾಂಟ್ರಾಕ್ಟ್​ಗಳಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ