ಪಡಿತರ ವ್ಯವಸ್ಥೆಯಲ್ಲಿ 58 ಲಕ್ಷ ನಕಲಿ ರೇಶನ್ ಕಾರ್ಡ್ ಪತ್ತೆ; ಡಿಜಿಟಲೀಕರಣದಿಂದ ಇನ್ನೂ ಹಲವು ಲಾಭ

Digitisation drive effect in PDS: ಪಬ್ಲಿಕ್ ಡಿಸ್ಟ್ರಿಬ್ಯೂಶನ್ ಸಿಸ್ಟಂ ಅಥವಾ ಪಿಡಿಎಸ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿದ ಬಳಿಕ ಪಡಿತರ ಸೋರಿಕೆ ಕಡಿಮೆ ಆಗಿದೆ. 20.4 ರೇಶನ್ ಕಾರ್ಡ್​ಗಳ ಪೈಕಿ 58 ಲಕ್ಷ ನಕಲಿ ರೇಶನ್ ಕಾರ್ಡ್​ಗಳು ಪತ್ತೆಯಾಗಿವೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಶೇ. 64ರಷ್ಟು ರೇಷನ್ ಕಾರ್ಡ್​ದಾರರ ಇಕೆವೈಸಿ ನಡೆದಿದೆ.

ಪಡಿತರ ವ್ಯವಸ್ಥೆಯಲ್ಲಿ 58 ಲಕ್ಷ ನಕಲಿ ರೇಶನ್ ಕಾರ್ಡ್ ಪತ್ತೆ; ಡಿಜಿಟಲೀಕರಣದಿಂದ ಇನ್ನೂ ಹಲವು ಲಾಭ
ನ್ಯಾಯಬೆಲೆ ಅಂಗಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2024 | 2:25 PM

ನವದೆಹಲಿ, ನವೆಂಬರ್ 21: ಡಿಜಿಟಲ್ ಆರ್ಥಿಕತೆಯಲ್ಲಿ ಸೋರಿಕೆಗಳು ಕಡಿಮೆ. ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಹೆಚ್ಚಾದಂತೆ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯ ನಿರ್ವಹಣೆ ಹೆಚ್ಚು ಸಮರ್ಪಕವಾಗಿ ಆಗುತ್ತಿದೆ. ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ ವಿಧಾನ ಇದಕ್ಕೆ ಉದಾಹರಣೆ. ಹಾಗೆಯೇ, ಪಡಿತರ ವಿತರಣೆ ವ್ಯವಸ್ಥೆಯಲ್ಲೂ ಡಿಜಿಟಲೀಕರಣವು ಗಮನಾರ್ಹ ಪರಿವರ್ತನೆ ತಂದಿದೆ. ಕೇಂದ್ರ ಆಹಾರ ಸಚಿವಾಲಯ ನಿನ್ನೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 58 ಲಕ್ಷ ನಕಲಿ ರೇಷನ್ ಕಾರ್ಡ್​ಗಳು ಪತ್ತೆಯಾಗಿವೆಯಂತೆ.

ದೇಶಾದ್ಯಂತ 20 ಕೋಟಿಗೂ ಅಧಿಕ ರೇಶನ್ ಕಾರ್ಡ್​ಗಳು, 80 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲಾ ರೇಶನ್ ಕಾರ್ಡ್​ಗಳಿಗೂ ಆಧಾರ್ ಅಥೆಂಟಿಕೇಶನ್ ಮತ್ತು ಇಕೆವೈಸಿ ಮಾಡಿಸಲಾಯಿತು. ಬಹುತೇಕ ಎಲ್ಲಾ ಪಡಿತರ ಚೀಟಿಗಳ ಡಿಜಿಟಲೀಕರಣ ಮಾಡಲಾಯಿತು. ಶೇ. 99.8ರಷ್ಟು ರೇಶನ್ ಕಾರ್ಡ್​ಗಳ ಆಧಾರ್ ದೃಢೀಕರಣ ಸಾಧ್ಯವಾಗಿದೆ. ಶೇ. 98.7ರಷ್ಟು ಫಲಾನುಭವಿಗಳ ಬಯೋಮೆಟ್ರಿಕ್ ಅಥೆಂಟಿಕೇಶನ್ ನಡೆದಿದೆ.

ಇದನ್ನೂ ಓದಿ: ಜೊಮಾಟೋದಲ್ಲಿ ಈ ಹುದ್ದೆಗೆ ಒಂದು ವರ್ಷ ಸಂಬಳ ಇಲ್ಲ; ಅಭ್ಯರ್ಥಿಯೇ 20 ಲಕ್ಷ ರು ಕೊಡಬೇಕಂತೆ… ಆದಾಗ್ಯೂ ಸಲ್ಲಿಕೆಯಾಗಿವೆ ಸಖತ್ ಅರ್ಜಿಗಳು

ದೇಶಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ 5.33 ಲಕ್ಷ ಇ-ಪಿಒಎಸ್ ಸಾಧನಗಳನ್ನು ಅಳವಡಿಸಲಾಗಿದೆ. ಇಲ್ಲಿ ಪಡಿತರ ವಿತರಣೆ ವೇಳೆ ಆಧಾರ್ ದೃಢೀಕರಣ ಮಾಡಲು ಸಾಧ್ಯವಾಗಿದೆ. ಸಚಿವಾಲಯದ ಮಾಹಿತಿ ಪ್ರಕಾರ, ಶೇ. 98ರಷ್ಟು ಆಹಾರಧಾನ್ಯಗಳ ವಿತರಣೆಗೆ ಆಧಾರ್ ದೃಢೀಕರಣ ಪಡೆಯಲಾಗುತ್ತಿದೆ. ಇದರಿಂದ ಫಲಾನುಭವಿಗಳಲ್ಲದವರು ಪಡಿತರ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುವುದು ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

ಸರ್ಕಾರದ ಇಕೆವೈಸಿ ಯೋಜನೆಯು ಇನ್ನೂ ಚಾಲನೆಯಲ್ಲಿದೆ. ಪಡಿತರ ಫಲಾನುಭವಿಗಳ ಪೈಕಿ ಶೇ. 64 ಮಂದಿ ಇಕೆವೈಸಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಉಳಿದ ಫಲಾನುಭವಿಗಳಿಂದ ಇಕೆವೈಸಿ ಪಡೆಯುವ ಪ್ರಯತ್ನ ನಡೆಯುತ್ತಿದೆ.

ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್

ರೇಷನ್ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿರುವುದು ಸೋರಿಕೆಯನ್ನು ನಿಗ್ರಹಿಸುವುದರ ಜೊತೆಗೆ ಇನ್ನೂ ಹಲವು ಲಾಭವನ್ನೂ ನೀಡಿದೆ. ‘ಒನ್ ನೇಶನ್ ಒನ್ ರೇಶನ್ ಕಾರ್ಡ್’ ಸ್ಕೀಮ್​ನಲ್ಲಿ ಈಗ ಪಡಿತರ ಫಲಾನುಭವಿಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯುವುದು ಸಾಧ್ಯವಾಗಿದೆ. ಆಧಾರ್ ದೃಢೀಕರಣ ಮೂಲಕ ರೇಶನ್ ನೀಡುವ ವ್ಯವಸ್ಥೆ ಬಂದ ಬಳಿಕ ಇದು ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ