ಜೊಮಾಟೋದಲ್ಲಿ ಈ ಹುದ್ದೆಗೆ ಒಂದು ವರ್ಷ ಸಂಬಳ ಇಲ್ಲ; ಅಭ್ಯರ್ಥಿಯೇ 20 ಲಕ್ಷ ರು ಕೊಡಬೇಕಂತೆ… ಆದಾಗ್ಯೂ ಸಲ್ಲಿಕೆಯಾಗಿವೆ ಸಖತ್ ಅರ್ಜಿಗಳು

Zomato makes special job offer: ಜೊಮಾಟೊ ಸಂಸ್ಥೆಗೆ ಚೀಫ್ ಆಫ್ ಸ್ಟ್ಯಾಫ್ ಹುದ್ದೆಗೆ ಅಭ್ಯರ್ಥಿ ಬೇಕಾಗಿದ್ದಾರೆ. ಮುಖ್ಯ ಎಚ್​ಆರ್ ಸ್ಥಾನದ ಈ ಹುದ್ದೆಗೆ ಒಂದು ವರ್ಷ ಸಂಬಳ ಕೊಡಲಾಗುವುದಿಲ್ಲ. ಕೆಲಸ ಪಡೆಯಲು ಅಭ್ಯರ್ಥಿಯೇ 20 ಲಕ್ಷ ರೂ ಪಾವತಿಸಬೇಕಂತೆ. ಇದು ಒಂದು ವರ್ಷದ ಫಾಸ್ಟ್ ಟ್ರ್ಯಾಕ್ ಲರ್ನಿಂಗ್ ಪ್ರೋಗ್ರಾಮ್ ಎನ್ನುತ್ತಾರೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್.

ಜೊಮಾಟೋದಲ್ಲಿ ಈ ಹುದ್ದೆಗೆ ಒಂದು ವರ್ಷ ಸಂಬಳ ಇಲ್ಲ; ಅಭ್ಯರ್ಥಿಯೇ 20 ಲಕ್ಷ ರು ಕೊಡಬೇಕಂತೆ... ಆದಾಗ್ಯೂ ಸಲ್ಲಿಕೆಯಾಗಿವೆ ಸಖತ್ ಅರ್ಜಿಗಳು
ಜೊಮಾಟೊ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2024 | 1:02 PM

ನವದೆಹಲಿ, ನವೆಂಬರ್ 21: ಹೊಸ ಪ್ರಯೋಗಗಳಿಂದ ಸದಾ ಸುದ್ದಿಯಲ್ಲಿರುವ ಜೊಮಾಟೊ ಸಂಸ್ಥೆಗೆ ಈಗ ಹೊಸ ಸ್ಟ್ಯಾಫ್ ಚೀಫ್ ಬೇಕಾಗಿದೆಯಂತೆ. ಜೊಮಾಟೋ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರೇ ಖುದ್ದಾಗಿ ಚೀಫ್ ಅಫ್ ಸ್ಟ್ಯಾಫ್ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಈ ಹುದ್ದೆ ಪಡೆಯಲು ಅಭ್ಯರ್ಥಿಗಳಿಗೆ ಹಾಕಲಾಗಿರುವ ಕೆಲ ಮಾನದಂಡಗಳು ನಿಜಕ್ಕೂ ಕುತೂಹಲ ಮೂಡಿಸುತ್ತವೆ. ಚೀಫ್ ಆಫ್ ಸ್ಟ್ಯಾಫ್ ಸ್ಥಾನ ಇರುವುದು ಒಂದೇ ಒಂದು ಮಾತ್ರ. ಒಂದು ವರ್ಷ ಸಂಬಳ ಇಲ್ಲದೇ ಕೆಲಸ ಮಾಡಬೇಕು ಎಂಬುದು ಷರತ್ತುಗಳಲ್ಲಿ ಒಂದು. ಅದಕ್ಕಿಂತ ಮುಖ್ಯವಾದ ಇನ್ನೂ ಕೆಲ ಷರತ್ತುಗಳಿವೆ….

ಜೊಮಾಟೊದಲ್ಲಿ ಚೀಫ್ ಆಫ್ ಸ್ಟ್ಯಾಫ್ ಸ್ಥಾನಕ್ಕೆ ಅಭ್ಯರ್ಥಿಗಳಿಗೆ ಇರುವ ಷರತ್ತುಗಳಿವು…

  • ಕೆಲಸ ಸೇರಿ ಒಂದು ವರ್ಷದವರೆಗೆ ಸಂಬಳ ನೀಡಲಾಗುವುದಿಲ್ಲ.
  • ಅಭ್ಯರ್ಥಿಯೇ 20 ಲಕ್ಷ ರೂ ಕೊಟ್ಟು ಕೆಲಸಕ್ಕೆ ಸೇರಬೇಕು

ಇಲ್ಲಿ ಅಭ್ಯರ್ಥಿಯು 20 ಲಕ್ಷ ರೂ ಹಣವನ್ನು ಜೊಮಾಟೊದ ಫೀಡಿಂಗ್ ಇಂಡಿಯಾ ಎಂಬ ಚ್ಯಾರಿಟಿಗೆ ಡೊನೇಶನ್ ರೂಪದಲ್ಲಿ ಕೊಡಬೇಕು. ಇದಕ್ಕೆ ಪ್ರತಿಯಾಗಿ, ಅಭ್ಯರ್ಥಿ ತಿಳಿಸಿದ ಯಾವುದಾದರೂ ಚಾರಿಟಿಗೆ ಜೊಮಾಟೊ 50 ಲಕ್ಷ ರೂ ಹಣವನ್ನು ನೀಡುತ್ತದೆ.

ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್

ಒಂದು ವರ್ಷದ ಬಳಿಕ, ಅಂದರೆ ಎರಡನೇ ವರ್ಷದಿಂದ ಅಭ್ಯರ್ಥಿಗೆ ಸಂಬಳ ಸಿಗತೊಡಗುತ್ತದೆ. ಸಂಬಳ ಕನಿಷ್ಠ ವರ್ಷಕ್ಕೆ 50 ಲಕ್ಷ ರೂನಷ್ಟಾದರೂ ಇರುತ್ತದೆ ಎಂದು ಹೇಳಲಾಗಿದೆ.

ಕೆಲಸ ಸೇರಲು 20 ಲಕ್ಷ ರೂ ಯಾಕೆ ಕೊಡಬೇಕು?

ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸ್ಕೂಲ್​ನಲ್ಲಿ ಎರಡು ವರ್ಷದ ಡಿಗ್ರಿ ಮಾಡುವಾಗ ಏನು ಕಲಿಯುತ್ತೀರೀ, ಅದಕ್ಕೆ ಹತ್ತು ಪಟ್ಟು ಹೆಚ್ಚನ್ನು ಇಲ್ಲಿ ಕಲಿಯಲು ಅವಕಾಶ ಸಿಗುತ್ತದೆ. ನನ್ನೊಂದಿಗೆ ಹಾಗೂ ಕನ್ಸೂಮರ್ ಟೆಕ್ ಕ್ಷೇತ್ರದ ಅತ್ಯಂತ ಜಾಣ ಮಂದಿ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ.

ಇಲ್ಲಿ ಕೆಲಸಕ್ಕೆ ಸೇರಲು ಬಯಸುವವರು ಇದನ್ನು ಸಂಬಳದ ದೃಷ್ಟಿಯಲ್ಲಿ ನೋಡುವ ಬದಲು ಕಲಿಕೆಯ ಅವಕಾಶವಾಗಿ ಕಾಣಬೇಕು. ಇದು ಒಂದು ರೀತಿಯಲ್ಲಿ ಫಾಸ್ಟ್ ಟ್ರ್ಯಾಕ್ ಲರ್ನಿಂಗ್ ಪ್ರೋಗ್ರಾಮ್ ಇದ್ದಂತೆ. ವೈಯಕ್ತಿಕವಾಗಿ ಮತ್ತು ವೃತ್ತಿಪರರಾಗಿ ನೀವು ಕಲಿಯುತ್ತೀರಿ ಎಂದು ದೀಪಿಂದರ್ ಗೋಯಲ್ ಅವರು ತಮ್ಮ ಎಕ್ಸ್​ನಲ್ಲಿ ಚೀಫ್ ಆಫ್ ಸ್ಟ್ಯಾಫ್​ನ ಜಾಬ್ ಪ್ರೊಫೈಲ್ ವಿವರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 24 ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರಿಂದ ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ

ಬಯೋಡಾಟಾ ಬೇಡ್ರಪ್ಪ ಎಂದು ಮನವಿ…

ಜೊಮಾಟೊ ಸಿಇಒ ದೀಪಿಂದರ್ ಗೋಯಲ್, ಸಿಒಎಸ್ ಹುದ್ದೆಗೆ ರೆಸ್ಯೂಮ್ ಬಿಲ್ಡರ್​ಗಳು ಬೇಡ. ಕಲಿಯುವವರು ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. d@zomato.com ಎಂಬ ಐಡಿಗೆ 200 ಪದಗಳು ಮೀರದಂತೆ ಒಂದು ಕವರ್ ಲೆಟರ್ ಕಳುಹಿಸುವಂತೆ ತಿಳಿಸಲಾಗಿದೆ. ಹಾಗೆಯೇ, ಯಾವುದೇ ರೆಸ್ಯೂಮೆ (ಬಯೋಡಾಟಾ) ಲಗತ್ತಿಸಬಾರದು ಎಂದಿದೆ. ಕವರ್ ಲೆಟರ್​ನಲ್ಲಿ 200 ಪದಗಳಲ್ಲಿ ಅಭ್ಯರ್ಥಿಗಳು ತಮ್ಮ ಬಗ್ಗೆ ಸಾಧ್ಯವಾದಷ್ಟನ್ನು ಹೇಳಿಕೊಳ್ಳಬಹುದು.

ಈ ಕೆಲಸಕ್ಕೆ ಎಷ್ಟು ಅರ್ಜಿ ಸಲ್ಲಿಕೆಯಾಗಿರಬಹುದು? ದೀಪಿಂದರ್ ಗೋಯಲ್ ನಿನ್ನೆ ಈ ಪೋಸ್ಟ್ ಹಾಕಿದ್ದರು. ಇವತ್ತು ಮಧ್ಯಾಹ್ನ ಅಪ್​ಡೇಟ್ ಪೋಸ್ಟ್ ಹಾಕಿದ್ದು, ಅದರ ಪ್ರಕಾರ ಇಲ್ಲಿಯವರೆಗೆ 10,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್