AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕಡಿಮೆಯಾದ ನಿರುದ್ಯೋಗ; ಸಂಬಳದ ಕೆಲಸಗಳ ಪ್ರಮಾಣವೂ ಹೆಚ್ಚಳ

Unemployment rate in India: ಭಾರತದಲ್ಲಿ 2024ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ನಗರ ಭಾಗದಲ್ಲಿ 15 ವರ್ಷ ಮೇಲ್ಪಟ್ಟವರ ನಿರುದ್ಯೋಗ ಪ್ರಮಾಣ ಶೇ. 6.4ಕ್ಕೆ ಇಳಿದಿದೆ. ಇದು ಐತಿಹಾಸಿಕ ಕನಿಷ್ಠ ನಿರುದ್ಯೋಗ ದರ ಎನಿಸಿದೆ. ಈ ಅವಧಿಯಲ್ಲಿ ಸಕ್ರಿಯ ಕಾರ್ಮಿಕರ ಅಥವಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳಗೊಂಡಿದೆ. ವರ್ಕರ್ ಪಾಪುಲೇಶನ್ ರೇಶಿಯೋ ಕೂಡ ಹೆಚ್ಚಿದೆ.

ಭಾರತದಲ್ಲಿ ಕಡಿಮೆಯಾದ ನಿರುದ್ಯೋಗ; ಸಂಬಳದ ಕೆಲಸಗಳ ಪ್ರಮಾಣವೂ ಹೆಚ್ಚಳ
ನಿರುದ್ಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2024 | 3:08 PM

Share

ನವದೆಹಲಿ, ನವೆಂಬರ್ 21: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ದರ ಕ್ರಮೇಣವಾಗಿ ಇಳಿಮುಖವಾಗುತ್ತಿದೆ. ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ 2024ರ ಜುಲೈನಿದ ಸೆಪ್ಟೆಂಬರ್​ವರೆಗಿನ ಮೂರು ತಿಂಗಳ ಅವಧಿಯಲ್ಲಿ ನಗರಭಾಗದಲ್ಲಿ ನಿರುದ್ಯೋಗ ದರ ಶೇ. 6.4ರಷ್ಟಿದೆ. ಇದು 15 ವರ್ಷ ಮೇಲ್ಪಟ್ಟ ವ್ಯಕ್ತಿಗಳ ನಿರುದ್ಯೋಗ ಪ್ರಮಾಣವಾಗಿದೆ. ಕಳೆದ ವರ್ಷದ ಇದೇ ಕ್ವಾರ್ಟರ್​ನಲ್ಲಿ ಶೇ. 6.6ರಷ್ಟು ನಿರುದ್ಯೋಗ ದರ ಇತ್ತು.

ಇದೇ ವೇಳೆ, ಕಾರ್ಮಿಕರ ಪಾಲ್ಗೊಳ್ಳುವಿಕೆ ದರ (ಎಲ್​ಎಫ್​ಪಿಆರ್) ಉತ್ತಮಗೊಂಡಿದೆ. ಹಣಕಾಸು ವರ್ಷದ ಈ ಎರಡನೇ ಕ್ವಾರ್ಟರ್​ನಲ್ಲಿ ಕಾರ್ಮಿಕರ ದರ ಶೇ. 50.4ರಷ್ಟಿರುವುದು ತಿಳಿದುಬಂದಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಇದು ಶೇ. 49.3ರಷ್ಟಿತ್ತು.

ಇಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ ದರ ಎಂದರೆ ಒಟ್ಟಾರೆ ಜನಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ಮತ್ತು ಕೆಲಸಕ್ಕೆ ಯತ್ನಿಸುತ್ತಿರುವ ವ್ಯಕ್ತಿಗಳ ಸಂಖ್ಯೆಯಾಗಿದೆ.

ಇದನ್ನೂ ಓದಿ: ಪಡಿತರ ವ್ಯವಸ್ಥೆಯಲ್ಲಿ 58 ಲಕ್ಷ ನಕಲಿ ರೇಶನ್ ಕಾರ್ಡ್ ಪತ್ತೆ; ಡಿಜಿಟಲೀಕರಣದಿಂದ ಇನ್ನೂ ಹಲವು ಲಾಭ

ಇನ್ನು, ಕಾರ್ಮಿಕ ಸಂಖ್ಯೆ ಅನುಪಾತ ಅಥವಾ ವರ್ಕರ್ ಪಾಪುಲೇಶನ್ ರೇಶಿಯೋ (ಡಬ್ಲ್ಯುಪಿಆರ್) ಶೇ. 46ರಿಂದ ಶೇ. 47.3ಕ್ಕೆ ಏರಿದೆ. ಡಬ್ಲ್ಯುಪಿಆರ್ ಎಂದರೆ ಒಟ್ಟಾರೆ ಜನಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಪ್ರಮಾಣವಾಗಿದೆ.

ರೆಗ್ಯುಲರ್ ಜಾಬ್ ಪ್ರಮಾಣ ಹೆಚ್ಚಳ

ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಒಟ್ಟಾರೆ ಉದ್ಯೋಗಿಗಳ ಪೈಕಿ ನಿಯಮಿತ ಉದ್ಯೋಗಿಗಳು ಅಥವಾ ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳ ಪ್ರಮಾಣ ಶೇ. 48.3ರಿಂದ ಶೇ. 49.4ಕ್ಕೆ ಏರಿದೆ.

ಇದನ್ನೂ ಓದಿ: ಜೊಮಾಟೋದಲ್ಲಿ ಈ ಹುದ್ದೆಗೆ ಒಂದು ವರ್ಷ ಸಂಬಳ ಇಲ್ಲ; ಅಭ್ಯರ್ಥಿಯೇ 20 ಲಕ್ಷ ರು ಕೊಡಬೇಕಂತೆ… ಆದಾಗ್ಯೂ ಸಲ್ಲಿಕೆಯಾಗಿವೆ ಸಖತ್ ಅರ್ಜಿಗಳು

ರೀಟೇಲ್ ಸೇಲ್ಸ್, ಪ್ರವಾಸೋದ್ಯಮ, ಆತಿಥ್ಯೋದ್ಯಮ, ಹೆಲ್ತ್​ಕೇರ್, ರಿಯಲ್ ಎಸ್ಟೇಟ್ ಇತ್ಯಾದಿ ಟರ್ಷಿಯರಿ ಸೆಕ್ಟರ್​ಗಳಲ್ಲಿನ ಉದ್ಯೋಗಗಳ ಪ್ರಮಾಣ ಶೇ. 61.5ರಿಂದ ಶೇ. 62.3ಕ್ಕೆ ಏರಿದೆ. ಇನ್ನು, ಕೃಷಿ ವಲಯದಲ್ಲಿ ಉದ್ಯೋಗ ಕಡಿಮೆ ಆಗಿದೆ. ಅಂದರೆ, ಜನರು ಕೃಷಿಯಿಂದ ಹೊರಬಂದು ಬೇರೆ ಫಾರ್ಮಲ್ ಸೆಕ್ಟರ್​ನಲ್ಲಿ ಕೆಲಸ ಮಾಡುತ್ತಿರುವುದನ್ನು ಇದು ತೋರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ