AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊದಲ ಮೊಬೈಲ್ ಕರೆ ಯಾರು ಮಾಡಿದ್ದು, ಯಾವ ಹ್ಯಾಂಡ್​ಸೆಟ್, ಆಗ ನಿಮಿಷಕ್ಕೆ ಎಷ್ಟು ದುಡ್ಡಿತ್ತು, ಇಲ್ಲಿದೆ ಡೀಟೇಲ್ಸ್

India's first mobile phone call: ಭಾರತದ ಮೊತ್ತಮೊದಲ ಮೊಬೈಲ್ ಕರೆ ಆಗಿದ್ದು 1995ರ ಜುಲೈ 31ರಂದು. ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ತಮ್ಮ ನೊಕಿಯಾ ಹ್ಯಾಂಡ್​ಸೆಟ್​ನಿಂದ ಕೇಂದ್ರ ಸಚಿವ ಸುಖರಾಮ್​ಗೆ ಕರೆ ಮಾಡಿದ್ದರು. ಅಂದಿನ ಸಮಯದಲ್ಲಿ ಒಂದು ಮೊಬೈಲ್ ಕರೆಗೆ ನಿಮಿಷಕ್ಕೆ 8 ರೂಗೂ ಹೆಚ್ಚು ದರ ಇತ್ತು.

ಭಾರತದ ಮೊದಲ ಮೊಬೈಲ್ ಕರೆ ಯಾರು ಮಾಡಿದ್ದು, ಯಾವ ಹ್ಯಾಂಡ್​ಸೆಟ್, ಆಗ ನಿಮಿಷಕ್ಕೆ ಎಷ್ಟು ದುಡ್ಡಿತ್ತು, ಇಲ್ಲಿದೆ ಡೀಟೇಲ್ಸ್
ಜ್ಯೋತಿ ಬಸು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 20, 2024 | 3:15 PM

Share

ಅಂದು 1995, ಜುಲೈ 31. ಭಾರತದ ಟೆಲಿಕಾಂ ವಲಯಕ್ಕೆ ಐತಿಹಾಸಿಕ ದಿನ. ಭಾರತದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಚಾಲನೆಗೊಂಡ ದಿನ. ಮೊತ್ತಮೊದಲ ಮೊಬೈಲ್ ಕರೆ ಅಂದು ಆಗಿತ್ತು. ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು (ಈಗ ದಿವಂಗತ) ಆ ಕರೆ ಮಾಡಿದ ವ್ಯಕ್ತಿ. ಕೇಂದ್ರ ಸಂವಹನ ಸಚಿವ ಸುಖ್ ರಾಮ್ ಅವರಿಗೆ ಜ್ಯೋತಿ ಬಸು ಮೊಬೈಲ್​ನಲ್ಲಿ ಕರೆ ಮಾಡಿ ಮಾತನಾಡಿದರು. ಜ್ಯೋತಿ ಬಸು ಈ ಮೊಬೈಲ್ ಕರೆಗೆ ಬಳಸಿದ್ದು ನೊಕಿಯಾದ ಒಂದು ಹ್ಯಾಂಡ್​ಸೆಟ್ ಅನ್ನು. ಇದರೊಂದಿಗೆ ಭಾರತದಲ್ಲಿ ಹೊಸ ಸಂವಹನ ಯುಗ ಆರಂಭವಾಯಿತು.

ಮೋದಿ ಟೆಲ್​ಸ್ಟ್ರಾ ನೆಟ್ವರ್ಕ್

ಮೋದಿ ಟೆಲ್​ಸ್ಟ್ರಾ (Modi Telstra) ಎಂಬ ಕಂಪನಿ 1993ರಲ್ಲಿ ಭಾರತದಲ್ಲಿ ಮೊತ್ತಮೊದಲ ಸೆಲೂಲಾರ್ ಸರ್ವಿಸ್ ಆರಂಭಿಸಿತು. ಇದೇ ನೆಟ್ವರ್ಕ್​ನಲ್ಲಿ ಭಾರತದ ಮೊತ್ತಮೊದಲ ಮೊಬೈಲ್ ಕರೆ ಆಗಿದ್ದು. ಭಾರತ ಮೂಲದ ಸಿಂಗಾಪುರ್ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಅವರು ಆಸ್ಟ್ರೇಲಿಯಾದ ಟೆಲ್​ಸ್ಟ್ರಾ ಜೊತೆ ಸೇರಿ ಮೋದಿ ಟೆಲ್​ಸ್ಟ್ರಾ ನೆಟ್ವರ್ಕ್ ಎನ್ನುವ ಕಂಪನಿಯನ್ನು ಸ್ಥಾಪಿಸಿ ಭಾರತಕ್ಕೆ ಮೊಬೈಲ್ ನೆಟ್ವರ್ಕ್ ತಂದಿದ್ದರು. ಮುಂದೆ ಇದು ಸ್ಪೈಸ್ ನೆಟ್ವರ್ಕ್ ಆಗಿ ಬದಲಾಯಿತು.

ಇದನ್ನೂ ಓದಿ: ಭಾರತದ ಬಾಹ್ಯಾಕಾಶ ಉದ್ಯಮದ ಭವಿಷ್ಯದ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದ ಇಸ್ರೋ ಮುಖ್ಯಸ್ಥ ಸೋಮನಾಥ್

ಅಂದು ಮೊಬೈಲ್ ಕಾಲ್​ನ ಬೆಲೆ ಅಷ್ಟಿಷ್ಟಲ್ಲ…!

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಕಾಲಿಡುವವರೆಗೂ ಮೊಬೈಲ್ ಫೋನ್ ಕರೆಯ ದರ ಬಹಳ ದುಬಾರಿಯಾಗಿತ್ತು. 1995ರಲ್ಲಿ ಮೊಬೈಲ್ ಫೋನ್ ಕರೆ ವ್ಯವಸ್ಥೆ ಚಾಲೂಗೊಂಡಾಗ ಬೆಲೆ ಬಲು ದುಬಾರಿ ಎನಿಸಿತ್ತು. ಒಂದು ನಿಮಿಷ ಫೋನ್​ನಲ್ಲಿ ಮಾತನಾಡಲು 8.4 ರೂ ಬೆಲೆ. ಇದು ಇನ್ಕಮಿಂಗ್ ಮತ್ತು ಔಟ್​ಗೋಯಿಂಗ್ ಎರಡಕ್ಕೂ ದರ ವಿಧಿಸಲಾಗುತ್ತಿತ್ತು. ಇನ್ನು, ಪೀಕ್ ಅವರ್​ಗಳಲ್ಲಿ ಕರೆ ದರ ನಿಮಿಷಕ್ಕೆ 16.8 ರೂ ಆಗುತ್ತಿತ್ತು.

ಆರಂಭದಲ್ಲಿ ಇಷ್ಟು ದುಬಾರಿಯಾಗಿದ್ದ ಮೊಬೈಲ್ ಕರೆ ದರಗಳು ಕ್ರಮೇಣವಾಗಿ ಕಡಿಮೆ ಆಗಿದ್ದವು. ತಂತ್ರಜ್ಞಾನ ಆವಿಷ್ಕಾರದಿಂದಾಗಿ ಇದು ಸಾಧ್ಯವಾಯಿತು. 2016ರಲ್ಲಿ ರಿಲಾಯನ್ಸ್ ಜಿಯೋ ಮಾರುಕಟ್ಟೆ ಬಂದು ಒಂದು ರೀತಿಯಲ್ಲಿ ಕ್ರಾಂತಿಯನ್ನೇ ತಂದಿತು. ಫೋನ್ ಕರೆಗಳು ಉಚಿತವಾಗಿ ಸಿಗತೊಡಗಿದವು. ಕಡಿಮೆ ಬೆಲೆಗೆ ಡಾಟಾ ಸಿಕ್ಕಿತು. ಜಿಯೋದ ಈ ಟೆಲಿಕಾಂ ಹಬ್ಬದಲ್ಲಿ ಏರ್ಟೆಲ್, ವೊಡಾಫೋನ್ ಮತ್ತಿತರ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳೂ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಯಿತು.

ಇದನ್ನೂ ಓದಿ: ಮುಂದಿನ ವರ್ಷ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ ಸಾಧ್ಯತೆ: ಗೋಲ್ಡ್​ಮನ್ ಸ್ಯಾಕ್ಸ್ ಗ್ರೂಪ್ ಅಂದಾಜು

ಇದರಿಂದ ಮೊಬೈಲ್ ಗ್ರಾಹಕರಿಗೆ ಉತ್ತಮ ದರದಲ್ಲಿ ಟೆಲಿಕಾಂ ಸೇವೆ ಸಿಗತೊಡಗಿತು. ಭಾರತದಲ್ಲಿ ಡಿಜಿಟಲ್ ಕ್ರಾಂತಿ ಆಗಲು ಜಿಯೋ ಒಂದು ರೀತಿಯಲ್ಲಿ ಅಡಿಪಾಯ ಹಾಕಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ