ಗ್ಯಾಂಗ್ಲಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 2023 ರ ಭರವಸೆಯ ಮತ್ತು ನವೀನ ತಂತ್ರಜ್ಞಾನ ಕಂಪನಿ ಪ್ರಶಸ್ತಿಯನ್ನು ಗೆದ್ದಿದೆ
ಮಣಿಪಾಲದ ಕರ್ನಾಟಕ ಸರಕಾರ-ಬಯೋ ಇನ್ಕುಬೇಟರ್ನಲ್ಲಿನ ಗ್ಯಾಂಗ್ಲಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ಗೆ "ಫ್ಯೂಚರಿಸ್ಟಿಕ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಮತ್ತು ರಿಸರ್ಚ್" ವಿಭಾಗದಲ್ಲಿ ಕರ್ನಾಟಕದ ಪ್ರತಿಷ್ಠಿತ “ಪ್ರಾಮಿಸಿಂಗ್ ಅಂಡ್ ಇನ್ನೋವೆಟಿವೇ ಟೆಕ್ನಾಲಜಿ ಕಂಪನಿ- 2023 ” ಎಂಬ ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಣಿಪಾಲದ ಕರ್ನಾಟಕ ಸರಕಾರ-ಬಯೋ ಇನ್ಕುಬೇಟರ್ನಲ್ಲಿನ ಗ್ಯಾಂಗ್ಲಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ಗೆ (Ganglia Technologies Private Ltd) “ಫ್ಯೂಚರಿಸ್ಟಿಕ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಮತ್ತು ರಿಸರ್ಚ್” ವಿಭಾಗದಲ್ಲಿ ಕರ್ನಾಟಕದ ಪ್ರತಿಷ್ಠಿತ “ಪ್ರಾಮಿಸಿಂಗ್ ಅಂಡ್ ಇನ್ನೋವೆಟಿವೇ ಟೆಕ್ನಾಲಜಿ ಕಂಪನಿ- 2023 ” ಎಂಬ ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉದ್ಯಮಶೀಲತೆ, ನಾವೀನ್ಯತೆ ಮತ್ತು ವಾಣಿಜ್ಯ ಹಾಗೂ ವ್ಯಾಪಾರ ಕ್ಷೆತ್ರಗಳಲ್ಲಿ ನಾಯಕತ್ವ, ಮತ್ತು ಶ್ರೇಷ್ಠತೆಯನ್ನು ಗುರುತಿಸುವ “ದಿ ಗ್ರೇಟ್ ಇಂಡಿಯನ್ ಎಂಟರ್‌ಪ್ರೆನ್ಯೂರ್‌ಶಿಪ್, ಡಿಸೈನ್, ಬ್ಯುಸಿನೆಸ್ & ಸ್ಟಾರ್ಟ್‌ಅಪ್ ಅವಾರ್ಡ್ಸ್ ಮತ್ತು ಕಾನ್ಫರೆನ್ಸ್ 2023” 22ನೇ ಆವೃತಿಯಲ್ಲಿ ಈ ಮನ್ನಣೆಯನ್ನು ನೀಡಲಾಯಿತು. ಈ ಪ್ರಮುಖ ಕಾರ್ಯಕ್ರಮವು ಭಾರತದ ವಿವಿಧ ಭಾಗಗಳ 350 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು, ಸ್ಟಾರ್ಟಪ್ ಸಂಸ್ಥಾಪಕರು, ವಿಜ್ಞಾನಿಗಳು , ಸಂಶೋಧಕರು, ವಿನ್ಯಾಸಕಾರರು ಪಾಲ್ಗೊಂಡಿದ್ದು, ಪ್ರಮುಖ ವ್ಯಾಪಾರ ವ್ಯಕ್ತಿಗಳು ಮತ್ತು ಉದ್ಯಮಿಗಳು ಅಧಿಕಾರಿಗಳು, ಜಾಗತಿಕ ನಾಯಕರು, ಹಾಗೂ ರಾಜಕಾರಣಿಗಳು ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಮ್ಮೇಳನವು ಅಕ್ಟೋಬರ್ 30, 2023, ಸೋಮವಾರದಂದು ಬೆಂಗಳೂರಿನ “ದಿ ತಾಜ್ ವೆಸ್ಟ್ ಎಂಡ್, ದಿ ಗ್ರ್ಯಾಂಡ್ ಬಾಲ್ ರೂಂ” ನಲ್ಲಿ ನಡೆಯಿತು.
ಗ್ಯಾಂಗ್ಲಿಯಾ ಟೆಕ್ನಾಲಜೀಸ್ ನ ಪ್ರಾತಿನಿಧ್ಯ ವಹಿಸಿ ಅಧ್ಯಕ್ಷರಾದ ಡಾ. ಜಯರಾಜ್ ಮೈಂಬಿಳ್ಳಿ ಬಾಲಕೃಷ್ಣನ್, ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ದಶರಥರಾಜ್ ಕೆ ಶೆಟ್ಟಿ ಅವರು ಗೌರವವನ್ನು ವಿಜ್ಞಾನಿ ಮತ್ತು 150 ಕ್ಕೂ ಹೆಚ್ಚು ಐಪಿಆರ್ ಹೊಂದಿರುವ ಸಂಶೋಧಕರಾದ ರಾಜಾ ವಿಜಯ್ ಕುಮಾರ್ ಮತ್ತು ಐಸಿಎಐ ಮಾಜಿ ಅಧ್ಯಕ್ಷ, ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ ಕೆ. ರಘು ಅವರಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಕೋರ್ ಸದಸ್ಯರಾದ(ಪ್ರಸ್ತುತ ಮತ್ತು ನಿಕಟ ಪೂರ್ವ) ಶ್ರೇಯಸ್ ಹೊಳ್ಳ, ಪೃಥ್ವಿ ತಿಲ್ವಾನಿ ಮತ್ತು ಶ್ರೀಪತಿ ರಂಗಭಟ್ಟ ಅವರ ಜೊತೆಗಿದ್ದರು. ತಂಡದ ಎಲ್ಲಾ ಸದಸ್ಯರು MAHE ಪ್ರಸ್ತುತ ವಿದ್ಯಾರ್ಥಿಗಳು ಅಥವಾ ಹಳೆಯ ವಿದ್ಯಾರ್ಥಿಗಳು.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತಂಡದ ಸದಸ್ಯರು, “ಮಣಿಪಾಲದ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ ವ್ಯಕ್ತಿತ್ವವು ನಮಗೆ ಸದಾ ಮಾದರಿ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE), ಮಣಿಪಾಲಕ್ಕೆ ನಾವು ಈ ಪ್ರಶಸ್ತಿಯನ್ನು ಅಪಿಸುತ್ತೇವೆ. MAHE, KMC, MIT, ಮತ್ತು ಮಣಿಪಾಲ್-GoK-ಬಯೋಇನ್‌ಕ್ಯುಬೇಟರ್‌ನ ನಾಯಕತ್ವಕ್ಕೆ ನಾವು ಧನ್ಯವಾದ ಹೇಳುತ್ತೇವೆ ಹಾಗೂ ಮಾರ್ಗದರ್ಶಕರಾದ ಡಾ ಶರತ್ ಕುಮಾರ್ ರಾವ್-ಪ್ರೊ-ವಿಸಿ-ಮಾಹೆ, ಕಮಾಂಡರ್ ಡಾ. ಅನಿಲ್ ರಾಣಾ (MIT-Manipal ನಿರ್ದೇಶಕರು), ಡಾ ಮನೀಶ್ ಥಾಮಸ್(ಸಿಇಓ-ಮಣಿಪಾಲ್-GoK-ಬಯೋಇನ್‌ಕ್ಯುಬೇಟರ್) ಹಾಗೂ ಕಂಪನಿಯ ನಿರ್ದೇಶಕರಾದ ಡಾ. ಬಾಲಕೃಷ್ಣ, ಡಾ. ಸಂದೀಪ್ ಎಸ್ ಶೆಣೈ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಪ್ರಶಸ್ತಿಯು ತಂತ್ರಜ್ಞಾನಗಳ ಬಳಕೆಯಿಂದ ವಿವಿಧ ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ನಾವೀನ್ಯತೆಯ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುವಲ್ಲಿ ನಮ್ಮ ತಂಡದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ