ಹೆಚ್ಚಿನ ಅಪಾಯ ಇಲ್ಲದೆ, ಉತ್ತಮ ರಿಟರ್ನ್ ನೀಡುವ ಹೂಡಿಕೆಯನ್ನು ಯಾರು ತಾನೇ ಬಯಸುವುದಿಲ್ಲ. ಆದರೆ ಇದರಲ್ಲೂ ಬೇರೆ ಬೇರೆ ಕೆಟಗರಿ ಜನರಿದ್ದಾರೆ. ವಯಸ್ಸು ಕಡಿಮೆ ಇರುವಾಗ ಸ್ಟಾಕ್, ರಿಯಲ್ ಎಸ್ಟೇಟ್ ಮೊದಲಾದ ರಿಸ್ಕ್ ಇರುವ ಆಸ್ತಿಗಳ ಮೇಲೆ ಹೂಡಿಕೆ ಮಾಡಿದರೂ ಚಿಂತೆ ಇಲ್ಲ. ಆದರೆ ನಿವೃತ್ತಿಗೆ ಎಂಬ ಕಾರಣಕ್ಕೆ ಹಣ ಕೂಡಿಸಿಡಬೇಕು, ಆ ಮೇಲೆ ನಿಯಮಿತವಾದ ಆದಾಯ ಬರಬೇಕು ಎಂದು ಆಲೋಚಿಸುವವರಿಗೆ ಒಂದೊಳ್ಳೆ ಯೋಜನೆ ಇದೆ. ಅದೇ ನ್ಯಾಷನಲ್ ಇನ್ಕಮ್ ಸಿಸ್ಟಮ್ (NPS). ಇದು ಬಹಳ ಜನಪ್ರಿಯವಾದ ನಿವೃತ್ತಿ ಯೋಜನೆ. ಎನ್ಪಿಎಸ್ನಲ್ಲಿ ವೈಯಕ್ತಿಕವಾಗಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಾಕುತ್ತಾ ಹೋಗಿ, ನಿವೃತ್ತಿ ನಂತರ ನಿಶ್ಚಿತವಾದ ಆದಾಯವನ್ನು ಪಡೆಯಬಹುದು. ಆರಂಭದಲ್ಲಿ ಈ ಯೋಜನೆ ಇದ್ದದ್ದು ಸರ್ಕಾರಿ ನೌಕರರಿಗೆ ಮಾತ್ರ. ಆದರೆ ಈಗ ಖಾಸಗಿ ವಲಯಕ್ಕೂ ಮತ್ತು ಯಾರು ಸ್ವಯಂಪ್ರೇರಿತರಾಗಿ ಇದನ್ನು ಆರಿಸಿಕೊಳ್ಳುತ್ತಾರೋ ಎಲ್ಲರಿಗೂ ವಿಸ್ತರಿಸಲಾಗಿದೆ.
ಎನ್ಪಿಎಸ್ ಅನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ಮತ್ತು ಭಾರತ ಸರ್ಕಾರ ಜಂಟಿಯಾಗಿ ನೀಡುತ್ತಿದೆ. ನಿವೃತ್ತಿ ನಂತರದಲ್ಲಿ ಸ್ಥಿರವಾದ ಆದಾಯ ಪಡೆಯುವುದಕ್ಕೆ ಇದರಿಂದ ಸಹಾಯ ಆಗುತ್ತದೆ.
ಎನ್ಪಿಎಸ್ ಅರ್ಹತೆ:
– ಭಾರತೀಯ ನಾಗರಿಕರಾಗಿರಬೇಕು, ನಿವಾಸಿ ಅಥವಾ ಅನಿವಾಸಿ
– ಅರ್ಜಿದಾರರ ವಯಸ್ಸು 18ರಿಂದ 70 ವರ್ಷದ ಮಧ್ಯ ಇರಬೇಕು.
– ಯೋಜನೆ ಅಡಿ ತಿಳಿಸಲಾದ ಕೆವೈಸಿ ನಿಯಮಾವಳಿಗಳಿಗೆ ಬದ್ಧರಾಗಿರಬೇಕು.
ಎನ್ಪಿಎಸ್ ಕ್ಯಾಲ್ಕುಲೇಟರ್: ಇದನ್ನು ಬಳಸುವುದು ಹೇಗೆ?
– ಎನ್ಪಿಎಸ್ ಕ್ಯಾಲ್ಕುಲೇಟರ್ ಬಳಸುವುದಕ್ಕೆ ಮೊದಲಿಗೆ ಲಿಂಕ್: https://www.npstrust.org.in/content/pension-calculator ತೆರಳಬೇಕು
– ಆ ನಂತರ ಜನ್ಮ ದಿನಾಂಕ ನಮೂದಿಸಬೇಕು
– ಈಗ ತಿಂಗಳಿಗೆ ಎಷ್ಟು ಮೊತ್ತ ಕಟ್ಟುತ್ತೀರಿ ಹಾಗೂ ಯಾವ ವಯಸ್ಸಿನ ತನಕ ಹಾಗೆ ಕಟ್ಟುತ್ತೀರಿ ಎಂಬುದನ್ನು ನಮೂದಿಸಿ
– ಹೂಡಿಕೆ ಮೇಲೆ ನಿರೀಕ್ಷಿತ ರಿಟರ್ನ್ ಮತ್ತು ಆನ್ಯುಯಿಟಿ ರಿಟರ್ನ್ ಭರ್ತಿ ಮಾಡಿ
ಈ ಎಲ್ಲವನ್ನೂ ಮಾಡಿದ ಮೇಲೆ ತಿಂಗಳ ಪಿಂಚಣಿ, ಆನ್ಯುಯಿಟಿ ಮೌಲ್ಯ, ಲಮ್ಸಮ್ ಮೌಲ್ಯವು ಕಂಪ್ಯೂಟರ್ನ ಬಲ ಭಾಗದಲ್ಲಿ ಕಾಣಿಸುತ್ತದೆ.
ಎನ್ಪಿಎಸ್ ಯೋಜನೆ: 50,000 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
ಒಬ್ಬ ವ್ಯಕ್ತಿ ತಮ್ಮ 25ನೇ ವಯಸ್ಸಿನಲ್ಲಿ ಎನ್ಪಿಎಸ್ ಸೇರಿದಲ್ಲಿ ಹಾಗೂ ತಿಂಗಳಿಗೆ 6500 ರೂಪಾಯಿ ಜಮೆ ಮಾಡಲು ಆರಂಭಿಸಿದರೆ ನಿವೃತ್ತಿ ಹೊತ್ತಿಗೆ 27.30 ಲಕ್ಷ ರೂಪಾಯಿ ಆಗುತ್ತದೆ. ನಿರೀಕ್ಷಿತ ರಿಟರ್ನ್ ವಾರ್ಷಿಕ ಶೇ 10ರಷ್ಟು ಆದಲ್ಲಿ ಒಟ್ಟಾರೆ ಹೂಡಿಕೆ 2.46 ಕೋಟಿಗೆ ಬೆಳೆಯುತ್ತದೆ. ಈಗ ಎನ್ಪಿಎಸ್ ಚಂದಾದಾರರು ಶೇ 40ರಷ್ಟು ಮೊತ್ತವನ್ನು ಆನ್ಯುಯಿಟಿಗೆ ಮಾರ್ಪಾಡು ಮಾಡಿದರೆ, ಮೌಲ್ಯವು 99.53 ಲಕ್ಷ ಆಗುತ್ತದೆ. ಆನ್ಯುಯಿಟಿ ದರ ಶೇ 10ರಷ್ಟು ಅಂದುಕೊಳ್ಳಿ. ತಿಂಗಳ ಪೆನ್ಷನ್ ರೂ. 49,678 ಆಗುತ್ತದೆ. ಇದು ಮಾತ್ರ ಅಲ್ಲ, ಎನ್ಪಿಎಸ್ ಚಂದಾದಾರರಿಗೆ ಲಮ್ಸಮ್ ಮೊತ್ತ 1.50 ಕೋಟಿ ಬರುತ್ತದೆ.
ನ್ಯಾಷನಲ್ ಪೆನ್ಷನ್ ಸ್ಕೀಮ್ನ ಅನುಕೂಲಗಳು
ಕಡಿಮೆ ವೆಚ್ಚ: ಎನ್ಪಿಎಸ್ ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದ ಪೆನ್ಷನ್ ಸ್ಕೀಮ್. ಆಡಳಿತಾತ್ಮಕ ವೆಚ್ಚ ಮತ್ತು ಫಂಡ್ ನಿರ್ವಹಣೆ ಶುಲ್ಕ ಕಡಿಮೆ ಬಹಳ ಕಡಿಮೆ.
ಸರಳ: ನೀವು ಮಾಡಬೇಕಾದ್ದು ಏನೆಂದರೆ ಈ ಖಾತೆಯನ್ನು ಭಾರತದಾದ್ಯಂತ ಇರುವ ಯಾವುದಾದರೆ ಹೆಡ್ ಪೋಸ್ಟ್ ಆಫೀಸ್ನಲ್ಲಿ ತೆರೆಯಬೇಕು ಮತ್ತು ಪರ್ಮನೆಂಟ್ ರಿಟೈರ್ಮೆಂಟ್ ಅಕೌಂಟ್ ನಂಬರ್ (PRAN) ಪಡೆಯಬೇಕು.
ಆರಾಮದಾಯಕ: ಅರ್ಜಿದಾರರು ತಮ್ಮ ಹೂಡಿಕೆ ಆಯ್ಕೆಗಳು ಮತ್ತು ಪೆನ್ಷನ್ ಫಂಡ್ ಅಥವಾ ಉತ್ತಮ ರಿಟರ್ನ್ ಸಿಗುವುದನ್ನು ಸ್ವಯಂಚಾಲಿಯ ಆಯ್ಕೆ ಮಾಡಬಹುದು.
ಬಳಕೆ ಸಲೀಸು: ಅರ್ಜಿದಾರರು ಈ ಖಾತೆಯನ್ನು ದೇಶದ ಎಲ್ಲಿಂದಲಾದರೂ ನಿರ್ವಹಣೆ ಮಾಡಬಹುದು ಮತ್ತು ಮೊತ್ತ ಕಟ್ಟುವುದು ಸಹ ಸಲೀಸು. ಉದ್ಯೋಗ, ನಗರ ಹೀಗೆ ಏನೇ ಬದಲಾವಣೆ ಮಾಡಿದರೂ eNPS ಮೂಲಕ ಪಾವತಿ ಸಲೀಸು. ಜತೆಗೆ ಚಂದಾದಾರರಿಗೆ ಕೆಲಸ ಸಿಕ್ಕ ಮೇಲೆ ಸರ್ಕಾರಿ ವಲಯ, ಕಾರ್ಪೊರೇಟ್ ಮಾಡೆಲ್ಗೆ ಬದಲಾವಣೆ ಮಾಡಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: National Pension System: ಎನ್ಪಿಎಸ್ಗೆ ನಾಮಿನಿ ಇಲ್ಲದಿದ್ದಲ್ಲಿ ಮರಣದ ಕ್ಲೇಮ್ ಹೇಗೆ?ಅಗತ್ಯ ದಾಖಲೆಗಳಾವುವು?