AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC Bank: ಸಾಲದ ಮೇಲಿನ ಎಂಸಿಎಲ್​ಆರ್ ಏರಿಸಿದ ಎಚ್​ಡಿಎಫ್​ಸಿ ಬ್ಯಾಂಕ್; ಎಷ್ಟು ಹೆಚ್ಚಾಗಲಿದೆ ಇಎಂಐ?

ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ ಚಿಚಿಧ ಸಾಲದ ಮೇಲೆ ಎಂಸಿಎಲ್​ಆರ್​ ಅನ್ನು ಜೂನ್ 7ರಿಂದ ಅನ್ವಯ ಆಗುವಂತೆ ಹೆಚ್ಚಿಸಲಾಗಿದೆ. ಇದರಿಂದ ಇಎಂಐ ಹೆಚ್ಚಾಗಲಿದೆ.

HDFC Bank: ಸಾಲದ ಮೇಲಿನ ಎಂಸಿಎಲ್​ಆರ್ ಏರಿಸಿದ ಎಚ್​ಡಿಎಫ್​ಸಿ ಬ್ಯಾಂಕ್; ಎಷ್ಟು ಹೆಚ್ಚಾಗಲಿದೆ ಇಎಂಐ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 07, 2022 | 10:21 AM

Share

ಇದೇ ಜೂನ್ 7ನೇ ತಾರೀಕಿನಿಂದ ಅನ್ವಯ ಆಗುವಂತೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ (HDFC Bank) ಎಲ್ಲ ಅವಧಿಯ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) 35 ಬೇಸಿಸ್ ಪಾಯಿಂಟ್ಸ್ (100 ಬೇಸಿಸ್​ ಪಾಯಿಂಟ್ಸ್ ಅಂದರೆ ಶೇ 1) ಹೆಚ್ಚಿಸಲಾಗಿದೆ. ಈ ಹಿಂದೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಮೇ 7ನೇ ತಾರೀಕಿನಂದು 25 ಬೇಸಿಸ್​ ಪಾಯಿಂಟ್ಸ್ ಹೆಚ್ಚಿಸಲಾಗಿತ್ತು. ಗೃಹ, ವಾಹನ, ವೈಯಕ್ತಿಕ ಸಾಲ ಸೇರಿದಂತೆ ಇತರ ಸಾಲಗಳು ಈ ಏರಿಕೆ ಮೂಲಕವಾಗಿ ಹೆಚ್ಚಳ ಆಗಲಿದೆ. ವಿವಿಧ ಸಾಲಗಳಿಗೆ ಬ್ಯಾಂಕ್ ಗ್ರಾಹಕರು ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ವೆಬ್​ಸೈಟ್​ ಪ್ರಕಾರ, ಈ ಹಿಂದೆ 7.15 ಇದ್ದ ಓವರ್​ನೈಟ್ ಎಂಸಿಎಲ್​ಆರ್ ಈಗ 7.50 ಆಗಿದೆ. ಒಂದು ತಿಂಗಳ ಅವಧಿಗೆ ಎಂಸಿಎಲ್​ಆರ್​ ಶೇ 7.55 ಆಗಿದೆ. ಮೂರು ತಿಂಗಳಿಗೆ ಮತ್ತು ಆರು ತಿಂಗಳಿಗೆ ಶೇ 7.60 ಹಾಗೂ ಶೇ 7.70 ಆಗಿದೆ.

ಒಂದು ವರ್ಷದ ಎಂಸಿಎಲ್​ಆರ್​ ಹಲವು ಗ್ರಾಹಕ ಸಾಲಗಳಿಗೆ ಜೋಡಣೆ ಆಗಿದೆ. ಅದೀಗ ಶೇ 7.85 ಆಗಿದ್ದು, ಎರಡು ವರ್ಷದ ಎಂಸಿಎಲ್​ಆರ್ ಶೇ 7.95 ಮತ್ತು ಮೂರು ವರ್ಷದ ಎಂಸಿಎಲ್​ಆರ್ ಶೇ 8.05 ಆಗಲಿದೆ. ಗೃಹ ಸಾಲ ಪಡೆದವರಿಗೆ ಇದು ಬಹಳ ಮುಖ್ಯವಾದ ವಿಷಯ. ಸಾಲದ ರೀಸೆಟ್ ದಿನಾಂಕ ಬಂದಾಗ ಮಾತ್ರ ಇದರ ಪರಿಣಾಮ ಆಗುತ್ತದೆ. ಆ ರೀಸೆಟ್ ದಿನಾಂಕದಂದು ಬ್ಯಾಂಕ್​ನಿಂದ ಮೇಲ್ಕಂಡ ಎಂಸಿಎಲ್​ಆರ್ ಪ್ರಕಾರ ಬಡ್ಡಿ ದರ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಎಂಸಿಎಲ್​ಆರ್ ಆಧಾರಿತ ಗೃಹ ಸಾಲವು ಒಂದು ವರ್ಷದ ಎಂಸಿಎಲ್​ಆರ್​ ದರವನ್ನು ಅವಲಂಬಿಸಿರುತ್ತದೆ.

ಆದ್ದರಿಂದ ಒಂದು ಉದಾಹರಣೆಗೆ ಹೇಳುವುದಾದರೆ, ನಿಮ್ಮ ಎಂಸಿಎಲ್​ಆರ್​ಗೆ ಜೋಡಣೆಯಾದ ಗೃಹ ಸಾಲದ ದಿನಾಂಕ ಆಗಸ್ಟ್​ನಲ್ಲಿ ಇದ್ದರೆ ಬಡ್ಡಿ ದರ ಏರಿಕೆ ಆಗಸ್ಟ್​ನಲ್ಲಿ ಆಗುತ್ತದೆ. ಅಲ್ಲಿಯ ತನಕ ಈಗಿನ ಇಎಂಐ ಅನ್ವಯ ಆಗುತ್ತದೆ. ಇದು ಎಕ್ಸ್​ಟರ್ನಲ್ ಬೆಂಚ್​ಮಾರ್ಕ್​ ಲಿಂಕ್ಡ್ ರೇಟ್​ನಂತೆ (EBLR) ಅಲ್ಲ. ಇದರಲ್ಲಿ ಕನಿಷ್ಠ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ಪರಿಶೀಲನೆ ಮಾಡಿ, ಪರಿಷ್ಕರಿಸಲಾಗುತ್ತದೆ. ಆದ್ದರಿಂದ ಇಬಿಎಲ್​ಆರ್​ (ರೆಪೋ ದರ ಮುಂತಾದವು) ಬದಲಾವಣೆಯು ನಿಮ್ಮ ಇಎಂಐ ಪಾವತಿಯಲ್ಲೂ ಬದಲಾವಣೆ ತರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:HDFC Bank: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್