HDFC Bank FD Rates: ಎಫ್​ಡಿ ಮೇಲಿನ ಬಡ್ಡಿ ದರ ಏರಿಕೆ ಮಾಡಿದ ಎಚ್​ಡಿಎಫ್​ಸಿ ಬ್ಯಾಂಕ್

ಮೇ 18, 2022ರಿಂದ ಅನ್ವಯ ಆಗುವಂತೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಎಫ್​ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

HDFC Bank FD Rates: ಎಫ್​ಡಿ ಮೇಲಿನ ಬಡ್ಡಿ ದರ ಏರಿಕೆ ಮಾಡಿದ ಎಚ್​ಡಿಎಫ್​ಸಿ ಬ್ಯಾಂಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 18, 2022 | 5:34 PM

ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ (HDFC Bank) ಫಿಕ್ಸೆಡ್​ ಡೆಪಾಸಿಟ್ಸ್​ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ವಿವಿಧ ಅವಧಿಗಳಿಗೆ ಈ ದರವು ಅನ್ವಯಿಸುತ್ತದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ ಈ ದರ ಅನ್ವಯ ಆಗುತ್ತದೆ. ಆರ್​ಬಿಐನಿಂದ ರೆಪೋ ದರ ಏರಿಕೆ ಮಾಡಿದ ಎರಡು ವಾರಗಳ ನಂತರ ಬಡ್ಡಿ ದರ ಏರಿಕೆ ಬಗ್ಗೆ ಬ್ಯಾಂಕ್ ಘೋಷಣೆ ಮಾಡಿದೆ. 9 ತಿಂಗಳ ಮೇಲ್ಪಟ್ಟ ಅವಧಿಗೆ ಹೊಸ ದರ ಜಾರಿಗೆ ಬರುತ್ತದೆ. ಹೊಸ ಬಡ್ಡಿ ದರವು 10ರಿಂದ 20 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಜಾಸ್ತಿ ಸಿಗುತ್ತದೆ. ಅಂದಹಾಗೆ ಈ ಹೆಚ್ಚಳವು ಮೇ 18, 2022ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

“ಹೆಚ್ಚುವರಿ ಪ್ರೀಮಿಯಂ ಶೇ 0.25ರಷ್ಟು (ಈಗಾಗಲೇ ಇರುವ ಶೇ 0.50 ಪ್ರೀಮಿಯಂಗೂ ಮೇಲ್ಪಟ್ಟು) ಬಡ್ಡಿ ದರವನ್ನು 5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವನ್ನು 5 ವರ್ಷದ ಒಂದು ದಿನದಿಂದ ಹತ್ತು ವರ್ಷದ ತನಕ ಎಫ್​ಡಿ ಮಾಡುವುದಕ್ಕೆ ಬಯಸುವ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಈ ಆಫರ್ ಮೇ 18ನೇ ತಾರೀಕು 2020ರಿಂದ ಆರಂಭವಾಗಿದ್ದು, 2022ರ ಸೆಪ್ಟೆಂಬರ್ 30ರ ತನಕ ಇದೆ,” ಎಂದು ಬ್ಯಾಂಕ್ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

2 ಕೋಟಿ ರೂಪಾಯಿ ಒಳಗಿನ ಠೇವಣಿ ಮೊತ್ತಕ್ಕೆ ಎಚ್​ಡಿಎಫ್​ಸಿ ಬ್ಯಾಂಕ್​ನ ಪರಿಷ್ಕೃತ ಬಡ್ಡಿ ದರದ ವಿವರ ಇಲ್ಲಿದೆ:

15ರಿಂದ 29 ದಿನ: ಸಾರ್ವಜನಿಕರಿಗೆ- ಶೇ 2.50, ಹಿರಿಯ ನಾಗರಿಕರಿಗೆ- ಶೇ 3

30ರಿಂದ 45 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

45ರಿಂದ 60 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

61ರಿಂದ 90 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

91ರಿಂದ 120 ದಿನ: ಸಾರ್ವಜನಿಕರಿಗೆ- ಶೇ 3.50, ಹಿರಿಯ ನಾಗರಿಕರಿಗೆ- ಶೇ 4

6 ತಿಂಗಳು 1 ದಿನದಿಂದ 9 ತಿಂಗಳು: ಸಾರ್ವಜನಿಕರಿಗೆ- ಶೇ 4.40, ಹಿರಿಯ ನಾಗರಿಕರಿಗೆ- ಶೇ 4.90

9 ತಿಂಗಳು 1 ದಿನದಿಂದ 1 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 4.45, ಹಿರಿಯ ನಾಗರಿಕರಿಗೆ- ಶೇ 5

1 ವರ್ಷ: ಸಾರ್ವಜನಿಕರಿಗೆ- ಶೇ 5.10, ಹಿರಿಯ ನಾಗರಿಕರಿಗೆ- ಶೇ 5.60

1 ವರ್ಷದ 1 ದಿನದಿಂದ 2 ವರ್ಷ: ಸಾರ್ವಜನಿಕರಿಗೆ- ಶೇ 5.10, ಹಿರಿಯ ನಾಗರಿಕರಿಗೆ- ಶೇ 5.60

2 ವರ್ಷ 1 ದಿನದಿಂದ 3 ವರ್ಷ: ಸಾರ್ವಜನಿಕರಿಗೆ- ಶೇ 5.40, ಹಿರಿಯ ನಾಗರಿಕರಿಗೆ- ಶೇ 5.90

3 ವರ್ಷ 1 ದಿನದಿಂದ 5 ವರ್ಷ: ಸಾರ್ವಜನಿಕರಿಗೆ- ಶೇ 5.60, ಹಿರಿಯ ನಾಗರಿಕರಿಗೆ- ಶೇ 6.10

5 ವರ್ಷ 1 ದಿನದಿಂದ 10 ವರ್ಷ: ಸಾರ್ವಜನಿಕರಿಗೆ- ಶೇ 5.75, ಹಿರಿಯ ನಾಗರಿಕರಿಗೆ- ಶೇ 6.50

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: HDFC Car Loan: ಎಚ್‌ಡಿಎಫ್‌ಸಿ ಬ್ಯಾಂಕ್​ನಿಂದ 30 ನಿಮಿಷದಲ್ಲಿ ಕಾರು ಸಾಲ ನೀಡುವ ‘ಎಕ್ಸ್‌ಪ್ರೆಸ್ ಕಾರ್ ಲೋನ್ಸ್’

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್