HDFC Home Loan: ಎಚ್ಡಿಎಫ್ಸಿಯಿಂದ ಗೃಹ ಸಾಲ ಬಡ್ಡಿ ದರ ಏರಿಕೆ
ಖಾಸಗಿ ಸಾಲದಾತ ಸಂಸ್ಥೆಯಾದ ಎಚ್ಡಿಎಫ್ಸಿಯಿಂದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಅಥವಾ ಎಚ್ಡಿಎಫ್ಸಿ (HDFC) ಲಿಮಿಟೆಡ್ ಘೋಷಣೆ ಮಾಡಿರುವ ಪ್ರಕಾರ, ಮೇ 9, 2022ರಿಂದ ಅನ್ವಯ ಆಗುವಂತೆ ಗೃಹ ಸಾಲದ ಮೇಲಿನ ರೀಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) 30 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಈ ದರವು ಈಗಾಗಲೇ ಇರುವ ಮತ್ತು ಹೊಸ ಸಾಲಗಾರರಿಗೆ ಅನ್ವಯ ಆಗುತ್ತದೆ. ಇದರ ಪ್ರಕಾರವಾಗಿ ಎಚ್ಡಿಎಫ್ಸಿಯಿಂದ ಗೃಹ ಸಾಲ ಪಡೆದ ಸಾಲಗಾರರು ಇಎಂಐ ಹೆಚ್ಚು ಪಾವತಿಸಬೇಕಾಗುತ್ತದೆ. “ಎಚ್ಡಿಎಫ್ಸಿ ಅದರ ಗೃಹಸಾಲದ ಮೇಲಿನ ರೀಟೇಲ್ ಪ್ರೈಮ್ ಲೆಂಡಿಂಗ್ ರೇಟ್ (ಆರ್ಪಿಎಲ್ಆರ್), ಅದರ ಮೇಲೆ ಅಡ್ಜಸ್ಟಬಲ್ ರೇಟ್ ಹೋಮ್ ಲೋನ್ಸ್ (ARHL) ಬೆಂಚ್ಮಾರ್ಕ್ 30 ಬೇಸಿಸ್ ಪಾಯಿಂಟ್ಸ್ ಅನ್ನು ಮೇ 9, 2022ರಿಂದ ಏರಿಕೆ ಮಾಡಿದೆ,” ಎಂದು ಶನಿವಾರ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.
ಎಚ್ಡಿಎಫ್ಸಿ ಹೇಳಿಕೆ ಪ್ರಕಾರ, ಮೇ 9ನೇ ತಾರೀಕಿನಿಂದ ಬಡ್ಡಿ ದರ 7ರಿಂದ 7.45ರ ರೇಂಜ್ನಲ್ಲಿ ಇರುತ್ತದೆ. ಈ ಹಿಂದೆ, ಈಗಾಗಲೇ ಸಾಲ ಪಡೆದವರಿಗೆ ಮೇ 1, 2022ರಿಂದ ಆರ್ಪಿಎಲ್ಆರ್ ಅನ್ನು ಮೇ 1, 2022ರಿಂದ ಎಚ್ಡಿಎಫ್ಸಿ ಏರಿಕೆ ಮಾಡಿತ್ತು. ಕಳೆದ ಒಂದು ತಿಂಗಳಿಂದ ಹಲವು ಬ್ಯಾಂಕ್ಗಳು ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿವೆ. ಈಚೆಗಷ್ಟೇ ಆರ್ಬಿಐನಿಂದ ರೆಪೋ ದರವನ್ನು ಏರಿಕೆ ಮಾಡಲಾಗಿದೆ.
ವಿವಿಧ ವರ್ಗದಡಿ ಬರುವವರಿಗೆ ಹೊಸ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಹೀಗಿದೆ: 30 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದಲ್ಲಿ- ಶೇ 7 ಮಹಿಳೆಯರು- ಶೇ7.05 ಇತರರು- ಶೇ 7.10
30 ಲಕ್ಷ ರೂಪಾಯಿ ಮೇಲ್ಪಟ್ಟು 75 ಲಕ್ಷದ ತನಕ ಮೊತ್ತಕ್ಕೆ ಮಹಿಳೆಯರು- ಶೇ7.30 ಇತರರು- ಶೇ 7.35
75 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಕ್ಕೆ ಮಹಿಳೆಯರು- ಶೇ 7.40 ಇತರರು- ಶೇ 7.45
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ
Published On - 8:46 pm, Sat, 7 May 22