Reliance Jio ಮುಂಗಾರು ಅಫರ್ ಶುರು! ಮೂರು ತಿಂಗಳ ಅವಧಿಗೆ ನಾಲ್ಕು ಹೊಸ ಭರ್ಜರಿ ಪ್ಲಾನ್​ಗಳು ಇಲ್ಲಿವೆ ನೋಡಿ

3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುವ ಯಾವುದೇ ಪ್ಲಾನ್ ಅನ್ನು ರೀಚಾರ್ಜ್ ಮಾಡಿ. ಚಾರ್ಜ್ ಮಾಡಿದ ನಂತರ, ರೀಚಾರ್ಜ್ ಅಥವಾ ಡೇಟಾ ಆಡ್-ಆನ್ ಮಾಡಿದ ಅದೇ ಜಿಯೋ ಮೊಬೈಲ್ ಸಂಖ್ಯೆಯೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ರ್ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಿ.

Reliance Jio ಮುಂಗಾರು ಅಫರ್ ಶುರು! ಮೂರು ತಿಂಗಳ ಅವಧಿಗೆ ನಾಲ್ಕು ಹೊಸ ಭರ್ಜರಿ ಪ್ಲಾನ್​ಗಳು ಇಲ್ಲಿವೆ ನೋಡಿ
ರಿಲಯನ್ಸ್ ಜಿಯೋದಿಂದ ಮುಂಗಾರು ಅಫರ್ ಶುರು! ಮೂರು ತಿಂಗಳ ಅವಧಿಗೆ ನಾಲ್ಕು ಹೊಸ ಭರ್ಜರಿ ಪ್ಲಾನ್​ಗಳು ಇಲ್ಲಿವೆ ನೋಡಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 07, 2022 | 2:29 PM

ರಿಲಯನ್ಸ್ ಜಿಯೋ ಹೊಸದಾಗಿ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಲಾಂಚ್ ಮಾಡಿದೆ. ರೂ 151, ರೂ 333, ರೂ 583 ಮತ್ತು ರೂ 783 ಯೋಜನೆಗಳಾಗಿವೆ. ಈ ಎಲ್ಲಾ ಯೋಜನೆಗಳು ಬಳಕೆದಾರರಿಗೆ ಮೂರು ತಿಂಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ. ಡಿಸ್ನಿ+ ಹಾಟ್ ಸ್ಟಾರ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಆಯ್ದ ರೀಚಾರ್ಜ್‌ಗಳೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ 3 ತಿಂಗಳ ಮೊಬೈಲ್‌ ಚಂದಾದಾರಿಕೆಯನ್ನು ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ನೀಡಲು ಮುಂದಾಗಿದೆ.

ಗ್ರಾಹಕರು 3 ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಲು ವಿವಿಧ ಜಿಯೋ ರೀಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಪ್ಲಾನ್ ನ ಆಧಾರದ ಮೇಲೆ ಜಿಯೋ ಬಳಕೆದಾರರು ಅನಿಯಮಿತ ಧ್ವನಿ, ಡೇಟಾ, ಎಸ್ ಎಮ್ ಎಸ್ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯಬಹುದು. ಇನ್ನು ಪ್ಲಾನ್‌ಗಳ ವಿವರ ನೊಡೋದಾದ್ರೆ …

ರೂ. 151ರ ರೀಚಾರ್ಜ್ ಪ್ಲಾನ್: ರೂ 151 ಯೋಜನೆಯು ಡೇಟಾ-ಮಾತ್ರ ಯೋಜನೆಯಾಗಿದ್ದು, ಬಳಕೆದಾರರಿಗೆ 8GB ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 333ರ ರೀಚಾರ್ಜ್ ಪ್ಲಾನ್: ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾದೊಂದಿಗೆ ಹೊಸ ಬಳಕೆದಾದರರು ಉಚಿತವಾಗಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ. ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 583ರ ರೀಚಾರ್ಜ್ ಪ್ಲಾನ್: ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 56 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು ರೂ. 99 ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ. ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 783ರ ರೀಚಾರ್ಜ್ ಪ್ಲಾನ್: ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು ರೂ. 99 ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ . ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ಜಿಯೋ ಯೋಜನೆಯೊಂದಿಗೆ 3-ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಲು, ಹೀಗೆ ಮಾಡಿ: 3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುವ ಯಾವುದೇ ಪ್ಲಾನ್ ಅನ್ನು ರೀಚಾರ್ಜ್ ಮಾಡಿ. ಚಾರ್ಜ್ ಮಾಡಿದ ನಂತರ, ರೀಚಾರ್ಜ್ ಅಥವಾ ಡೇಟಾ ಆಡ್-ಆನ್ ಮಾಡಿದ ಅದೇ ಜಿಯೋ ಮೊಬೈಲ್ ಸಂಖ್ಯೆಯೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ರ್ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಿ.

ಸೈನ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಜಿಯೋ ಸಂಖ್ಯೆಗೆ ಕಳುಹಿಸಲಾದ ಓ ಟಿ ಪಿ ಯನ್ನು ನಮೂದಿಸಿ. ಯಶಸ್ವಿಯಾಗಿ ಲಾಗಿನ್ ಮಾಡಿದ ನಂತರ ನಿಮ್ಮ ಹೊಸ 3-ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಲೈವ್ ಕ್ರಿಕೆಟ್ ಸೇರಿದಂತೆ ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ನೋಡಲು ಶುರುಮಾಡಿ.

ಗಮನಿಸಿ: ತಮ್ಮ 3-ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಆನಂದಿಸುತ್ತಿರುವ ಜಿಯೋ ಬಳಕೆದಾರರು ನಿರಂತರವಾಗಿ ಸಕ್ರಿಯ ಯೋಜನೆಯಲ್ಲಿರಬೇಕು. ಅನ್ವಯವಾಗುವ ರೀಚಾರ್ಜ್‌ನ ಖರೀದಿಯ ದಿನಾಂಕದಂದು ವಾರ್ಷಿಕ ಚಂದಾದಾರಿಕೆಯು ಪ್ರಾರಂಭವಾಗುತ್ತದೆ.

Published On - 2:26 pm, Sat, 7 May 22

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ