Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?
ಗೀತಾ ಜಿಪಿಟಿ
Image Credit source: Newsbytes

Updated on: Feb 08, 2023 | 8:18 AM

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಗೂಗಲ್​ನಂತಹ ಕಂಪನಿಗಳು ತಮ್ಮ ಎಐ ಆಧಾರಿತ ಚಾಟ್​ಬಾಟ್ ಬಾರ್ಡ್​ ಅನ್ನು ಅಕಾಲಿಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ ಈ ಅಂಶದಿಂದ ಇದರ ಶಕ್ತಿ ಹಾಗೂ ಜನಪ್ರಿಯತೆಯನ್ನು ಅಳೆಯಬಹುದಾಗಿದೆ. ಗೀತಾ ಜಿಪಿಟಿಯನ್ನು ಗೂಗಲ್ ಇಂಡಿಯಾದ ಸಾಫ್ಟ್​ವೇರ್ ಎಂಜಿನಿಯರ್ ಸುಕುರು ಸಾಯಿ ವಿನೀತ್ ಸಿದ್ಧಪಡಿಸಿದ್ದಾರೆ.

ಈ ಅಪ್ಲಿಕೇಶನ್​ನಿಂದ ನೀವು ಪ್ರಶ್ನೆಗಳನ್ನು ಕೇಳಿದಾಗ ಇದು ಗೀತಾ ಬೋಧನೆಗಳ ಆಧಾರದ ಮೇಲೆ ಉತ್ತರಗಳನ್ನು ನೀಡುತ್ತದೆ. ಇದರಲ್ಲಿ ‘ಗೀತಾ ಸೆ ಪರಾಮರ್ಶ್​’ ಸೌಲಭ್ಯವಿದೆ. ಈ ಎಐ ಅಪ್ಲಿಕೇಷನ್ ಗೀತಾ ಪಾಠಗಳ ಮೂಲಕ ಬಳಕೆದಾರರಿಗೆ ಸರಿಯಾದ ಮಾಹಿತಿ, ಸಲಹೆಯನ್ನು ನೀಡುತ್ತದೆ.
https://gita.kishans.in ನಲ್ಲಿ, ಚಾಟ್‌ಬಾಟ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸುತ್ತದೆ, ಆದರೆ ಬಳಕೆದಾರರು ಅರ್ಜುನನಂತೆ ಸಲಹೆ ಪಡೆಯಬಹುದು.

ನೀವು ವೆಬ್‌ಸೈಟ್‌ಗೆ ಹೋದಾಗ, ಅರ್ಜುನಾ, ನನ್ನ ಸ್ನೇಹಿತ, ನಿಮಗೆ ಏನು ತೊಂದರೆಯಾಗುತ್ತಿದೆ? ಎಂದು ಕೇಳುವ ಚಾಟ್‌ಬಾಟ್ ಕೃಷ್ಣನ ಪಾತ್ರವನ್ನು ನೀವು ನೋಡುತ್ತೀರಿ. ಅಪ್ಲಿಕೇಶನ್ 1.20 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿದೆ ಎಂದು ಹೇಳುತ್ತದೆ.

ಮತ್ತಷ್ಟು ಓದಿ: ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು

ಜೀವನದ ಅರ್ಥವೇನು, ನಾನು ದ್ವೇಷಸಬೇಕೆ? ಎನ್ನುವ ಪ್ರಶ್ನೆ ಕೇಳಿದಾಗ, ಗೀತಾ ಜಿಪಿಟಿಯು ದ್ವೇಷವು ಶಾಂತಿ ಮತ್ತು ನೆಮ್ಮದಿಯ ಮಾರ್ಗವಲ್ಲ. ಎಲ್ಲಾ ಜೀವಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯ ಭಾವನೆಗಳನ್ನು ಬೆಳೆಸಲು ಪ್ರಯತ್ನಿಸಿ ಎಂದು ಉತ್ತರ ನೀಡಿದೆ.
ಭಗವದ್ಗೀತೆಯು ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನ ಮತ್ತು ಅವನ ಸಾರಥಿ ಕೃಷ್ಣನ ನಡುವಿನ ಸಂಭಾಷಣೆಯನ್ನು ಆಧರಿಸಿದ ಸಿದ್ಧಪಡಿಸಲಾಗಿದೆ.

ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮುಂತಾದವುಗಳನ್ನು ಚರ್ಚಿಸಲಾಗಿದೆ. ಗೀತೆಯು ಮನುಷ್ಯನಿಗೆ ಕರ್ಮದ ಮಹತ್ವವನ್ನು ವಿವರಿಸುತ್ತದೆ. ಗೀತೆಯಲ್ಲಿ ಮಾನವ ಜೀವನದ ಸಾರವನ್ನು ವಿವರಿಸಲಾಗಿದೆ.

ಇದು 18 ಅಧ್ಯಾಯಗಳು ಮತ್ತು 700 ಪದ್ಯಗಳನ್ನು ಹೊಂದಿದೆ. ಗೀತಾ ಮಾನವರು ತಮ್ಮ ಉದ್ದೇಶವನ್ನು ಕಂಡುಕೊಳ್ಳಲು ಮತ್ತು ಶುದ್ಧತೆ, ಶಕ್ತಿ, ಶಿಸ್ತು, ಪ್ರಾಮಾಣಿಕತೆ, ದಯೆ ಮತ್ತು ಸಮಗ್ರತೆಯ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us