Glenmark Life Sciences IPO: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಐಪಿಒ ಜುಲೈ 27ರಿಂದ ಆರಂಭ

| Updated By: Srinivas Mata

Updated on: Jul 20, 2021 | 9:40 PM

ಗ್ಲೆನ್​ಮಾರ್ಕ್ ಲೈಫ್​ ಸೈನ್ಸಸ್​ನಿಂದ ಜುಲೈ 27ರಂದು ಐಪಿಒ ಆರಂಭವಾಗಲಿದೆ. ಈ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ.

Glenmark Life Sciences IPO: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಐಪಿಒ ಜುಲೈ 27ರಿಂದ ಆರಂಭ
ಸಾಂದರ್ಭಿಕ ಚಿತ್ರ
Follow us on

ಗ್ಲೆನ್​ಮಾರ್ಕ್ ಫಾರ್ಮಾಸ್ಯುಟಿಕಲ್ಸ್​ನ ಅಂಗಸಂಸ್ಥೆಯಾದ ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್​ (Glenmark Life Sciences) ಐಪಿಒ ಸಬ್​ಸ್ಕ್ರಿಪ್ಷನ್​ ಮುಂದಿನ ವಾರ ಜುಲೈ 27ರಿಂದ ಆರಂಭವಾಗುತ್ತದೆ. ಇನ್ನು ಜುಲೈ 29, 2021ಕ್ಕೆ ಕೊನೆಯಾಗುತ್ತದೆ. ಗ್ಲೆನ್​ಮಾರ್ಕ್​ ಫಾರ್ಮಾಸ್ಯುಟಿಕಲ್ಸ್​ನಿಂದ ಜುಲೈ 19, 2021ಕ್ಕೆ​ ಎಕ್ಸ್​ಚೇಂಜ್​ಗಳಿಗೆ ನೋಟಿಸ್​ ಮೂಲಕ ಮಾಹಿತಿ ನೀಡಲಾಗಿದೆ. ಗ್ಲೆನ್​ಮಾರ್ಕ್ ಲೈಫ್​ ಸೈನ್ಸಸ್​ನಿಂದ ರಿಜಿಸ್ಟ್ರಾರ್ ಆಫ್ ಕಂಪೆನೀಸ್ (ಆರ್​ಒಸಿ) ಜತೆ ಆರ್​ಎಚ್​ಪಿಯಲ್ಲಿ ತಿಳಿಸಲಾಗಿದೆ. ಜುಲೈ 20, 2021ರಂದು ಆರ್​ಒಸಿಯಿಂದ ದಾಖಲೆಗೆ ತೆಗೆದುಕೊಳ್ಳಲಾಗಿದೆ. ಗ್ಲೆನ್​ಮಾರ್ಕ್ ಲೈಫ್ ಐಪಿಒ ಗಾತ್ರವನ್ನು ಇಳಿಸಲಾಗಿದ್ದು, ಮತ್ತು ಹೊಸದಾಗಿ 1060 ಕೋಟಿ ರೂಪಾಯಿ ಹೊಸದಾಗಿ ಷೇರು ವಿತರಣೆ ಮತ್ತು ಆಫರ್ ಫಾರ್ ಸೇಲ್ (ಒಎಫ್​ಎಸ್) ಮೂಲಕ 63 ಲಕ್ಷ ಈಕ್ವಿಟಿ ಷೇರುಗಳ ಮಾರಾಟ ಮಾಡಲಾಗುತ್ತದೆ. ಆಂಕರ್ ಇನ್ವೆಸ್ಟರ್ಸ್ ಬಿಡ್ಡಿಂಗ್ ಐಪಿಒ ಶುರುವಾಗುವ ಒಂದು ದಿನದ ಮೊದಲು, ಅಂದರೆ ಜುಲೈ 26ರಂದು ಆರಂಭವಾಗುತ್ತದೆ. ಆಗಸ್ಟ್​ 6, 2021ರಂದು ಗ್ಲೆನ್​ಮಾರ್ಕ್ ಲೈಫ್​ನಿಂದ ಸೆಕೆಂಡರಿ ಮಾರ್ಕೆಟ್​ನಲ್ಲಿ ವಹಿವಾಟು ಆರಂಭವಾಗುತ್ತದೆ.

ಏಪ್ರಿಲ್​ನಲ್ಲಿ ಫೈಲ್ ಮಾಡಿದ ಡಿಆರ್​ಎಚ್​ಪಿಯಂತೆ, ಕಂಪೆನಿಯಿಂದ ಹೊಸದಾಗಿ ಷೇರು ವಿತರಣೆ 1,160 ಕೋಟಿ ರೂಪಾಯಿ ಮತ್ತು 73.05 ಲಕ್ಷ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡುವುದಾಗಿ ಹೇಳಲಾಗಿತ್ತು. ಗ್ಲೆನ್​ಮಾರ್ಕ್​ ಲೈಫ್​ ಸೈನ್ಸ್​ನಿಂದ ಯಶಸ್ವಿ ಲಿಸ್ಟಿಂಗ್ ಆದ ಮೇಲೆ ಇದು ಡಿವೀಸ್ ಲ್ಯಾಬೊರೇಟರೀಸ್, ಲಾರಸ್ ಲ್ಯಾಬ್ಸ್, ಶಿಲ್ಪಾ ಮೆಡಿಕೇರ್, ಆರ್ತಿ ಡ್ರಗ್ಸ್, ಸೋಲಾರ ಆ್ಯಕ್ಟಿವ್ ಫಾರ್ಮಾ ಸೈನ್ಸಸ್ ಸಾಲಿನಲ್ಲಿ ಸೇರುತ್ತದೆ. ಈ ತಿಂಗಳಲ್ಲಿ ಬಂದಿರುವ ಐಪಿಒದಲ್ಲಿ ಗ್ಲೆನ್​ಮಾರ್ಕ್ ಸೈನ್ಸಸ್ ಐದನೇ ಐಪಿಒ ಆಗಿದೆ. ಕ್ಲೀನ್ ಸೈನ್ಸಸ್ ಅಂಡ್ ಟೆಕ್ನಾಲಜಿ, ಜಿಆರ್ ಇನ್​ಫ್ರಾಪ್ರಾಜೆಕ್ಟ್ಸ್, ಝೊಮ್ಯಾಟೋ ಮತ್ತು ತತ್ವ ಚಿಂತನ್ ಫಾರ್ಮಾ ಕೆಮ್ ಐಪಿಒ ಆಗಿದೆ. ಅಂದ ಹಾಗೆ ಕಳೆದ ನವೆಂಬರ್​ನಲ್ಲಿ ಐಪಿಒಗೆ ಬಂದ ಗ್ಲ್ಯಾಂಡ್ ಫಾರ್ಮಾ ಕಂಪೆನಿಯು ಫಾರ್ಮಾಸ್ಯುಟಿಕಲ್ಸ್​ ವಲಯದ ಕೊನೆ ಕಂಪೆನಿ.

ಈ ಈಕ್ವಿಟಿ ಷೇರು ಬಿಎಸ್​ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್​ ಮಾಡುವುದಕ್ಕೆ ಪ್ರಸ್ತಾವ ಆಗಿದೆ. ಸರಾಸರಿ ಇಂಡಸ್ಟ್ರಿ ಪಿಇ ರೇಷಿಯೋ 31.1 ಇದೆ. 2018, 2019 ಹಾಗೂ 2020ನೇ ಸಾಲಿಗೆ ನಿವ್ವಳ ಮೌಲ್ಯದ ಮೇಲೆ ವೇಯ್ಟೆಡ್ ಆ್ಯವರೇಜ್ ರಿಟರ್ನ್ ಶೇ 72.05 ಇದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಡಿಆರ್‌ಎಚ್‌ಪಿಯಲ್ಲಿ, ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ಈ ಷೇರು ವಿತರಣೆಯಿಂದ ಬರುವ ನಿವ್ವಳ ಆದಾಯವನ್ನು ಪ್ರವರ್ತಕರಿಂದ ಕಂಪೆನಿಗೆ ಎಪಿಐ ವ್ಯವಹಾರವನ್ನು ತಿರುಗಿಸಲು, ಪ್ರವರ್ತಕರಿಗೆ ಬಾಕಿ ಇರುವ ಖರೀದಿ ಮೊತ್ತವನ್ನು ಪಾವತಿಸಲು ಪ್ರಸ್ತಾಪಿಸಿದೆ. ಆದಾಯವನ್ನು ಬಂಡವಾಳ ವೆಚ್ಚದ ಅವಶ್ಯಕತೆಗಳು ಮತ್ತು ಸಾಮಾನ್ಯ ಸಾಂಸ್ಥಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಕಂಪೆನಿಯು ಯೋಜಿಸಿದೆ. ಸಾಮಾನ್ಯ ಸಾಂಸ್ಥಿಕ ಉದ್ದೇಶಗಳಿಗಾಗಿ ಬಳಸಲಾಗುವ ಮೊತ್ತವು ಹೊಸ ವಿತರಣೆಯ ನಿವ್ವಳ ಆದಾಯದ ಶೇಕಡಾ 25 ಮೀರಬಾರದು.

ಇದನ್ನೂ ಓದಿ: GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್

(Glenmark Life Sciences IPO will start subscription from July 27th. Here is the details about issue)