Gold Price Today: ಚಿನ್ನ, ಬೆಳ್ಳಿ ಖರೀದಿಗೂ ಮುನ್ನ ಗಮನಿಸಿ; ಇಂದು ಹೆಚ್ಚಾಗಿದೆ ದರ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price on 2nd December 2022 | ಬೆಂಗಳೂರು: ಕಳೆದ ಕೆಲವು ದಿನಗಳಿಂದ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಹೆಚ್ಚಿನ ಏರಿಳಿತ ಕಾಣದಿದ್ದ ಚಿನ್ನ ಮತ್ತು ಬೆಳ್ಳಿ ದರ ಇಂದು ಹೆಚ್ಚಾಗಿದೆ. ಚಿನ್ನದ ದರ (Gold Price) ತುಸು ಹೆಚ್ಚಾಗಿದ್ದರೆ ಬೆಳ್ಳಿ ದರ (Silver Price) ಕೆಜಿಗೆ ಬರೋಬ್ಬರಿ 2,200 ರೂ. ಹೆಚ್ಚಾಗಿದೆ. ಮೂರು ದಿನ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರ ಹಿಂದಿನ ದಿನದ ವಹಿವಾಟಿನಲ್ಲಿ ತುಸು ಹೆಚ್ಚಾಗಿತ್ತು. ಬೆಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 200 ರೂ. ಹೆಚ್ಚಳವಾಗಿ 48,750 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 210 ರೂ. ಏರಿಕೆಯಾಗಿ 53,180 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 2,200 ರೂ. ಏರಿಕೆಯಾಗಿ 63,600 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಇಂದೂ ಬದಲಾಗಿಲ್ಲ ಬೆಳ್ಳಿ ದರ, ಚಿನ್ನದ ಬೆಲೆ ತುಸು ಹೆಚ್ಚಳ; ಇಲ್ಲಿದೆ ವಿವರ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,550 ರೂ. ಮುಂಬೈ- 48,750 ರೂ, ದೆಹಲಿ- 48,800 ರೂ, ಕೊಲ್ಕತ್ತಾ- 48,750 ರೂ, ಬೆಂಗಳೂರು- 48,800 ರೂ, ಹೈದರಾಬಾದ್- 48,750 ರೂ, ಕೇರಳ- 48,750 ರೂ, ಪುಣೆ- 48,750 ರೂ, ಮಂಗಳೂರು- 48,800 ರೂ, ಮೈಸೂರು- 48,800 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 54,050 ರೂ, ಮುಂಬೈ- 53,180 ರೂ, ದೆಹಲಿ- 53,330 ರೂ, ಕೊಲ್ಕತ್ತಾ- 53,180 ರೂ, ಬೆಂಗಳೂರು- 53,230 ರೂ, ಹೈದರಾಬಾದ್- 53,180 ರೂ, ಕೇರಳ- 53,180 ರೂ, ಪುಣೆ- 53,180 ರೂ, ಮಂಗಳೂರು- 53,230 ರೂ, ಮೈಸೂರು- 53,230 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 69,800 ರೂ, ಮೈಸೂರು- 69,800 ರೂ., ಮಂಗಳೂರು- 69,800 ರೂ., ಮುಂಬೈ- 63,600 ರೂ, ಚೆನ್ನೈ- 69,800 ರೂ, ದೆಹಲಿ- 63,600 ರೂ, ಹೈದರಾಬಾದ್- 69,800 ರೂ, ಕೊಲ್ಕತ್ತಾ- 63,600 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ