Gold Silver Price on 6th December 2022 | ಬೆಂಗಳೂರು: ಚಿನ್ನದ (Gold) ಮೇಲಿನ ಹೂಡಿಕೆಯ ಟ್ರೆಂಡ್ ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿದ್ದು, ಆಭರಣ ಖರೀದಿಗೂ ವಿವಿಧ ಆಫರ್ಗಳನ್ನು ಉದ್ಯಮಿಗಳು ನೀಡುತ್ತಿದ್ದಾರೆ. ಹೈದರಾಬಾದ್ನ ಬೇಗಂಪೇಟ್ನಲ್ಲಿ ದೇಶದ ಮೊದಲ ರಿಯಲ್ಟೈಮ್ ಚಿನ್ನದ ಎಟಿಎಂ ಯಂತ್ರವನ್ನು (Real-Time Gold ATM) ಸ್ಥಾಪಿಸುವುದರೊಂದಿಗೆ ಚಿನ್ನ ಖರೀದಿ, ಚಿನ್ನದ ಮೇಲಿನ ಹೂಡಿಕೆ ಮತ್ತೊಂದು ಆಯಾಮ ಪಡೆದಿದೆ. ಈ ಮಧ್ಯೆ, ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಇಂದು ತುಸು ಹೆಚ್ಚಾಗಿದ್ದು, ಮತ್ತೆ ಏರಿಕೆಯ ಸುಳಿವು ನೀಡಿವೆ. ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಕಳೆದ ವಾರದ ವಹಿವಾಟಿನಲ್ಲಿ ಉಭಯ ಲೋಹಗಳ ದರ ಕೆಲವು ದಿನ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಇನ್ನು ಕೆಲವು ದಿನ ಇಳಿಕೆ ಕಂಡಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಳವಾಗಿ 49,600 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಏರಿಕೆಯಾಗಿ 54,110 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1,300 ರೂ. ಏರಿಕೆಯಾಗಿ 66,500 ರೂಪಾಯಿ ಆಗಿದೆ.
ಇದನ್ನೂ ಓದಿ: Gold ATM: ಹೈದರಾಬಾದ್ನ ಎಟಿಎಂನಲ್ಲಿ ಸಿಗುತ್ತೆ ಚಿನ್ನ! ಹೀಗೆ ವಿತ್ಡ್ರಾ ಮಾಡಬಹುದು ನೋಡಿ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,450 ರೂ. ಮುಂಬೈ- 49,600 ರೂ, ದೆಹಲಿ- 49,750 ರೂ, ಕೊಲ್ಕತ್ತಾ- 49,600 ರೂ, ಬೆಂಗಳೂರು- 49,650 ರೂ, ಹೈದರಾಬಾದ್- 49,600 ರೂ, ಕೇರಳ- 49,600 ರೂ, ಪುಣೆ- 49,600 ರೂ, ಮಂಗಳೂರು- 49,650 ರೂ, ಮೈಸೂರು- 49,650 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 55,040 ರೂ, ಮುಂಬೈ- 54,110 ರೂ, ದೆಹಲಿ- 54,260 ರೂ, ಕೊಲ್ಕತ್ತಾ- 49,600 ರೂ, ಬೆಂಗಳೂರು- 54,160 ರೂ, ಹೈದರಾಬಾದ್- 54,110 ರೂ, ಕೇರಳ- 54,110 ರೂ, ಪುಣೆ- 54,110 ರೂ, ಮಂಗಳೂರು- 54,160 ರೂ, ಮೈಸೂರು- 54,160 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 72,500 ರೂ, ಮೈಸೂರು- 72,500 ರೂ., ಮಂಗಳೂರು- 72,500 ರೂ., ಮುಂಬೈ- 66,500 ರೂ, ಚೆನ್ನೈ- 72,500 ರೂ, ದೆಹಲಿ- 66,500 ರೂ, ಹೈದರಾಬಾದ್- 72,500 ರೂ, ಕೊಲ್ಕತ್ತಾ- 72,500 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ