Gold Silver Price on 15 November 2022 | ಬೆಂಗಳೂರು: ರೂಪಾಯಿ ಮೌಲ್ಯ ಒಂದೇ ದಿನ 48 ಪೈಸೆ ಇಳಿಕೆಯಾಗಿ 81.26 ಆಗಿರುವುದು, ಷೇರುಪೇಟೆಗಳಲ್ಲಿ ಕಳೆದ ಕೆಲವು ದಿನಗಳ ಟ್ರೆಂಡ್ ಕೊನೆಗೊಂಡು ವಹಿವಾಟಿನಲ್ಲಿ ಕುಸಿತ ಕಂಡುಬಂದಿರುವುದು ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗಳ ಮಧ್ಯೆ ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಯಥಾಸ್ಥಿತಿ ಕಾಯ್ದುಕೊಂಡಿವೆ. ದೆಹಲಿಯಲ್ಲಿ ಮಾತ್ರ ಎರಡೂ ಲೋಹಗಳ ದರದಲ್ಲಿ ತುಸು ಹೆಚ್ಚಳವಾಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ದರ ಹೆಚ್ಚಾಗಿದ್ದರೆ, ಬೆಳ್ಳಿ ದರ ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 48,260 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,640 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 61,700 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಏರಿದ ಚಿನ್ನ, ಕುಸಿದ ಬೆಳ್ಳಿ ದರ; ಪ್ರಮುಖ ನಗರಗಳ ಧಾರಣೆ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,010 ರೂ. ಮುಂಬೈ- 48,260 ರೂ, ದೆಹಲಿ- 48,360 ರೂ, ಕೊಲ್ಕತ್ತಾ- 48,260 ರೂ, ಬೆಂಗಳೂರು- 48,290 ರೂ, ಹೈದರಾಬಾದ್- 48,260 ರೂ, ಕೇರಳ- 48,260 ರೂ, ಪುಣೆ- 48,270 ರೂ, ಮಂಗಳೂರು- 48,290 ರೂ, ಮೈಸೂರು- 48,290 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,470 ರೂ, ಮುಂಬೈ- 52,640 ರೂ, ದೆಹಲಿ- 52,760 ರೂ, ಕೊಲ್ಕತ್ತಾ- 52,640 ರೂ, ಬೆಂಗಳೂರು- 52,670 ರೂ, ಹೈದರಾಬಾದ್- 52,640 ರೂ, ಕೇರಳ- 52,640 ರೂ, ಪುಣೆ- 52,670 ರೂ, ಮಂಗಳೂರು- 52,670 ರೂ, ಮೈಸೂರು- 52,670 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,700 ರೂ, ಮೈಸೂರು- 67,700 ರೂ., ಮಂಗಳೂರು- 67,700 ರೂ., ಮುಂಬೈ- 61,700 ರೂ, ಚೆನ್ನೈ- 67,700 ರೂ, ದೆಹಲಿ- 61,700 ರೂ, ಹೈದರಾಬಾದ್- 67,700 ರೂ, ಕೊಲ್ಕತ್ತಾ- 61,700 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ