Gold Silver Price on 16 November 2022 | ಬೆಂಗಳೂರು: ರೂಪಾಯಿ ಮೌಲ್ಯದಲ್ಲಿ ಮತ್ತೆ ಇಳಿಕೆ, ಷೇರುಪೇಟೆ ತುಸು ಚೇತರಿಕೆ ಸೇರಿದಂತೆ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಅಂಶಗಳು ದೇಶದ ಬುಲಿಯನ್ ಮಾರುಕಟ್ಟೆಯ (Bullion Market) ವಹಿವಾಟಿನ ಮೇಲೆ ಪರಿಣಾಮ ಬೀರಿವೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಮತ್ತೆ ಏರಿಳಿತ ಕಂಡಿವೆ. ಚಿನ್ನದ ದರ ತುಸು ಇಳಿಕೆಯಾಗಿದ್ದು, ಬೆಳ್ಳಿ ದರ ಮತ್ತೆ ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 460 ರೂ. ಇಳಿಕೆಯಾಗಿ 47,800 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 490 ರೂ. ಇಳಿಕೆಯಾಗಿ 52,150 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂ. ಹೆಚ್ಚಳಗೊಂಡು 62,700 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳ ಬೆಲೆ ವಿವರ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,400 ರೂ. ಮುಂಬೈ- 47,800 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,800 ರೂ, ಬೆಂಗಳೂರು- 47,850 ರೂ, ಹೈದರಾಬಾದ್- 47,800 ರೂ, ಕೇರಳ- 47,800 ರೂ, ಪುಣೆ- 47,830 ರೂ, ಮಂಗಳೂರು- 47,850 ರೂ, ಮೈಸೂರು- 47,850 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,890 ರೂ, ಮುಂಬೈ- 52,150 ರೂ, ದೆಹಲಿ- 52,300 ರೂ, ಕೊಲ್ಕತ್ತಾ- 52,150 ರೂ, ಬೆಂಗಳೂರು- 52,200 ರೂ, ಹೈದರಾಬಾದ್- 52,150 ರೂ, ಕೇರಳ- 52,150 ರೂ, ಪುಣೆ- 52,180 ರೂ, ಮಂಗಳೂರು- 52,200 ರೂ, ಮೈಸೂರು- 52,200 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 68,500 ರೂ, ಮೈಸೂರು- 68,500 ರೂ., ಮಂಗಳೂರು- 68,500 ರೂ., ಮುಂಬೈ- 62,700 ರೂ, ಚೆನ್ನೈ- 68,500 ರೂ, ದೆಹಲಿ- 62,700 ರೂ, ಹೈದರಾಬಾದ್- 68,500 ರೂ, ಕೊಲ್ಕತ್ತಾ- 62,700 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ