Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ

| Updated By: Ganapathi Sharma

Updated on: Oct 25, 2022 | 6:30 AM

ಚಿನ್ನ ಹಾಗೂ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿವೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,010 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,290 ರೂ. ಆಗಿದೆ. ಬೆಳ್ಳಿ ದರ 57,700 ರೂಪಾಯಿ ಆಗಿದೆ.

Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ
ಬೆಳ್ಳಿ ಮತ್ತು ಚಿನ್ನದ ಗಟ್ಟಿ (ಸಂಗ್ರಹ ಚಿತ್ರ)
Image Credit source: ಪಿಟಿಐ
Follow us on

Gold Silver Price on 23rd October 2022 | ಬೆಂಗಳೂರು: ದೀಪಾವಳಿ (Diwali) ಸಂಭ್ರಮದ ಮಧ್ಯೆಯೇ ದೇಶದಾದ್ಯಂತ ಚಿನ್ನ, ಬೆಳ್ಳಿ ಹಾಗೂ ಆಭರಣಗಳ ಮಾರಾಟ ಭರದಿಂದ ಸಾಗಿದೆ. ಧನತ್ರಯೋದಶಿ ಅಥವಾ ಧನ್​ತೇರಸ್ (Dhanteras) ಪ್ರಯುಕ್ತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ (gold), ಬೆಳ್ಳಿ ಮತ್ತು ಆಭರಣ (jewellery) ಮಾರಾಟದಲ್ಲಿ ಕಳೆದ ಎರಡು ದಿನಗಳಲ್ಲಿ ಹೆಚ್ಚಳ ಕಂಡುಬಂದಿತ್ತು. ಕಳೆದ ವರ್ಷದ ದೀಪಾವಳಿ ಸಂದರ್ಭದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇಕಡಾ 35ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಮಾರುಕಟ್ಟೆ ಮೂಲಗಳು ಸೋಮವಾರ ಬೆಳಿಗ್ಗೆ ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಚಿನ್ನ ಹಾಗೂ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿವೆ.

ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,010 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,290 ರೂ. ಆಗಿದೆ. ಬೆಳ್ಳಿ ದರ 57,700 ರೂಪಾಯಿ ಆಗಿದೆ.

ಇದನ್ನೂ ಓದಿ: Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,410 ರೂ. ಮುಂಬೈ- 47,010 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,010 ರೂ, ಬೆಂಗಳೂರು- 47,060 ರೂ, ಹೈದರಾಬಾದ್- 47,010 ರೂ, ಕೇರಳ- 47,010 ರೂ, ಪುಣೆ- 47,040 ರೂ, ಮಂಗಳೂರು- 47,060 ರೂ, ಮೈಸೂರು- 47,060 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 51,720 ರೂ, ಮುಂಬೈ- 51,290 ರೂ, ದೆಹಲಿ- 51,450 ರೂ, ಕೊಲ್ಕತ್ತಾ- 51,290 ರೂ, ಬೆಂಗಳೂರು- 51,340 ರೂ, ಹೈದರಾಬಾದ್- 51,290 ರೂ, ಕೇರಳ- 51,290 ರೂ, ಪುಣೆ- 51,320 ರೂ, ಮಂಗಳೂರು- 51,340 ರೂ, ಮೈಸೂರು- 51,340 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 63,200 ರೂ, ಮೈಸೂರು- 63,200 ರೂ., ಮಂಗಳೂರು- 63,200 ರೂ., ಮುಂಬೈ- 57,700 ರೂ, ಚೆನ್ನೈ- 63,200 ರೂ, ದೆಹಲಿ- 57,700 ರೂ, ಹೈದರಾಬಾದ್- 63,200 ರೂ, ಕೊಲ್ಕತ್ತಾ- 57,700 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ