Gold Silver Price on 30 October 2022 | ಬೆಂಗಳೂರು: ವಾರಾಂತ್ಯದ ವಹಿವಾಟಿನಲ್ಲಿ ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ತುಸು ಇಳಿಕೆಯಾಗಿವೆ. ಹಿಂದಿನ ದಿನದ ವಹಿವಾಟಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಉಭಯ ಲೋಹಗಳ ದರ ಮತ್ತೆ ತುಸು ಇಳಿಕೆಯಾಗುವ ಮೂಲಕ ಕಳೆದ ಕೆಲವು ದಿನಗಳ ಏರಿಳಿಕೆಯ ಟ್ರೆಂಡ್ ಮುಂದುವರಿದಿದೆ. ದೇಶದ ಮಹಾ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 350 ರೂ. ಇಳಿಕೆಯಾಗಿ 46,750 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ 380 ರೂ ಇಳಿಕೆಯಾಗಿದೆ. ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 51,000 ರೂ. ಆಗಿದೆ. ಬೆಳ್ಳಿ ದರ 800 ರೂ. ಇಳಿಕೆಯಾಗಿ 57,500 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,050 ರೂ. ಮುಂಬೈ- 46,750 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,750 ರೂ, ಬೆಂಗಳೂರು- 46,800 ರೂ, ಹೈದರಾಬಾದ್- 46,750 ರೂ, ಕೇರಳ- 46,750 ರೂ, ಪುಣೆ- 46,780 ರೂ, ಮಂಗಳೂರು- 46,800 ರೂ, ಮೈಸೂರು- 46,800 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,330 ರೂ, ಮುಂಬೈ- 51,000 ರೂ, ದೆಹಲಿ- 51,160 ರೂ, ಕೊಲ್ಕತ್ತಾ- 51,000 ರೂ, ಬೆಂಗಳೂರು- 51,050 ರೂ, ಹೈದರಾಬಾದ್- 51,000 ರೂ, ಕೇರಳ- 51,000 ರೂ, ಪುಣೆ- 51,030 ರೂ, ಮಂಗಳೂರು- 51,050 ರೂ, ಮೈಸೂರು- 51,050 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 57,500 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 57,500 ರೂ, ಚೆನ್ನೈ- 63,000 ರೂ, ದೆಹಲಿ- 57,500 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 57,500 ರೂ. ಆಗಿದೆ.