ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ

ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್​ವಾಲ್ ಪಡೆಯಲಿದ್ದಾರೆ.

ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ
ಪರಾಗ್ ಅಗರವಾಲ್Image Credit source: Twitter & AP
Follow us
TV9 Web
| Updated By: Ganapathi Sharma

Updated on: Oct 28, 2022 | 5:10 PM

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್​ (Twitter) ಅನ್ನು ಉದ್ಯಮಿ ಎಲಾನ್ ಮಸ್ಕ್ (Elon Musk) ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್ (Parag Agrawal) ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಆದರೆ, ಉನ್ನತ ಹುದ್ದೆಯಲ್ಲಿರುವ ಪರಾಗ್ ಅಗರ್​ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಒಪ್ಪಂದದ ಪ್ರಕಾರ ನೀಡಬೇಕಿರುವ ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್​ವಾಲ್ ಪಡೆಯಲಿದ್ದಾರೆ. ಇದರಲ್ಲಿ ವರ್ಷದ ಮೂಲ ವೇತನ, ಎಲ್ಲ ಈಕ್ವಿಟಿ ಅವಾರ್ಡ್​ಗಳು ಸೇರಿರಲಿವೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Twitter: ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಕಾರುಬಾರು ಶುರು: ಸಿಇಒ ಪರಾಗ್ ಅಗರ್​ವಾಲ್ ಸೇರಿ ಹಲವು ಉನ್ನತ ಸಿಬ್ಬಂದಿ ವಜಾ

ಟ್ವಿಟರ್​ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರ್​ವಾಲ್​ ಅವರಿಗೆ 2021ರ ಪರಿಹಾರವಾಗಿ 30.4 ದಶಲಕ್ಷ ಡಾಲರ್ (ಅಂದಾಜು 250 ಕೋಟಿ ರೂ.) ನೀಡಬೇಕಿದೆ. ಸಿಇಒ ಆಗಿ ಅಗರ್​ವಾಲ್ ವೇತನ ವಾರ್ಷಿಕ 1 ದಶಲಕ್ಷ ಡಾಲರ್ (ಸುಮಾರು 8.24 ಕೋಟಿ ರೂ.) ಇದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ
Image
Petrol Price On October 28: ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆಯೇ? ತಿಳಿಯಿರಿ
Image
Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ
Image
RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ
Image
Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಕಳೆದ ವರ್ಷ ಅಧಿಕಾರ ಸ್ವೀಕರಿಸಿದ್ದ ಅಗರ್​ವಾಲ್

ಕಳೆದ ವರ್ಷ ನವೆಂಬರ್​ನಲ್ಲಿ ಪರಾಗ್ ಅಗರ್​ವಾಲ್​ ಟ್ವಿಟರ್​ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಅಧಿಕಾರ ಸ್ವೀಕರಿಸಿದ್ದರು. ಆದರೆ, ಮಸ್ಕ್ ಅವರು ಕಂಪನಿಯನ್ನು ಖರೀದಿಸುತ್ತಿದ್ದಂತೆಯೇ ಅಗರವಾಲ್ ಸ್ಥಾನಕ್ಕೆ ಕುತ್ತುಬಂದಿದೆ. ಆದರೆ, ಅಗರವಾಲ್ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಟ್ವಿಟರ್ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಪರಿಹಾರ ಪಡೆಯಲು ಅವರು ಅರ್ಹರಾಗಿರುತ್ತಾರೆ. ಇದರಂತೆ, ಟ್ವಿಟರ್​ನಿಂದ ಅವರಿಗೆ ಅಂದಾಜು 346 ಕೋಟಿ ರೂ. ಪರಿಹಾರ ದೊರೆಯಬೇಕಿದೆ.

ಉದ್ಯಮಿ ಎಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್​ಗೆ ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ. ಈ ಕುರಿತು ಶುಕ್ರವಾರ ಬೆಳಿಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್, ಟ್ವಿಟರ್​ನ ಸಿಎಫ್​ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್