Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

ವಾರಾಂತ್ಯದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಚಿನ್ನದ ಬೆಲೆ
Follow us
TV9 Web
| Updated By: Ganapathi Sharma

Updated on: Oct 29, 2022 | 6:30 AM

Gold Silver Price on 29 October 2022 | ಬೆಂಗಳೂರು: ವಾರಾಂತ್ಯದ ವಹಿವಾಟಿನ ಸಂದರ್ಭದಲ್ಲಿ ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಯಥಾಸ್ಥಿತಿ ಕಾಯ್ದುಕೊಂಡಿವೆ. ಕಳೆದ ಕೆಲವು ದಿನಗಳಿಂದ ಏರಿಳಿತದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಚಿನ್ನ, ಬೆಳ್ಳಿ ದರ ಇಂದು ತಟಸ್ಥವಾಗಿವೆ. ಹಿಂದಿನ ವಹಿವಾಟು ಅವಧಿ ಮುಕ್ತಾಯಗೊಳ್ಳುವಾಗ ಉಭಯ ಲೋಹಗಳ ದರದಲ್ಲಿ ತುಸು ಏರಿಕೆ ದಾಖಲಾಗಿತ್ತು. ವಾರಾಂತ್ಯದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,100 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸವಾಗಿಲ್ಲ. ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 51,380 ರೂ. ಆಗಿದೆ. ಬೆಳ್ಳಿ ದರ 58,300 ರೂಪಾಯಿ ಆಗಿದೆ.

ಇದನ್ನೂ ಓದಿ
Image
Petrol Price On October 28: ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆಯೇ? ತಿಳಿಯಿರಿ
Image
Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ
Image
RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ
Image
Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಇದನ್ನೂ ಓದಿ: Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,350 ರೂ. ಮುಂಬೈ- 47,100 ರೂ, ದೆಹಲಿ- 47,250 ರೂ, ಕೊಲ್ಕತ್ತಾ- 47,100 ರೂ, ಬೆಂಗಳೂರು- 47,150 ರೂ, ಹೈದರಾಬಾದ್- 47,100 ರೂ, ಕೇರಳ- 47,100 ರೂ, ಪುಣೆ- 47,130 ರೂ, ಮಂಗಳೂರು- 47,150 ರೂ, ಮೈಸೂರು- 47,150 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 51,760 ರೂ, ಮುಂಬೈ- 51,380 ರೂ, ದೆಹಲಿ- 51,530 ರೂ, ಕೊಲ್ಕತ್ತಾ- 51,380 ರೂ, ಬೆಂಗಳೂರು- 51,430 ರೂ, ಹೈದರಾಬಾದ್- 51,380 ರೂ, ಕೇರಳ- 51,380 ರೂ, ಪುಣೆ- 51,310 ರೂ, ಮಂಗಳೂರು- 51,430 ರೂ, ಮೈಸೂರು- 51,430 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 58,300 ರೂ, ಮೈಸೂರು- 63,700 ರೂ., ಮಂಗಳೂರು- 63,700 ರೂ., ಮುಂಬೈ- 58,300 ರೂ, ಚೆನ್ನೈ- 63,700 ರೂ, ದೆಹಲಿ- 58,300 ರೂ, ಹೈದರಾಬಾದ್- 63,700 ರೂ, ಕೊಲ್ಕತ್ತಾ- 63,700 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ