Dhanteras 2022: ಧನ್ತೇರಸ್​ ದಿನದಂದು ಚಿನ್ನ, ಬೆಳ್ಳಿ ಖರೀದಿಸುವುದೇಕೆ? ಇಲ್ಲಿದೆ ಶುಭ ಸಮಯ, ಮಹತ್ವ

ಧನ್ತೇರಸ್ ದಿನದಂದು, ಜನರು ಸಾಂಪ್ರದಾಯಿಕವಾಗಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು, ಆಭರಣಗಳನ್ನು ಖರೀದಿಸುತ್ತಾರೆ. ಏಕೆಂದರೆ, ಈ ದಿನ ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಿದ್ದಳು.

Dhanteras 2022: ಧನ್ತೇರಸ್​ ದಿನದಂದು ಚಿನ್ನ, ಬೆಳ್ಳಿ ಖರೀದಿಸುವುದೇಕೆ? ಇಲ್ಲಿದೆ ಶುಭ ಸಮಯ, ಮಹತ್ವ
(ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Oct 22, 2022 | 10:05 AM

ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್ ದಿನವನ್ನು(Dhanteras 2022) ಐದು ದಿನಗಳು ಆಚರಿಸುವ ದೀಪಾವಳಿ ಹಬ್ಬದ ಮೊದಲ ದಿನವಾಗಿದೆ. ಧನತ್ರಯೋದಶಿಯ ದಿನದಂದು, ಸಮುದ್ರ-ಮಂಥನದ ವೇಳೆ ಲಕ್ಷ್ಮಿ ದೇವಿಯು ಸಾಗರದಿಂದ ಹೊರಹೊಮ್ಮಿದಳು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಲಕ್ಷ್ಮಿ ದೇವಿಯನ್ನು ಜೊತೆಗೆ ಸಂಪತ್ತಿನ ದೇವರು ಕುಬೇರನನ್ನು ಧನ್ತೇರಸ್ ದಿನದಂದು ಪೂಜಿಸಲಾಗುತ್ತದೆ. ಲಕ್ಷ್ಮಿ ಪೂಜೆಯು ಧನತ್ರಯೋದಶಿಯ ಎರಡು ದಿನಗಳ ನಂತರ ಅಮವಾಸ್ಯೆಯಂದು ನಡೆಯುತ್ತದೆ. ಏಕೆಂದರೆ ಇದು ಹೆಚ್ಚು ಮಹತ್ವದ್ದಾಗಿದೆ.

ಧನ್ತೇರಸ್ 2022 ಶುಭ ಸಮಯ

ಈ ವರ್ಷ ಅಶ್ವಿನಿ ಕೃಷ್ಣ ತ್ರಯೋದಶಿಯ ದಿನಾಂಕವು ಅಕ್ಟೋಬರ್ 22 ರ ಸಂಜೆಯಿಂದ ಮರುದಿನ ಅಕ್ಟೋಬರ್ 23 ರ ಸಂಜೆಯವರೆಗೆ ಆಚರಿಸಬಹುದು. ಹೀಗಾಗಿ ಚಿನ್ನ ಖರೀದಿಸಲು ಎರಡು ದಿನಗಳು ಸಿಕ್ಕಿವೆ. ಅಕ್ಟೋಬರ್ 22 ರ ಸಂಜೆ 4:33 ಕ್ಕೆ ಧನತ್ರಯೋದಶಿ ಪ್ರಾರಂಭವಾಗಿ ತ್ರಯೋದಶಿ ಅಕ್ಟೋಬರ್ 23 ರ ಸಂಜೆ 5:04 ರವರೆಗೆ ಇರುತ್ತದೆ. ರಾಹುಕಾಲ ಬೆಳಿಗ್ಗೆ 9 ರಿಂದ 10:30 ರವರೆಗೆ ಇರುತ್ತದೆ. ಕುಂಭವು ಮಧ್ಯಾಹ್ನ 3.38 ರಿಂದ 5:6 ರವರೆಗೆ ಇರುತ್ತದೆ ಮತ್ತು ರಾತ್ರಿ 8.41 ರಿಂದ 10.55 ರವರೆಗೆ ವೃಷಭ ರಾಶಿ ಇರುತ್ತದೆ.

ಧನ್ತೇರಸ್ ದಿನದಂದು, ಜನರು ಸಾಂಪ್ರದಾಯಿಕವಾಗಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು, ಆಭರಣಗಳನ್ನು ಖರೀದಿಸುತ್ತಾರೆ. ಏಕೆಂದರೆ, ಈ ದಿನ ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಿದ್ದಳು. ಹೀಗಾಗಿ ಈ ದಿನ ಚಿನ್ನ, ಬೆಳ್ಳಿ ಖರೀದಿಸುವುದರಿಂದ ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆ. ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: Gold Price Today: ಬೆಳ್ಳಿ ದರ ಸ್ಥಿರ, ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ

ಧನ್ತೇರಸ್ ಮಹತ್ವ

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಈ ದಿನ ಪೂಜೆಯಲ್ಲಿ ಚಿನ್ನವನ್ನು ಇಡಲಾಗುತ್ತದೆ. ಕುಟುಂಬದಲ್ಲಿ ಯಾವುದೇ ಅಕಾಲಿಕ ಮರಣವನ್ನು ತಪ್ಪಿಸಲು, ಮನೆಯ ಹೊರಗೆ ಯಮದೀಪವನ್ನು ಬೆಳಗಿಸುವ ಆಚರಣೆ ಕೂಡ ಇದೆ. ಧನ್ತೇರಸ್ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದು ಬಲವಾದ ನಂಬಿಕೆಯಾಗಿದೆ. ಧನ್ತೇರಸ್‌ನಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಮಾತ್ರವಲ್ಲದೆ ಆಸ್ತಿ ಮತ್ತು ಇತರಲ್ಲಿ ಹೂಡಿಕೆ ಮಾಡುತ್ತಾರೆ. ಹಳದಿ ಲೋಹವನ್ನು ಖರೀದಿಸುವುದು ಕೇವಲ ಸಂಪ್ರದಾಯವಲ್ಲ ಆದರೆ ಇದು ಉತ್ತಮ ಹೂಡಿಕೆ ಮಾಡುವ ಮಾರ್ಗವಾಗಿದೆ.

ಧನ್ತೇರಸ್ ಕಥೆ

ಧನ್ತೇರಸ್ ದಿನದಂದು ಸಮುದ್ರ-ಮಂಥನದ ವೇಳೆ ಲಕ್ಷ್ಮಿ ದೇವಿಯು ಸಾಗರದಿಂದ ಹೊರಹೊಮ್ಮಿದಳು ಎಂಬುವುದು ಒಂದು ಕಥೆಯಾದ್ರೆ. ಇನ್ನೊಂದು ಕಥೆಯೆಂದರೆ, ರಾಜ ಹಿಮನ ಮಗನಿಗೆ ಅವನ ಜಾತಕದಲ್ಲಿ ಕಂಟಕ ಎದುರಾಗಿತ್ತು. ಅವನ ಮದುವೆಯ ನಾಲ್ಕನೇ ದಿನದಂದು ಅವನು ಹಾವು ಕಡಿತದಿಂದ ಮೃತಪಡುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯಕ್ಕೆ ಸವಾಲೆಂಬಂತೆ ಅವನ ಹೆಂಡತಿ ಅವನನ್ನು ದಿನವಿಡೀ ಮಲಗಲು ಬಿಡದೆ. ಅವನನ್ನು ಕಾಯುತ್ತಿದ್ದಳು. ಅವಳು ತನ್ನ ಎಲ್ಲಾ ಆಭರಣಗಳನ್ನು ಒಂದು ಬುಟ್ಟಿಯಲ್ಲಿ ಇರಿಸಿ ಕೆಲವು ದೀಪಗಳನ್ನು ಬೆಳಗಿ ಬಾಗಿಲಿನ ಬಳಿ ಇಡುತ್ತಿದ್ದಳು. ಇದನ್ನೂ ಓದಿ: Deepavali 2022: ನೀವು ಹಿಂದೆ ಮಾಡಿರುವ ಪಾಪಗಳನ್ನ ಕಳೆಯಲು ದೀಪಾವಳಿಯಂದು ಈ ಪೂಜೆ ಮಾಡಿ

ಹಾಡು ಹಾಡಿ ಗಂಡ ನಿದ್ರೆಗೆ ಜಾರದಂತೆ ಎಚ್ಚರವಹಿಸುತ್ತಿದ್ದಳು. ಮರುದಿನ, ಯಮನು ಹಿಮ ರಾಜನ ಮಗನ ಪ್ರಾಣವನ್ನು ಪಡೆಯಲು ಸರ್ಪ ರೂಪದಲ್ಲಿ ಬರುತ್ತಾನೆ. ಆಗ ಬಾಗಿಲ ಬಳಿ ಇರಿಸಿದ್ದ ದೀಪ ಮತ್ತು ಆಭರಣದಿಂದ ಹೊರಹೊಮ್ಮುವ ಬೆಳಕಿನಿಂದ ಬೆರಗುಗೊಳ್ಳುತ್ತಾನೆ. ಆ ಬೆಳಕು ಯಮನನ್ನು ತಡೆಯುತ್ತದೆ. ಯಮನು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಸೋಲೊಪ್ಪಿಕೊಂಡ ಯಮ ಹಿಂದಿರುಗಿದ ಎಂಬ ಮಾತಿದೆ.

Published On - 10:05 am, Sat, 22 October 22