Deepavali 2022: ನೀವು ಹಿಂದೆ ಮಾಡಿರುವ ಪಾಪಗಳನ್ನ ಕಳೆಯಲು ದೀಪಾವಳಿಯಂದು ಈ ಪೂಜೆ ಮಾಡಿ
ಲಕ್ಷ್ಮೀ ಪೂಜೆಯ ಜೊತೆಗೆ ಗೋ ಪೂಜೆಯನ್ನು ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಗೋವಿಗೆ ಒಂದು ವಿಶೇಷ ಸ್ಥಾನವಿದೆ.
ದೀಪಾವಳಿ ಹಬ್ಬ ಎಂದಾ ಕ್ಷಣ ಕಣ್ಮುಂದೆ ಬರುವುದು ಬೆಳಕಿನ ಹಬ್ಬದ ಸಂಭ್ರಮ, ಪಟಾಕಿ ಸಾಲು ಸಾಲು ದೀಪಗಳು. ಈ ದೀಪಾವಳಿ ಹಬ್ಬ ಎಂದ ಕ್ಷಣ ಪ್ರತಿ ಮನೆಯಲ್ಲೂ ಸಂಭ್ರಮದ ವಾತಾವರಣ ಇರುತ್ತದೆ. ದೀಪಾವಳಿ ಹಬ್ಬ ನಮ್ಮ ದೇಶದಲ್ಲಿ ನಡೆಯುವ ವಿಶೇಷವಾದ ಹಬ್ಬ, ಈಡಿ ದೇಶಕ್ಕೆ ದೇಶವೇ ಈ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತದೆ. ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ಯುವ ಹಬ್ಬ ದೀಪಾವಳಿ, ನಮ್ಮ ಬದುಕಿಗೆ ಹೊಸ ಬೆಳಕನ್ನು ನೀಡುವ ದಾರಿ ದೀಪ ಈ ಹಬ್ಬ. ಈ ದಿನದಂದು ಎಲ್ಲರ ಮನೆಯಲ್ಲೂ ಸಂತೋಷದ ಛಾಯೆ ಇರುತ್ತದೆ. ಮನೆ ಮನೆಯಲ್ಲಿ ನಡೆಯುವ ಈ ವಿಶೇಷ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ತಾಯಿ ಸ್ವರೂಪಿಯಾಗಿರುವ ಲಕ್ಷ್ಮಿ ದೇವಿಯು ಬೆಳಕಿನ ಹಬ್ಬದಂದು ಎಲ್ಲಾರ ಮನೆಯಲ್ಲಿ ನೆಲೆಸಿ ಆಶೀರ್ವಾದವನ್ನು ನೀಡುತ್ತಾಳೆ ಎಂಬುದು ಈ ಹಬ್ಬದ ವಿಶೇಷತೆ ಮತ್ತು ನಂಬಿಕೆ ಕೂಡ ಹೌದು.
ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ ಎಂಬ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಬೆಳಕಿನ ಹಬ್ಬ. ನಮ್ಮ ದೇಶದಲ್ಲಿ ಅಚರಿಸುವ ಎಲ್ಲಾ ಹಬ್ಬಕ್ಕೂ ತನ್ನದೆಯಾಗಿರುವ ವಿಶೇಷತೆ ಇದೆ. ನಮ್ಮ ದೇಶವನ್ನು ಸಂಸ್ಕೃತಿಯ ನಾಡು. ಈ ದಿನದಂದು ಮನೆ-ಮನೆಗಳಲ್ಲಿ ದೀಪಗಳು ಪ್ರಜ್ವಲಿಸುತ್ತಿರುತ್ತದೆ. ದೀಪಾವಳಿ ಹಬ್ಬ ಹಿಂದೂ ಸಂಸ್ಕೃತಿಯ ಒಂದು ಪ್ರತಿಕಾ, ಪ್ರತಿ ಹಿಂದೂಗಳ ಮನೆಯಲ್ಲೂ, ಈ ಹಬ್ಬದಂದು ದೀಪ ಹಚ್ಚಿ, ಪಟಾಕಿ ಹೊಡೆದು ಸಂಭ್ರಮಿಸುವ ಪರ್ವ ಕಾಲ ಎಂದು ಹೇಳುತ್ತಾರೆ. ಈ ದೀಪಾವಳಿಯಂದು ನಂದಾದೀಪವನ್ನು ಹಚ್ಚಿ ಪೂಜೆಸುವುದು ಎಂಬ ಅರ್ಥ ನೀಡುತ್ತದೆ.
ಇದನ್ನು ಓದಿ: Deepavali 2022 ನಿಮ್ಮ ರಾಶಿ ಪ್ರಕಾರ ಧನ ತ್ರಯೋದಶಿಯಂದು ಈ ವಸ್ತು ಖರೀದಿಸಿದರೆ ಮಂಗಳಕರ
ಲಕ್ಷ್ಮೀ ಪೂಜೆಯ ಜೊತೆಗೆ ಗೋ ಪೂಜೆಯನ್ನು ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಗೋವಿಗೆ ಒಂದು ವಿಶೇಷ ಸ್ಥಾನವಿದೆ. ನಮ್ಮ ಸಂಸ್ಕತಿಯ ಪ್ರಕಾರ ಗೋವನ್ನು ನಾವು ದೇವರ ಅಂಶ ಎಂದು ಕೂಡ ಪೂಜಿಸುತ್ತೇವೆ. ದೀಪಾವಳಿ ಹಬ್ಬದಂದು ನಾವು ಯಾವ ರೀತಿಯಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ ಅದೇ ರೀತಿಯಾಗಿ ಆ ದಿನದಂದು ಭೂಮಾತೆ , ಕಾಮಧೇನು ಹೀಗೆ ತಾಯಿಯ ಅಂಶವಾಗಿರುವ ಪ್ರತಿಯೊಂದು ಜೀವಿಯನ್ನು ಪೂಜಿಸುವುದು ಈ ಹಬ್ಬದ ವಿಶೇಷತೆ.
ಮನುಷ್ಯನ ಅನೇಕ ಅವಶ್ಯಕತೆಗಳನ್ನು ಈಡೇರಿಸುವ ಕಾಮಧೇನು ದೇವಾನು ದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ದಿನನಿತ್ಯ ನಾವು ನೋಡುವ, ಪೂಜಿಸುವ ದೇವರೆಂದರೆ ಅದು ಗೋವು. ಹಸುವಿಲ್ಲದೆ ಮನುಷ್ಯನಿಗೆ ಜೀವನ ಇಲ್ಲ, ಹಸುವಿನಿಂದ ಸಿಗುವ ಹಾಲು, ಹಾಲಿನಿಂದ ಉತ್ಪಾದಿಸುವ ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ, ಹಾಗೂ ಗೋವುಗಳ ಗಂಜಳ, ಸಗಣಿ ಎಲ್ಲವೂ ಉಪಯೋಗವಾಗುತ್ತದೆ. ಹಸುವನ್ನು ಲಕ್ಷೀಗೆ ಹೋಲಿಸುತ್ತಾರೆ. ಯಾವುದೆಲ್ಲ ಮಾತೃಸ್ವರೂಪವೋ ಅವೆಲ್ಲವೂ ನಮಗೆ ಲಕ್ಷ್ಮಿ ದೇವಿಯ ಸ್ವರೂಪ. ವೇದಗಳ ಪ್ರಕಾರ ಗೋ ಪೂಜೆಯನ್ನು ಮಾಡುವುದರಿಂದ ಮನುಷ್ಯನ್ನು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಗಳು ಕಳೆದು ಹೋಗುತ್ತದೆ ಎಂದು ಅನೇಕರ ನಂಬಿಕೆ. ದೀಪಾವಳಿ ದಿನದಂದು ಹಸುವಿಗೆ ವಿಶೇಷವಾದಂತಹ ಪೂಜೆ ನಡೆಸುತ್ತಾರೆ.
ರಾತ್ರಿ ಗೋವುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ, ತುಳಸಿ ಮಾಲೆ ಹಾಕಿ ಗೋವಿನ ಹಣೆಗೆ ಕುಂಕುಮ ಹಚ್ಚಿ, ಆರತಿ ಬೆಳಗುತ್ತಾರೆ, ನಂತರ ಗೋವುಗಳಿಗೆ ಹರಳು, ಅವಲಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ಭಕ್ಷಕಗಳನ್ನಾಗಿ ನೀಡಿ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಗೋವುಗಳಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ. ಹಾಗಾಗಿ ಗೋ ಪೂಜೆ ಮಾಡುವುದರಿಂದ 33 ಕೋಟಿ ದೇವತೆಗಳನ್ನು ಆರಾಧಿಸಿದಂತೆ ಎಂದರೆ ತಪ್ಪಲ್ಲ. ಈ ಎಲ್ಲಾ ಕಾರಣದಿಂದಾಗಿ ಗೋವುಗಳನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಾರೆ.
ಕವಿತಾ, ವಿಟ್ಲ