AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanteras Daan: ಧನ್ ತೇರಾಸ್, ದೀಪಾವಳಿ ದಿನದಂದು ಇದನ್ನು ದಾನ ಮಾಡಿ, ವರ್ಷಪೂರ್ತಿ ನಿಮಗೆ ಶುಭವೇ ಜರುಗುತ್ತದೆ

Deepavali 2022: ಧನ್ ತೇರಾಸ್ ದಾನ: ಧನ್ ತೇರಾಸ್, ದೀಪಾವಳಿಯ ದಿನದಂದು ಮಾಡುವ ಯಾವುದೇ ಕ್ರಮಗಳು ವಿಶೇಷವಾಗಿ ಫಲಪ್ರದವಾಗುತ್ತವೆ. ಈ ದಿನ ನೀವು ಮಾಡುವ ದಾನವು ಶುಭ ಫಲವನ್ನು ತಂದುಕೊಡುತ್ತದೆ. ಸುಪ್ರಸನ್ನಗೊಳ್ಳುವ ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸುತ್ತಾಳೆ.

Dhanteras Daan: ಧನ್ ತೇರಾಸ್, ದೀಪಾವಳಿ ದಿನದಂದು ಇದನ್ನು ದಾನ ಮಾಡಿ, ವರ್ಷಪೂರ್ತಿ ನಿಮಗೆ ಶುಭವೇ ಜರುಗುತ್ತದೆ
ಧನ್ ತೇರಾಸ್, ದೀಪಾವಳಿ ದಿನದಂದು ಇದನ್ನು ದಾನ ಮಾಡಿ, ವರ್ಷಪೂರ್ತಿ ನಿಮಗೆ ಶುಭವೇ ಜರುಗುತ್ತದೆ
TV9 Web
| Updated By: ಸಾಧು ಶ್ರೀನಾಥ್​|

Updated on: Oct 22, 2022 | 2:40 PM

Share

ಧನ್ ತೇರಾಸ್ ದಾನ: ಧನ್ ತೇರಾಸ್, ದೀಪಾವಳಿಯ ದಿನದಂದು ಮಾಡುವ ಯಾವುದೇ ಕ್ರಮಗಳು ವಿಶೇಷವಾಗಿ ಫಲಪ್ರದವಾಗುತ್ತವೆ. ಈ ದಿನ ನೀವು ಮಾಡುವ ದಾನವು ಶುಭ ಫಲವನ್ನು ತಂದುಕೊಡುತ್ತದೆ. ಸುಪ್ರಸನ್ನಗೊಳ್ಳುವ ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸುತ್ತಾಳೆ.

ಸಂತೋಷ ಮತ್ತು ಸಮೃದ್ಧಿಗಾಗಿ ಧನ್ ತೇರಾಸ್ ಮತ್ತು ದೀಪಾವಳಿಯಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಧನ್ ತೇರಾಸ್ ಮತ್ತು ದೀಪಾವಳಿ ಎರಡೂ ಆಚರಣೆಗಳಲ್ಲಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪ್ರಯತ್ನಿಸಿ. ದೀಪಾವಳಿ ಹಬ್ಬವು ಧನ್ ತೇರಾಸ್ ದಿನದಿಂದ ಪ್ರಾರಂಭವಾಗುತ್ತದೆ. ಧನ್ ತೇರಾಸ್ ದಿನ ಚಿನ್ನ, ಬೆಳ್ಳಿ ಅಥವಾ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ. ದೀಪಾವಳಿಯಂದು ಮಾಡಿದ ಧನ್ ತೇರಾಸ್ ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ಉಳಿಯುತ್ತದೆ ಎಂಬ ನಂಬಿಕೆ ಇದೆ. ಧನ್ ತೇರಾಸ್ ಮತ್ತು ದೀಪಾವಳಿಯಂದು ಯಾವ ರೀತಿಯ ವಸ್ತುಗಳನ್ನು ದಾನ ಮಾಡಬೇಕೆಂದು ತಿಳಿಯೋಣ.

  1. * ದೀಪಾವಳಿ ಮತ್ತು ಧನ್ ತೇರಾಸ್ ಸಂದರ್ಭದಲ್ಲಿ ಅನ್ನ ದಾನ ಮಾಡಿ: ಧನ್ ತೇರಾಸ್ ಮತ್ತು ದೀಪಾವಳಿಯಂದು ಆಹಾರವನ್ನು ನೀಡುವುದು (ಅನ್ನ ದಾನ) ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಆಹಾರ ಧಾನ್ಯಗಳನ್ನು ದಾನ ಮಾಡುವ ಮೂಲಕ ದಾನದ ಧರ್ಮ ಗಳಿಸಲಾಗುತ್ತದೆ. ಧನ್ ತೇರಾಸ್ ದಿನದಂದು ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಆಹಾರದ ಕೊರತೆ ಎದುರಾಗುವುದಿಲ್ಲ. ಊಟ ಮಾಡಿದವರಿಗೆ ದಕ್ಷಿಣೆಯನ್ನು ಕೊಟ್ಟು ಕಳುಹಿಸಿ.
  2. * ಶನಿ ದೇವರ ಲೋಹ ಕಬ್ಬಿಣದ ದಾನ: ಧನ್ ತೇರಾಸ್ ದಿನದಂದು ಕಬ್ಬಿಣ ದಾನ ಮಾಡುವುದನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಧನ್ ತೇರಾಸ್ ದಿನ ಕಬ್ಬಿಣವನ್ನು ದಾನ ಮಾಡಿದರೆ ಯಾವುದೇ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಕಬ್ಬಿಣವನ್ನು ಶನಿ ದೇವರ ಲೋಹವೆಂದು ಪರಿಗಣಿಸಲಾಗಿದೆ. ಧನ್ ತೇರಾಸ್ ಅಥವಾ ದೀಪಾವಳಿಯ ದಿನದಂದು ಕಬ್ಬಿಣವನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಶನಿಯ ಮಂಗಳಕರ ಫಲಗಳು ಸಿಗುತ್ತವೆ.
  3. * ಪೊರಕೆ ದಾನ ಮಾಡುವುದು ಅತ್ಯಂತ ಮಂಗಳಕರ: ಧನ್ ತೇರಾಸ್ ಮತ್ತು ದೀಪಾವಳಿಯಂದು ಪೊರಕೆಯನ್ನು ದಾನ ಮಾಡುವುದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಎರಡು ದಿನಗಳಲ್ಲಿ ಪೊರಕೆಯನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂಬುದು ನಂಬಿಕೆ. ಇದಲ್ಲದೆ, ನೀವು ಯಾವುದೇ ದೇವಾಲಯಕ್ಕೆ ಪೊರಕೆಯನ್ನು ದಾನ ಮಾಡಬಹುದು. ಈ ರೀತಿ ಮಾಡುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಹಣದ ಕೊರತೆ ಎದುರಾಗುವುದಿಲ್ಲ.
  4. * ವಸ್ತ್ರ ದಾನ: ದೀಪಾವಳಿ ಮತ್ತು ಧನ್ ತೇರಾಸ್ ನಲ್ಲಿ ಬಡವರಿಗೆ ಬಟ್ಟೆ ದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಇದರಿಂದ ಸಂತುಷ್ಟನಾದ ಕುಬೇರನು ತನ್ನ ಆಶೀರ್ವಾದವನ್ನು ಧಾರೆಯೆರೆಯುತ್ತಾನೆ ಎಂದು ನಂಬಲಾಗಿದೆ. ಕುಬೇರನ ಕೃಪೆಯಿಂದ ಮನೆಯಲ್ಲಿನ ಸಂಪತ್ತು ಖಾಲಿಯಾಗುವುದಿಲ್ಲ. ಧನ್ ತೇರಾಸ್ ದಿನದಂದು ವಸ್ತ್ರ ದಾನ ಮಾಡುವುದನ್ನು ಮಹಾದಾನ ಎಂದು ಪರಿಗಣಿಸಲಾಗುತ್ತದೆ.
  5. * ಉಡುಗೊರೆಯಾಗಿ ಸಿಹಿತಿಂಡಿಗಳು: ಧನ್ ತೇರಾಸ್, ದೀಪಾವಳಿಯಂದು ಆಹಾರ ಮತ್ತು ಬಟ್ಟೆಗಳನ್ನು ಹೊರತುಪಡಿಸಿ, ತೆಂಗಿನಕಾಯಿ ಮತ್ತು ಸಿಹಿತಿಂಡಿಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.