Firecrackers: ಮಕ್ಕಳು ಪಟಾಕಿ ಹೊಡೆಯುವ ಮೊದಲು ಇವಿಷ್ಟೂ ಗೊತ್ತಿರಬೇಕು: ಪಟಾಕಿಯಲ್ಲಿ ಏನಿರುತ್ತೆ? ಗಾಯವಾದರೆ ಉಪಚಾರ ಹೇಗೆ?

ದೀಪಾವಳಿಯು ನಮಗೆ ತಿಳಿದಂತೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಒಂದು ಬಹುಮುಖ್ಯ ಹಬ್ಬ, ಎಲ್ಲರೂ ಖುಷಿಯಿಂದ ಕುಣಿಯುವ ಹಬ್ಬ, ಎಲ್ಲರೂ ಮನೆ ಮತ್ತು ಮನವನ್ನು ಸ್ವಚ್ಛಗೊಳಿಸುವ ಹಬ್ಬ.

Firecrackers: ಮಕ್ಕಳು ಪಟಾಕಿ ಹೊಡೆಯುವ ಮೊದಲು ಇವಿಷ್ಟೂ ಗೊತ್ತಿರಬೇಕು: ಪಟಾಕಿಯಲ್ಲಿ ಏನಿರುತ್ತೆ? ಗಾಯವಾದರೆ ಉಪಚಾರ ಹೇಗೆ?
Dr Niveditha HV
Follow us
TV9 Web
| Updated By: ನಯನಾ ರಾಜೀವ್

Updated on:Oct 23, 2022 | 11:43 AM

ದೀಪಾವಳಿಯು ನಮಗೆ ತಿಳಿದಂತೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಒಂದು ಬಹುಮುಖ್ಯ ಹಬ್ಬ, ಎಲ್ಲರೂ ಖುಷಿಯಿಂದ ಕುಣಿಯುವ ಹಬ್ಬ, ಎಲ್ಲರೂ ಮನೆ ಮತ್ತು ಮನವನ್ನು ಸ್ವಚ್ಛಗೊಳಿಸುವ ಹಬ್ಬ. ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ, ಹೊಸ ಬಟ್ಟೆ, ಸಿಹಿ ತಿಂಡಿ ಮನೆಯಲ್ಲಿರುವ ದೀಪಗಳು ನಮ್ಮನ್ನೆಲ್ಲರನ್ನು ರಂಜಿಸುವಂಥಹ ಹಬ್ಬ. ಇದರೊಂದಿಗೆ ಪಟಾಕಿ ಸಿಡಿಸುವುದು ಕೂಡ ಬಹುಮಂದಿ ಆಚರಣೆಯ ಭಾಗವಾಗಿದೆ.

ಮಕ್ಕಳ ತಜ್ಞೆಯಾಗಿರುವ ಡಾ. ಎಚ್​.ವಿ. ನಿವೇದಿತಾ ಅವರು ಪಟಾಕಿ ಸಿಡಿಸುವುದರಿಂದಾಗುವ ಅನಾಹುತಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಪಟಾಕಿ ಎಂದರೇನು? ಅದರಲ್ಲಿರುವ ಅಪಾಯಕಾರಿ ಅಂಶಗಳೇನು? ಅದರಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಾಗಾದರೆ ಈ ಪಟಾಕಿಯಲ್ಲಿ ಏನೇನು ಇರುತ್ತವೆ, ಬಹುಮುಖ್ಯವಾದ ಭಾಗವೆಂದರೆ ಅದರಲ್ಲಿ ಫ್ಲ್ಯಾಶ್ ಪುಡಿ ಇದು ಪ್ಲಾಸ್ಟಿಕ್​ ಹಾಗೂ ಕಾರ್ಡ್​ಬೋರ್ಡ್​ನ ಶೇ.70ರಷ್ಟನ್ನು ಬಳಕೆ ಮಾಡಿ ತಯಾರಿಸಲಾಗಿರುತ್ತದೆ. ಇದರಲ್ಲಿ ಸ್ಮೋಕ್​ಲೆಸ್ ಪುಡಿ, ಬ್ಲ್ಯಾಕ್ ಪೌಡರ್ ಇದ್ದು, ಇದೆಲ್ಲವನ್ನು ಒಳಗೊಂಡು ಪಟಾಕಿಯನ್ನು ಸಿದ್ಧಪಡಿಸಲಾಗುತ್ತದೆ.

ಬಂಧೂಕು ಪುಡಿ, ಅದರಲ್ಲಿರುವ ರಾಸಾಯನಿಕಗಳೇನು? ಇಲ್ಲಿದೆ ಮಾಹಿತಿ ಇದರಲ್ಲಿ ಶೇ.70ರಷ್ಟು ಪೊಟ್ಯಾಸಿಯಂ ನೈಟ್ರೇಟ್ ಅಥವಾ ಬೇರಿಯಂ ನೈಟ್ರೇಟ್ ಇರುತ್ತದೆ. ಶೇ.15 ಇದ್ದಿಲಿರುತ್ತದೆ, ಶೇ.10ರಷ್ಟು ಸಲ್ಫರ್ ಇರಲಿದೆ. ಇದರ ಜತೆಗೆ ಅಲ್ಯೂಮಿನಿಯಂ ಪುಡಿ, ಮೆಗ್ನೀಶಿಯಂ ಲೋಹಗಳೆಲ್ಲವೂ ಇರುತ್ತವೆ. ಒಂದು ಬಾರಿ ಬೆಂಕಿಯನ್ನು ಹಚ್ಚಿ ಸಿಡಿಯಲು ಬಿಟ್ಟಾಗ , ಸಿಡಿದ ನಂತರ ಅದು ಒಂದು ಡಸ್ಟ್​ ಪಾರ್ಟಿಕಲ್ ಆಗಿ ಮಾರ್ಪಾಡಾಗುತ್ತದೆ. ಮತ್ತೆ ನಾವು ಅದರಲ್ಲಿ ತಾಮ್ರ, ಸತು, ಸೀಸ, ಮೆಗ್ನೀಸಿಯಂ, ಸೋಡಿಯಂ ಕಾಣಬಹುದು, ಜತೆಗೆ ಸಲ್ಫರ್​ ಕೂಡ ಇರಲಿದೆ ಇವೆಲ್ಲವು ಮಕ್ಕಳು ಜತೆಗೆ ದೊಡ್ಡವರ ಆರೋಗ್ಯದ ಮೇಲೂ ಪರಿಣಾಮ ಬೀರುವಂಥದ್ದಾಗಿವೆ. ಇದರಿಂದ ಉಸಿರಾಟ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಲಿದೆ.

ಪಟಾಕಿ ಹೊಗೆಯನ್ನು ಉಸಿರಾಡುವುದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳೇನು? ಮೊದಲನೆಯದಾಗಿ ಮಕ್ಕಳಲ್ಲಿ ಕಾಣುವಂತಹ ತೊಂದರೆಯೆಂದರೆ ಪೆಟ್ಟಾಗುವಂಥದ್ದು. 15-16 ವರ್ಷದ ಮಕ್ಕಳು ಹೆಚ್ಚಾಗಿ ಪಟಾಕಿಯಿಂದ ಹೆಚ್ಚು ಗಾಯಗಳನ್ನು ಮಾಡಿಕೊಳ್ಳುತ್ತಾರೆ, ಏಕೆಂದರೆ ಅವರ ವಯಸ್ಸೇ ಅಂಥದ್ದು, ಹುಮ್ಮಸ್ಸು ತುಸು ಹೆಚ್ಚಿರುತ್ತದೆ, ಆಸಕ್ತಿ ಇರುತ್ತದೆ ಮತ್ತೆ ಅವರಲ್ಲಿ ಉತ್ಸಾಹ ಹೆಚ್ಚಿರುವುದರಿಂದ ಗಾಯಗಳನ್ನು ಮಾಡಿಕೊಳ್ಳುವವರ ಪ್ರಮಾಣವೂ ಹೆಚ್ಚಿರುತ್ತದೆ.

ಮಕ್ಕಳಿಗೆ ಯಾವ ರೀತಿ ತೊಂದರೆಯಾಗಬಹುದು

ಪಟಾಕಿಯ ಪಾರ್ಟಿಕಲ್ಸ್​ನಿಂದ ಕಣ್ಣಿಗೆ ಗಾಯ ಪಟಾಕಿಯಲ್ಲಿರುವ ಕಣಗಳು ಕಣ್ಣಿಗೆ ಬಿದ್ದ ನಂತರ ಕಣ್ಣಿನಲ್ಲಿ ಉರಿಯಾಗುವಂಥದ್ದ, ಸಣ್ಣ ಪುಟ್ಟ ಸುಟ್ಟ ಗಾಯಗಳಾಗಲಿವೆ, ಬಹಳ ದೊಡ್ಡ ಪಟಾಕಿ ಅಥವಾ ಬಹುಸಂಖ್ಯೆಯಲ್ಲಿ ಪಟಾಕಿಗಳನ್ನು ಸಿಡಿಸಿದಾಗ ದೇಹದಲ್ಲಿ ದೊಡ್ಡ ಮಟ್ಟದ ಸುಟ್ಟ ಗಾಯಗಳೂ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಅದರ ಜತೆಗೆ ತುಂಬಾ ರಾಸಾಯನಿಕಗಳು ಇರುವುದರಿಂದ ಬಹಳ ಮಕ್ಕಳಿಗೆ ತೊಂದರೆಯಾಗುತ್ತದೆ, ಲೋಹಗಳ ಇರುತ್ತದೆ, ತಾಮ್ರದಿಂದ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳಬಹುದು, ಕ್ಯಾಡ್ಮಿಯಂನಿಂದ ರಕ್ತದಲ್ಲಿ ಆಮ್ಲಜನಕ ಕಡಿಮೆಯಾಗಬಹುದು, ಸತುವಿನಿಂದ ಮಕ್ಕಳಿಗೆ ಫ್ಯೂಮ್ ಫೀವರ್  ಬರುತ್ತದೆ ಅದರ ಗುಣಲಕ್ಷಣಗಳು ವೈರಲ್ ಫೀವರ್​ನಂತಿರುತ್ತದೆ.

ಮೈಕೈ ನೋವು, ಜ್ವರ , ಕಾಲು ಗಂಟುಗಳ ನೋವು ಕಾಣಿಸಿಕೊಳ್ಳಬಹುದು. ಸೀಸದಿಂದ ಲೆಡ್ ಪಾಯ್ಸನ್​ ನರಮಂಡಲಕ್ಕೆ ಪೆಟ್ಟು ಬೀಳಬಹುದು, ಹೊಟ್ಟೆಯ ಮೇಲೆ ಪರಿಣಾಮ ಬೀರಬಹುದು, ಮಕ್ಕಳಲ್ಲಿ ಆಯಾಸ ಕಾಣಿಸಿಕೊಳ್ಳಬಹುದು. ಮಕ್ಕಳು ಈ ಮೊದಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಪಟಾಕಿಯ ಹೊಗೆಯಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಅಸ್ತಮಾ ಅಟ್ಯಾಕ್ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅಲರ್ಜಿಕ್ ಬ್ರಾಂಕೈಟಿಸ್ , ಸೈನಸೈಟಿಸ್, ಮೂಗಿನ ಅಲರ್ಜಿ, ನ್ಯುಮೋನಿಯಾದಂತಹ ಸಮಸ್ಯೆಗಳು ಕಾಡಬಹುದು.

ಈ ಸಮಸ್ಯೆಗಳು ಹೇಗೆ ಬರುತ್ತವೆ: ಪಟಾಕಿಯ ಹೊಗೆ ಅಥವಾ ಪರ್ಟಿಕ್ಯೂಲೇಟ್ ಮ್ಯಾಟರ್ ಗಾತ್ರ​ 10PMಗಿಂತ ಚಿಕ್ಕದಿರುತ್ತದೆ, ಇದು ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಶ್ವಾಸಕೋಶವನ್ನು ತಲುಪುತ್ತದೆ. ಶ್ವಾಸನಾಳಗಳು ಊದಿಕೊಳ್ಳುವುದರಿಂದ ಉಸಿರಾಡಲು ಕಷ್ಟವಾಗುತ್ತದೆ.

ಮಕ್ಕಳಿಗೆ ಅಸ್ತಮಾ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ, ಒಂದೊಮ್ಮೆ ಅಸ್ತಮಾ ಇಲ್ಲದಿದ್ದರೂ ಕೆಮ್ಮು ಸೇರಿದಂತೆ ಸೆಕೆಂಡರಿ ಇನ್​ಫೆಕ್ಷನ್​ಗಳು ಆಗಬಹುದು.

ಶಬ್ದ ಮಾಲಿನ್ಯ ಶಬ್ದ ಮಾಲಿನ್ಯದಿಂದ ಒಂದು ವರ್ಷಕ್ಕಿಂತ ಚಿಕ್ಕ ಮಗುವು ಹೆದರುತ್ತದೆ, ಪದೇ ಪದೇ ಅದರ ಕಿವಿಯು ಈ ಶಬ್ದಕ್ಕೆ ಒಡ್ಡಿಕೊಳ್ಳುತ್ತಿದ್ದರೆ ಶಾಶ್ವತವಾಗಿ ಶ್ರವಣಶಕ್ತಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಮಕ್ಕಳು 30-40 ಡೆಸಿಬಲ್ಸ್​ನಷ್ಟು ಫ್ರೀಕ್ವೆನ್ಸಿಯನ್ನು ತಡೆದುಕೊಳ್ಳಬಲ್ಲವು ಆದರೆ ಪಟಾಕಿಗಳು 150-180 ಡೆಸಿಬಲ್ಸ್​ಗಳಿರಲಿದ್ದು, ಶಾಶ್ವತವಾಗಿ ಶ್ರವಣಶಕ್ತಿಯನ್ನು ಕಸಿದುಕೊಳ್ಳಬಹುದು.

ಪಟಾಕಿ ಸಿಡಿದ ನಂತರ ಕಲರ್​ ಬರಲಿಕ್ಕಾಗಿ ರೇಡಿಯೋ ಆಕ್ಟೀವ್ ಎಲಿಮೆಂಟ್ಸ್​ಗಳನ್ನು ಬಳಕೆ ಮಾಡುತ್ತಾರೆ ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚು ಮಾಡುತ್ತದೆ. ಇನ್ನು ಗರ್ಭಿಣಿಯರು ಪಟಾಕಿ ಶಬ್ದವನ್ನು ಹೆಚ್ಚು ಕೇಳಿದರೆ ಮಿಸ್​ಕ್ಯಾರಿಯೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಟಾಕ್ಸಿಕ್ ಫ್ಯೂಮ್ ಹಾಗೂ ಮೆಟಲ್ಸ್​ಗಳಿಂದ ಉಸಿರಾಟ ತೊಂದರೆ, ರಕ್ತದಲ್ಲಿ ಆಮ್ಲಜನಕದ ಕೊರತೆಯುಂಟಾಗು ಮಕ್ಕಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳಿರುವಾಗ ಏನೇನು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಮಕ್ಕಳಿರುವ ಮನೆಯಲ್ಲಿ ಪಟಾಕಿಯನ್ನೇ ಹೊಡೆಯಬಾರದು ಎಂದರೆ ಹೇಗಾಗುತ್ತೆ ಹೇಳಿ, ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಮಕ್ಕಳ ಖುಷಿಗಾಗಿ ಪಟಾಕಿಯನ್ನು ಖರೀದಿ ಮಾಡಬೇಕಾಗುತ್ತದೆ. ಆದರೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ.

-ಪಟಾಕಿಯನ್ನು ಮನೆಯೊಳಗೆ ತಂದಿಡುವುದು, ಮನೆಯೊಳಗೆ ಹೊಡೆಯುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು.

-ಕೊರೊನಾ ಬಂದು ಹೋದ ಮೇಲೆ ಮನೆಯಲ್ಲಿ ಸ್ಯಾನಿಟೈಸರ್ ಬಳಕೆ ಹೆಚ್ಚಾಗಿದೆ, ಪಟಾಕಿ ಹಚ್ಚುವಾಗ ಯಾವುದೇ ಕಾರಣಕ್ಕೂ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದಾಗಲಿ ಅಥವಾ ಸ್ಯಾನಿಟೈಸರ್ ಇರುವ ಜಾಗದಲ್ಲಿ ಪಟಾಕಿ ಹಚ್ಚುವುದಾಗಲೀ ಮಾಡಬೇಡಿ.

-ಮನೆಯ ಹೊರಗಡೆ, ಫೀಲ್ಡ್​ಗಳಲ್ಲಿ ಪಟಾಕಿ ಹಚ್ಚುವುದು ಉತ್ತಮ

-ಪಟಾಕಿ ಹಚ್ಚುವ ಜಾಗದಲ್ಲಿ ಬೆಂಕಿ ಹೊತ್ತಿಕೊಳ್ಳುವಂತಹ ಯಾವುದೇ ವಸ್ತುಗಳು ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ

-ಪಟಾಕಿ ಹಚ್ಚುವಾಗ ಕಣ್ಣಿಗೆ ಕನ್ನಡಕವನ್ನು ಧರಿಸಿ, ಕಾಟನ್ ಬಟ್ಟೆಯನ್ನು ಧರಿಸಿ, ಸಡಿಲವಾಗಿರುವ ಅಥವಾ ಯಾವುದೇ ವೇಲ್​ಗಳನ್ನು ಧರಿಸುವುದನ್ನು ಸಾಧ್ಯವಾದಷ್ಟು ಅವಾಯ್ಡ್​ ಮಾಡಿ.

-ಪಟಾಕಿ ಹೊಡೆಯುವ ಸಮಯದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ನಿಮ್ಮ ಬಳಿ ಇರಲಿ, ಬಕೇಟ್​ ಅಲ್ಲಿ ನೀರು ಇಟ್ಟುಕೊಳ್ಳಬೇಕು, ತುಂಬಾ ಶಬ್ದ ಬರುವ ಪಟಾಕಿಗಳಿದ್ದಾಗ, ಕಿವಿಯಲ್ಲಿ ಹತ್ತಿಯನ್ನು ಇರಿಸಿಕೊಳ್ಳಿ.

-ಪಟಾಕಿಯನ್ನು ತಂದ ಬಳಿಕ ಮಕ್ಕಳಿಗೆ ಇಷ್ಟವಿಲ್ಲದಿದ್ದರೆ ದೊಡ್ಡವರು ಒತ್ತಾಯ ಮಾಡಬೇಡಿ.

ಪಟಾಕಿಯಿಂದ ತೊಂದರೆ ಆದರೆ ಏನು ಮಾಡಬೇಕು? -ಕಣ್ಣಿಗೆ ಪಟಾಕಿಯ ಕಣಗಳು ಬಿದ್ದರೆ ತಕ್ಷಣ ಶುದ್ಧವಾದ ನೀರಿನಲ್ಲಿ ತೊಳೆಯಬೇಕು

-ಸಣ್ಣ ಪುಟ್ಟ ವಸ್ತು ತಾಗಿ ಗುಳ್ಳೆಗಳು ಆದರೆ ಆದ ಜಾಗವನ್ನು ಐದು ನಿಮಿಷಗಳ ಕಾಲ ತಣ್ಣೀರಿನಲ್ಲಿ ಇರಿಸಬೇಕು. ಗಾಯ ಗಂಭೀರವಾಗಿದ್ದರೆ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ.

-ಯಾವುದೇ ಕಾರಣಕ್ಕೂ ಗಾಯವನ್ನು ಬಟ್ಟೆಯಿಂದ ಒರೆಸಬೇಡಿ.

-ಮಕ್ಕಳು ತೊಟ್ಟಿರುವ ಬಟ್ಟೆ ಅಥವಾ ಏನಾದರೂ ಆಭರಣಗಳಿದ್ದರೆ ತಕ್ಷಣವೇ ತೆಗೆದು, ಬಳಿಕ ಗಾಯವನ್ನು ನೀರಿನಿಂದ ಸ್ವಚ್ಛಗೊಳಿಸಬೇಕು.

– ಒಂದೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಗಾಯಗಳಾಗಿದ್ದರೆ, ಯಾವುದೇ ಕಾರಣಕ್ಕೂ ನೆಗ್ಲೆಕ್ಟ್​ ಮಾಡಬೇಡಿ, ತಕ್ಷಣವೇ ವೈದ್ಯರ ಬಳಿ ತೆರಳಿ, ಸೂಕ್ತ ಚಿಕಿತ್ಸೆ ಪಡೆಯಿರಿ.

ಮಾಹಿತಿ: ಡಾ. ನಿವೇದಿತಾ ಎಚ್​.ವಿ, ಮಕ್ಕಳ ತಜ್ಞರು

Published On - 11:01 am, Sun, 23 October 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್