ದೀಪಾವಳಿ ಅಮವಾಸ್ಯೆಯಂದೇ ಸೂರ್ಯಗ್ರಹಣ: ಪೂಜೆ ಯಾವಾಗ ಮಾಡ್ಬೇಕು? ಏನೆಲ್ಲಾ ಮಾಡ್ಬೇಕು? ಇಲ್ಲಿದೆ ನೋಡಿ

ದೀಪಾವಳಿ ಅಮವಾಸ್ಯೆದಿಂದಲೇ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಗ್ರಹಣದ ಮಧ್ಯೆ ದೀಪಾವಳಿ ಹಬ್ಬ ಅಚರಣೆ ಹೇಗೆ? ಯಾವಾಗ ಪೂಜೆ ಮಾಡ್ಬೇಕು? ಸೂಕ್ತ ಸಮಯ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ.

ದೀಪಾವಳಿ ಅಮವಾಸ್ಯೆಯಂದೇ ಸೂರ್ಯಗ್ರಹಣ: ಪೂಜೆ ಯಾವಾಗ ಮಾಡ್ಬೇಕು? ಏನೆಲ್ಲಾ ಮಾಡ್ಬೇಕು? ಇಲ್ಲಿದೆ ನೋಡಿ
Deepavali And Solar Eclipse
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 23, 2022 | 6:11 PM

ದೀಪಾವಳಿ ಹೊತ್ತಲ್ಲೇ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಈ ವರ್ಷದ ಕೊನೆಯ ಸೂರ್ಯ ಗ್ರಹಣ ಅ.25ರಂದು ಸಂಭವಿಸಲಿದ್ದು, ಇಡೀ ಜಗತ್ತೇ ಅತ್ಯಂತ ಕುತೂಹಲದಿಂದ ಕೌತುಕವನ್ನ ಕಣ್ತುಂಬಿಕೊಳ್ಳಲು  ಎದುರು ನೋಡ್ತಿದೆ.

ಇನ್ನು ದೀಪಾವಳಿ ಅಮವಾಸ್ಯೆ ದಿನದಂದೇ ಸೂರ್ಯಗ್ರಹಣ ಸಂಭವಿಸಿರುವುದರಿಂದ ಪೂಜೆ-ಪುನಸ್ಕಾರಗಳಿಗೆ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನು ಕೆಲವರು ಜೋತಿಷ್ಯರ ಮೊರೆ ಹೋಗಿದ್ದಾರೆ. ಹಾಗಾದ್ರೆ, ಲಕ್ಷ್ಮೀ ಪೂಜೆಯನ್ನು ಯಾವ ಮಾಡಬೇಕು? ಹೇಗೇ ಮಾಡ್ಬೇಕು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

Solar Eclipse 2022 ಕರ್ನಾಟಕದ ಬೇರೆ-ಬೇರೆ ಭಾಗಗಳಲ್ಲಿ ಕಾಣುವ ಪಾರ್ಶ್ವ ಸೂರ್ಯ ಗ್ರಹಣದ ವಿವರ ಇಲ್ಲಿದೆ

ಸೂರ್ಯ ಗ್ರಹಣ ಸಮಯ..!

* ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15

* ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18

* ಗ್ರಹಣ ಮೋಕ್ಷಕಾಲ – ಸಂಜೆ 6:30

ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ . ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.

ಗ್ರಹಣ. ಮತ್ತು ದೀಪಾವಳಿ ಹಬ್ಬ ಅಚರಣೆ

ಗ್ರಹಣವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಗ್ರಹಣದ ಮೋಕ್ಷವು ಸೂರ್ಯಾಸ್ತದ ನಂತರ ಅಗುವುದರಿಂದ ಗ್ರಹಣದ ಮೋಕ್ಷವು ಕಾಣಿಸುವುದಿಲ್ಲ.

ಭೋಜನ ವಿಚಾರ

ಬಾಲಕರು, ವೃದ್ಧರು, ರೋಗಿಗಳು,ಅಶಕ್ತರು,ಗರ್ಭಿಣಿಯರು, ಬಾಣಂತಿಯರು ದಿನಾಂಕ 25-10-2022 ಮಂಗಳವಾರ ಹಗಲು 12:00 ಘಂಟೆಯವರೆಗೆ ಆಹಾರ ಸೇವಿಸಬಹುದು. ಗ್ರಹಣಾಚರಣೆ ಮಾಡುವ ಎಲ್ಲರೂ ಗ್ರಹಣ ಸ್ಪರ್ಶ ಕಾಲದಲ್ಲೂ ಹಾಗೂ ಮೋಕ್ಷವಾದ ನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು.

ತರ್ಪಣ ವಿಚಾರ

ದಿನಾಂಕ:- 25-10-2022 ಮಂಗಳವಾರದಂದು ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣದ ಮಧ್ಯ ಕಾಲದ ವರೆಗು ತರ್ಪಣಾದಿಗಳನ್ನ ನಡೆಸ ಬಹುದು. ದಿನಾಂಕ :- 24-10-2022 ಸೋಮವಾರ ನರಕ ಚರ್ತುದಶಿ ಆಚರಣೆ ಮಡಲು ಬರುವುದಿಲ್ಲ. ನರಕ ಚರ್ತುದಶಿ ಆಚರಣೆ ಮಾಡುವವರು ದಿನಾಂಕ 25-10-2022 ಮಂಗಳವಾರ ಗ್ರಹಣ ಮುಗಿದ ನಂತರ ಸಂಜೆ 6:45 ರ ನಂತರ ಆಚರಿಸತಕ್ಕದ್ದು. ಅಮಾವಾಸ್ಯೆ ಯಲ್ಲಿ ಲಕ್ಷ್ಮೀ ಪೂಜೆಯನ್ನ ಮಾಡುವವರು ಸಹ 25 ನೇ ತಾರೀಖಿನಂದು ಸಂಜೆ 6:45 ರ ನಂತರ ಮಾಡತಕ್ಕದ್ದು.

( ವಿಷಯ ಸೂಚನೆ:- 24 ನೇ ತಾರೀಖಿನಂದು ಧನ ಲಕ್ಷ್ಮೀ ಪೂಜೆ ಮಾಡಲಿಚ್ವಿಸುವವರು ಸಂಜೆ 4:30ರ ನಂತರ ಪೂಜೆ ಪ್ರಾರಭಿಸಿ ರಾತ್ರಿ 10:30 ಬಳಿಕ ಅಥವ ಬೇಳಿಗ್ಗೆ 7:30 ರೊಳಗಾಗಿ ವಿಸರ್ಜಿಸಬೇಕು. )

ಕೇದಾರೇಶ್ವರ ವ್ರತ ಮಾಡುವವರು ದಿನಾಂಕ 24-10-2022 ಸೋಮವಾರ ವ್ರತ ಮಾಡತಕ್ಕದ್ದು. ( ವಿಷಯ ಸೂಚನೆ:- ಅಮಾವಾಸ್ಯೆ ಯಲ್ಲಿ ಕೇದಾರೇಶ್ವರ ವ್ರತಮಾಡಿ ತಾಯಿ ಗೌರಿಗೆ ಉಡಿ [ನೊಂಬುವರು] ತುಂಬುವವರು ಈ ದಿನ ಸಂಜೆ 4:31 P.M. ನಂತರ ರಾತ್ರಿ 10:30 ರ ತನಕ ಮಾಡಬಹುದು.)

* ಕೇದಾರೇಶ್ವರ ಗೌರಿಯನ್ನ 24-10-2022 ಸೋಮವಾರ ಸಂಧ್ಯಾ ಕಾಲದಲ್ಲಿ ವಿಸರ್ಜಿಸಬೇಕು. ದಿನಾಂಕ:- 26-10-2022 ಬುಧವಾರ ಗೋ ಪೂಜೆ ಮಾಡುವವರು ಬೆಳಿಗ್ಗೆ 7:30 ರ ಒಳಗಾಗಿ ಅಥವ ಹಗಲು 9:20 A.M ರಿಂದ 12:5 P.M. ವರೆಗೆ ಗೋ ಪಾದ ಪೂಜೆ ಮಾಡಬಹುದು.

* ರಾಹುಕಾಲ 12:07 P.M. ರಿಂದ 1:35 P.M ವರೆಗೆ ಯಮಗಂಡ ಕಾಲ 7:43 A.M ರಿಂದ 9:11 A.M ವರೆಗೆ ಗೋವುಗಳು ಸಂಜೆ ಮನೆಗೆ ಬರುವ ಸಮಯ ಸಂಜೆ ( (ಕೊಟ್ಟಿಗೆ ಅಥವಾ ಹಟ್ಟಿಗೆ ) 5:30P.M ರಿಂದ 7:00 P.M ವರೆಗೆ ಶುಭಸಮಯ ಇರುತ್ತದೆ.

*ಗ್ರಹಣ ಶಾಂತಿ ವಿಚಾರ:- ಚಿತ್ತ,ಸ್ವಾತಿ,ನಕ್ಷತ್ರ ಮತ್ತು ಕನ್ಯಾ,ತುಲಾ,ಮೇಷ,ಮೀನ,ಸಿಂಹ, ರಾಶಿಯವರಿಗೆ ಗ್ರಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ದೋಷಕಾರಿ ಯಾಗುತ್ತದೆ.

ಈ ದೋಷ ಪರಿಹಾರಕ್ಕೆ ಹೆಸರುಕಾಳು, ಅವರೆಕಾಳು.ಗೋದಿ. ತೊಗರಿಕಾಳು. ಧಾನ್ಯಗಳ ಮೇಲೆ ನಿಮ್ಮ ಕೈಲಾದಷ್ಟು ದಕ್ಷಿಣೆಯನ್ನುಇಟ್ಟು ಕೆಳಗೆ ಕೊಟ್ಟಿರುವ ಈ ಶ್ಲೋಕಗಳನ್ನು ಹೇಳಿಕೊಂಡು ಒಂದು ಕಾಗದದ ಮೇಲೆ ಬರೆದು ಧಾನ್ಯದ ಮೇಲೆ ಇಟ್ಟು ಪೂಜಿಸಿ ಬ್ರಾಹ್ಮಣ ಯತಿಗಳಿಗೆ ಅಥವಾ ಹತ್ತಿರವಿರುವ ದೇವಾಲಯಗಳ ಅರ್ಚಕರಿಗೆ ಕೊಡುವುದರಿಂದ ದೋಷ ಪರಿಹಾರ ಆಗುತ್ತದೆ.

ಶ್ಲೋ– ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |. (ಅಥವ ನವಗ್ರಹ ಹವನ ಮಾಡಿಸಿಕೊಳ್ಳತಕ್ಕದ್ದು)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ