Solar Eclipse 2022 ಕರ್ನಾಟಕದ ಬೇರೆ-ಬೇರೆ ಭಾಗಗಳಲ್ಲಿ ಕಾಣುವ ಪಾರ್ಶ್ವ ಸೂರ್ಯ ಗ್ರಹಣದ ವಿವರ ಇಲ್ಲಿದೆ
ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಹಾಗಾದ್ರೆ, ಕರ್ನಾಟಕದ ಬೇರೆ-ಬೇರೆ ಜಿ್ಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಗೋಚರಿಸಲಿದೆ? ಎಷ್ಟೊತ್ತಿಗೆ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು: ಎಲ್ಲೆಡೆ ದೀಪಾವಳಿ (Deepavali) ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ದೀಪಾವಳಿ ಅಮಾವಾಸ್ಯೆಯ ದಿನ ಅಕ್ಟೋಬರ್ 25ರಂದೇ ಸೂರ್ಯ ಗ್ರಹಣ ಸಂಭವಿಸಲಿದೆ. ಮಂಗಳವಾರ ಸಂಜೆ ಭಾಗಶಃ ಸೂರ್ಯಗ್ರಹಣ (Solar Eclipse) ಗೋಚರವಾಗಲಿದೆ. 3 ವರ್ಷಗಳ ಬಳಿಕ ಗೋಚರವಾಗುವ ಈ ಪಾರ್ಶ್ವ ಸೂರ್ಯಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ.
Solar Eclipse 2022: ಸೂರ್ಯ ಗ್ರಹಣದಂದು ಗರ್ಭಿಣಿಯರು ಏನು ಮಾಡಬೇಕು? ಏನು ಮಾಡಬಾರದು?
ಗ್ರಹಣದ ಗರಿಷ್ಠ ಗೋಚರತೆಯು ರಷ್ಯಾ ಮತ್ತು ಖಜಕಿಸ್ತಾನ್‌ನಲ್ಲಿ ಶೇ 80 ರಷ್ಟು ಇರುತ್ತದೆ. ಆದ್ದರಿಂದ, ಗ್ರಹಣವನ್ನು ವೀಕ್ಷಿಸಲು ಜನರಿಗೆ ನೆರವಾಗುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶೇಷ ಸ್ಕ್ರೀನಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಸ್ಕೋಪ್ (ಔಟ್ರೀಚ್) ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಮ್ ಹೇಳಿದ್ದಾರೆ. ಕೆಲವು ಖಗೋಳ ಭೌತಶಾಸ್ತ್ರಜ್ಞರ ಪ್ರಕಾರ, ಶೇ 55 ರಷ್ಟು ಗ್ರಹಣವು ಲಡಾಖ್‌ನಲ್ಲಿ ಸಂಜೆ 4.30 ರಿಂದ ಗೋಚರಿಸುತ್ತದೆ. ಈ ಸೂರ್ಯ ಗ್ರಹಣವು ಅಕ್ಟೋಬರ್ 25ರಂದು ಸಂಜೆ 4.29ಕ್ಕೆ ಪ್ರಾರಂಭವಾಗಿ, ಸಂಜೆ 5.42ಕ್ಕೆ ಕೊನೆಗೊಳ್ಳುತ್ತದೆ. ಇನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಕಾಣುವ ಪಾರ್ಶ್ವ ಸೂರ್ಯ ಗ್ರಹಣದ ವಿವರ ಈ ಕೆಳಗಿನಂತಿದೆ.
ಸೂರ್ಯ ಗ್ರಹಣ ಸಮಯ..!
ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15 ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18 ಗ್ರಹಣ ಮೋಕ್ಷಕಾಲ – ಸಂಜೆ 6:30
* ಬೆಂಗಳೂರು- ಶೇ.10.09ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದ್ದು, ಸಂಜೆ 5:12 ಗಂಟೆಗೆ ಗ್ರಹಣ ಪ್ರಾರಂಭವಾಗಲಿದೆ.
* ಮೈಸೂರು- 9.5%- ಸಂಜೆ 5:13 ಗಂಟೆಗೆ ಪ್ರಾರಂಭ
* ಧಾರವಾಡ- 16.09%- ಸಂಜೆ 5:01 ಗಂಟೆಗೆ ಪ್ರಾರಂಭ
* ರಾಯಚೂರು- 16.67%- ಸಂಜೆ 5:01 ಗಂಟೆಗೆ ಪ್ರಾರಂಭ
* ಬಳ್ಳಾರಿ- 14.64%- ಸಂಜೆ 5:04 ಗಂಟೆಗೆ ಪ್ರಾರಂಭ
* ಬಾಗಲಕೋಟೆ- 17.33%- ಸಂಜೆ 5:00 ಗಂಟೆಗೆ ಪ್ರಾರಂಭ
* ಮಂಗಳೂರು- 10.91%- ಸಂಜೆ 5:10 ಗಂಟೆಗೆ ಪ್ರಾರಂಭ
Published On - 4:23 pm, Sun, 23 October 22