AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Earphones Side Effects: ಇಯರ್ ಫೋನ್ ಬಳಕೆಯಿಂದ ಎದುರಾಗುವ ಸಮಸ್ಯೆಗಳು

ಅತಿಯಾಗಿ ಇಯರ್ ಫೋನ್ ಬಳಸುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಮುಂದೆ ಶ್ರವಣ ಸಮಸ್ಯೆ ಜೊತೆಗೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ತಜ್ಞರು ಹೇಳುತ್ತಾರೆ.

Earphones Side Effects: ಇಯರ್ ಫೋನ್ ಬಳಕೆಯಿಂದ ಎದುರಾಗುವ ಸಮಸ್ಯೆಗಳು
ಅತಿಯಾದ ಇಯರ್ ಫೋನ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳು
TV9 Web
| Updated By: Rakesh Nayak Manchi|

Updated on: Oct 24, 2022 | 6:10 AM

Share

ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ಮೊಬೈಲ್ ವೈಶಿಷ್ಟ್ಯಗಳಿಗೆ ಮಾರುಹೋಗಿರುವ ಹಿನ್ನೆಲೆ ಅನೇಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಸೌಂಡ್ ಬಂದರೆ ಬೇರೆಯವರಿಗೆ ತೊಂದರೆ ಆಗುತ್ತದೆ ಎಂದು ಭಾವಿಸಿ ಹೆಚ್ಚಿನವರು ಹಾಡುಗಳನ್ನು ಆಸ್ವಾದಿಸಲು ಇಯರ್ ಫೋನ್ ಬಳಸುತ್ತಾರೆ. ಪ್ರಯಾಣ ಮಾಡುವಾಗ ಅಥವಾ ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಕೇಳಲು ಇಯರ್ ಫೋನ್​ ಬಳಕೆ ಮಾಡುತ್ತಾರೆ. ಈ ಸಾಧನವನ್ನು ಸೀಮಿತವಾಗಿ ಬಳಸಿದರೆ ತೊಂದರೆ ಇಲ್ಲ. ಅದರೆ ಅತಿಯಾಗಿ ಬಳಸುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಮುಂದೆ ಶ್ರವಣ ಸಮಸ್ಯೆ ಜೊತೆಗೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ತಜ್ಞರ ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯೂ ಎಚ್ಚರಿಕೆ ನೀಡಿದೆ.

ಹೆಚ್ಚಿನ ವಾಲ್ಯೂಮ್ ಇರುವ ಹಾಡುಗಳನ್ನು ಕೇಳುವುದರಿಂದ ಶ್ರವಣ ದೋಷದ ಅಪಾಯವಿದೆ. ಇಯರ್ ಫೋನ್, ಇಯರ್ ಬಡ್, ಏರ್ ಪ್ಯಾಡ್, ಬ್ಲೂಟೂತ್ ಹಾಕಿಕೊಂಡು ಮೊಬೈಲ್​ನಲ್ಲಿ ಮಾತನಾಡುವುದು, ಜೋರಾಗಿ ಸಂಗೀತ ಕೇಳುವುದು ಶ್ರವಣದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವುಗಳನ್ನು ದಿನವಿಡೀ ಬಳಸಿದರೆ ಕಿವಿ ಸೋಂಕಿನ ಅಪಾಯವೂ ಎದುರಾಗಲಿದೆ. ಹಾಗಿದ್ದರೆ ಇಯರ್ ಫೋನ್ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಕಿವುಡುತನ: ಇಯರ್‌ಫೋನ್‌ಗಳ ಅತಿಯಾದ ಬಳಕೆ ಕಿವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇವುಗಳ ಅತಿಯಾದ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು. ಕಿವಿಯಲ್ಲಿ ನೋವನ್ನು ಉಂಟುಮಾಡಬಹುದು. ಕ್ರಮೇಣ ಈ ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ತಲೆಸುತ್ತು ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಏಕಾಗ್ರತೆಯ ಕೊರತೆ: ಇಯರ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಯ ಕೊರತೆಗೆ ಕಾರಣವಾಗುತ್ತದೆ. ಇತರರು ಬಳಸಿದ ಇಯರ್‌ಫೋನ್‌ಗಳನ್ನು ಬಳಸುವುದು ಸೋಂಕುಗಳಿಗೆ ಕಾರಣವಾಗಬಹುದು. ಇದು ಕಿವಿಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಹಾಗಿದ್ದರೆ ಇಯರ್​ಫೋನ್​ನ ಬಳಕೆ ಹೇಗೆ?

ಹೆಡ್‌ಫೋನ್‌ ಬಳಕೆ: ಬೇರೆಯವರ ಇಯರ್ ಫೋನ್ ಬದಲು ಹೆಡ್ ಫೋನ್ ಬಳಸಿದರೆ ಎದುರಾಗಬಹುದಾದ ದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು. ಹೆಡ್‌ಫೋನ್‌ಗಳನ್ನು ಧರಿಸುವುದರಿಂದ ಕಿವಿಯೋಲೆ ಮತ್ತು ಧ್ವನಿಯ ನಡುವೆ ಅಂತರವಿರುತ್ತದೆ. ಇದರಿಂದ ಕಿವಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಸೀಮಿತ ಧ್ವನಿ: ಇಯರ್‌ಫೋನ್‌ಗಳನ್ನು ಬಳಸುವಾಗ ಧ್ವನಿ ಕಡಿಮೆ ಇಡಬೇಕು. ವಾಲ್ಯೂಮ್ 60 ಡೆಸಿಬಲ್‌ಗಳಿಗಿಂತ ಕಡಿಮೆಯಿದೆ ಎಂದು ಖಚಿತಪಡಿಸಿಕೊಳ್ಳಿ. 85 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಫೋನ್ ಸೆಟ್ಟಿಂಗ್‌ಗಳಲ್ಲಿ ವಾಲ್ಯೂಮ್ ಅನ್ನು ಶೇಕಡಾ 50 ರಷ್ಟು ಇರಿಸಿ. ನೀವು ಧ್ವನಿಯನ್ನು ಹೆಚ್ಚಿಸಲು ಪ್ರಯತ್ನಿಸಿದರೆ ನಿಮಗೆ ಎಚ್ಚರಿಕೆ ಬರುತ್ತದೆ. ಆ ಸಂದರ್ಭದಲ್ಲಿ ನಾವು ನಮ್ಮ ಧ್ವನಿಯನ್ನು ಮಿತಿಯಲ್ಲಿಟ್ಟುಕೊಂಡು ಹಾಡುಗಳನ್ನು ಕೇಳಬಹುದು.

ಮತ್ತಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್