AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಡಿಎಸ್​ ಸಲ್ಲಿಕೆ ಗಡುವು ನವೆಂಬರ್ 30ಕ್ಕೆ ವಿಸ್ತರಿಸಿದ ಸಿಬಿಡಿಟಿ

‘ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸಲು ಇರುವ ತೊಂದರೆಗಳನ್ನು ಗಮನಿಸಿ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ‘ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸಲು ಇರುವ ತೊಂದರೆಗಳನ್ನು ಗಮನಿಸಲಾಗಿದೆ. ಹೀಗಾಗಿ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಅವಧಿಯ ವೇತನಕ್ಕೆ ಸಂಬಂಧಿಸಿರದ ಟಿಡಿಎಸ್ ವಿವರ ಸಲ್ಲಿಕೆಯ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಟಿಡಿಎಸ್​ ಸಲ್ಲಿಕೆ ಗಡುವು ನವೆಂಬರ್ 30ಕ್ಕೆ ವಿಸ್ತರಿಸಿದ ಸಿಬಿಡಿಟಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 10, 2026 | 2:44 PM

Share

ನವದೆಹಲಿ: ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ವೇತನಕ್ಕೆ ಸಂಬಂಧಿಸಿರದ ತ್ರೈಮಾಸಿಕ ಟಿಡಿಎಸ್ (TDS) ವಿವರ ಸಲ್ಲಿಕೆಯ ಗಡುವನ್ನು ನವೆಂಬರ್ 30ರ ವರೆಗೆ ವಿಸ್ತರಿಸಿದೆ. ವೇತನಕ್ಕೆ ಸಂಬಂಧಿಸಿರದ ತ್ರೈಮಾಸಿಕ ಟಿಡಿಎಸ್ ವಿವರವನ್ನು ಸಲ್ಲಿಸಲು ‘ಫಾರ್ಮ್ 26ಕ್ಯೂ’ (Form 26Q) ಬಳಸಲಾಗುತ್ತಿದೆ. ‘ಫಾರ್ಮ್ 26ಕ್ಯೂ’ನಲ್ಲಿ ವಿವರ ಸಲ್ಲಿಸಲು ಇರುವ ಕಷ್ಟಗಳನ್ನು ಪರಿಗಣಿಸಿ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.

‘ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸಲು ಇರುವ ತೊಂದರೆಗಳನ್ನು ಗಮನಿಸಲಾಗಿದೆ. ಹೀಗಾಗಿ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಅವಧಿಯ ವೇತನಕ್ಕೆ ಸಂಬಂಧಿಸಿರದ ಟಿಡಿಎಸ್ ವಿವರ ಸಲ್ಲಿಕೆಯ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ITR: ಉದ್ದಿಮೆಗಳ ಐಟಿಆರ್ ಸಲ್ಲಿಕೆ ಗಡುವು 7 ದಿನ ವಿಸ್ತರಣೆ

ತ್ರೈಮಾಸಿಕ ಅವಧಿಯಲ್ಲಿ ಪಾವತಿಸಿದ ಒಟ್ಟು ಮೊತ್ತ ಮತ್ತು ಅದಕ್ಕೆ ಕಡಿತವಾದ ತೆರಿಗೆ ವಿವರ ಫಾರ್ಮ್ 26ಕ್ಯೂನಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಸೆಕ್ಯುರಿಟೀಸ್ ಮೇಲಿನ ಬಡ್ಡಿ, ಲಾಭಾಂಶ, ಲಾಟರಿ ಮತ್ತು ಕ್ರಾಸ್‌ವರ್ಡ್ ಪಜಲ್‌ಗಳ ಗೆಲುವಿನಿಂದ ದೊರೆತ ಮೊತ್ತ, ಬಾಡಿಗೆ, ಸೆಕ್ಯುರಿಟೀಸ್​ ಮೇಲಿನ ಬಡ್ಡಿಯನ್ನು ಹೊರತುಪಡಿಸಿದ ಬಡ್ಡಿ, ವೃತ್ತಿಪರ ಅಥವಾ ತಾಂತ್ರಿಕ ಸೇವೆಗಳಿಗೆ ಶುಲ್ಕವನ್ನು ಒಳಗೊಂಡಿರುತ್ತದೆ.

ಸಮಸ್ಯೆ ಸಿಬಿಡಿಟಿ ಗಮನಕ್ಕೆ ಬಂದಿದೆ

‘ತೆರಿಗೆ ಪಾವತಿಸುವವರು ಇತ್ತೀಚೆಗೆ ಚಲನ್ ಹೊಂದಾಣಿಕೆಯಾಗದಿರುವುದು, ಚಲನ್ ದೃಢೀಕರಣ ವೈಫಲ್ಯ, ಅಟೊ ಅಜಸ್ಟ್​​ಮೆಂಟ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಸಿಬಿಡಿಟಿಗೆ ಇದರ ಅರಿವಾಗಿದೆ. ಹೀಗಾಗಿ ಗಡುವನ್ನು ವಿಸ್ತರಿಸಲಾಗುತ್ತಿದೆ ಎಂದು ಎಎಂಆರ್​ಜಿ, ಕಾರ್ಪೊರೇಟ್ ಹಾಗೂ ಅಂತಾರಾಷ್ಟ್ರೀಯ ತೆರಿಗೆಗಳ ನಿರ್ದೇಶಕ ಓಂ ರಾಜಪುರೋಹಿತ್ ತಿಳಿಸಿದ್ದಾರೆ.

ಐಟಿಆರ್ ಗಡುವು ವಿಸ್ತರಿಸಿದ್ದ ಸಿಬಿಡಿಟಿ

ಉದ್ದಿಮೆಗಳ ಆದಾಯ ತೆರಿಗೆ ವಿವರ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಇತ್ತೀಚೆಗಷ್ಟೇ 7 ದಿನಗಳ ಕಾಲ ವಿಸ್ತರಣೆ ಮಾಡಿತ್ತು. ಉದ್ದಿಮೆಗಳ ಐಟಿಆರ್ ಸಲ್ಲಿಕೆಗೆ ಈ ಹಿಂದೆ ಅಕ್ಟೋಬರ್ 30ರ ಗಡುವು ವಿಧಿಸಲಾಗಿತ್ತು. ಇದನ್ನು ಪರಿಷ್ಕರಿಸಿದ್ದ ಸಿಬಿಡಿಟಿ ನವೆಂಬರ್ 7ರ ವರೆಗೆ ಗಡುವನ್ನು ವಿಸ್ತರಣೆ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Fri, 28 October 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್