RBI MPC meet: ಬೆಲೆ ಏರಿಕೆ, ಹಣದುಬ್ಬರ ತಡೆಯಲಾಗದ್ದಕ್ಕೆ ಏನು ಕಾರಣ ನೀಡಬಹುದು ಆರ್​ಬಿಐ?

ಹಣದುಬ್ಬರ ಏರಿಕೆ ತಡೆಯುವಲ್ಲಿ ವಿಫಲವಾಗಿರುವುದಕ್ಕೆ ಹಲವು ಕಾರಣಗಳನ್ನು ಆರ್​ಬಿಐ ನೀಡುವ ಸಾಧ್ಯತೆ ಇದೆ. ಇವುಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧ ಕೂಡ ಒಂದಾಗಿದೆ.

RBI MPC meet: ಬೆಲೆ ಏರಿಕೆ, ಹಣದುಬ್ಬರ ತಡೆಯಲಾಗದ್ದಕ್ಕೆ ಏನು ಕಾರಣ ನೀಡಬಹುದು ಆರ್​ಬಿಐ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 28, 2022 | 1:11 PM

ನವದೆಹಲಿ: ಬೆಲೆ ಏರಿಕೆ ಹಾಗೂ ಚಿಲ್ಲರೆ ಹಣದುಬ್ಬರ (Retail Inflation) ನಿಯಂತ್ರಿಸಲು ವಿಫಲವಾಗಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೇಂದ್ರ ಸರ್ಕಾರಕ್ಕೆ ಲಿಖಿತ ವರದಿ ನೀಡಬೇಕಿದೆ. ಈ ವಿಚಾರವಾಗಿ ಆರ್​ಬಿಐ ನವೆಂಬರ್ 3ಕ್ಕೆ ಹಣಕಾಸು ನೀತಿ ಸಮಿತಿಯ (MPC) ವಿಶೇಷ ಸಭೆ ಕರೆದಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ, ಅಂದರೆ 9 ತಿಂಗಳಿನಿಂದ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದಕ್ಕೆ ಆರ್​ಬಿಐ ಏನು ಉತ್ತರ ನೀಡಬಹುದು ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಹಣದುಬ್ಬರ ಏರಿಕೆ ತಡೆಯುವಲ್ಲಿ ವಿಫಲವಾಗಿರುವುದಕ್ಕೆ ಹಲವು ಕಾರಣಗಳನ್ನು ಆರ್​ಬಿಐ ನೀಡುವ ಸಾಧ್ಯತೆ ಇದೆ. ಇವುಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧ, ಕೋವಿಡ್ ವಿರುದ್ಧ ಚೀನಾದ ಶೂನ್ಯ ಸಹನೆ ನೀತಿ ಪೂರೈಕೆ ಸರಪಳಿ ಮೇಲೆ ಬೀರಿದ ಪರಿಣಾಮ ಕೂಡ ಸೇರಿರಲಿವೆ ಎಂದು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ‘ಮನಿ ಕಂಟ್ರೋಲ್’ ತಾಣ ವರದಿ ಮಾಡಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಆರಂಭವಾಗುವುದಕ್ಕೂ ಮೊದಲೇ ಹಣದುಬ್ಬರ ಏರಿಕೆಯಾಗಿತ್ತು. ಯುದ್ಧ ಆರಂಭವಾದ ಬಳಿಕ ಪೂರೈಕೆ ಸರಪಳಿಗೆ ಮತ್ತಷ್ಟು ಅಡ್ಡಿಯಾಯಿತು. ಇಂಧನ ಆಧಾರಿತ ಸರಕುಗಳ ಪೂರೈಕೆಯಲ್ಲಿ ವ್ಯತ್ಯಯವಾಯಿತು ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ
Image
Petrol Price On October 28: ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆಯೇ? ತಿಳಿಯಿರಿ
Image
Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ
Image
RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ
Image
Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಏನು ಪರಿಹಾರ ಸೂಚಿಸಲಿದೆ ಆರ್​ಬಿಐ?

ವೈಫಲ್ಯಕ್ಕೆ ಕಾರಣಗಳನ್ನು ನಿಡಿದ ಬಳಿಕ ಪರಿಹಾರ ಕ್ರಮಗಳನ್ನೂ ಆರ್​ಬಿಐ ಸೂಚಿಸಬೇಕಿದೆ. ಹಣದುಬ್ಬರ ತಡೆಯುವ ನಿಟ್ಟಿನಲ್ಲಿ ಮೇ ತಿಂಗಳ ಬಳಿಕ ಈವರೆಗೆ ರೆಪೊ ದರವನ್ನು 190 ಮೂಲಾಂಶದಷ್ಟು ಆರ್​ಬಿಐ ಹೆಚ್ಚಿಸಿದೆ. ಮತ್ತೆ ಇಂಥದ್ದೇ ಕ್ರಮ ಕೈಗೊಳ್ಳುವ ಬಗ್ಗೆ ಆರ್​ಬಿಐ ಸರ್ಕಾರಕ್ಕೆ ತಿಳಿಸಲಿದೆಯೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಯಾಕೆಂದರೆ ಆರ್​ಬಿಐ ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್​ಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಪರಿಣಾಮವಾಗಿ ಗೃಹ, ವಾಹನ ಸಾಲ ಪಡೆದವರು ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ. ರೆಪೊ ದರಕ್ಕೆ ಸಂಬಂಧಿಸಿದ ಮತ್ತು ಕೆಲವೊಂದು ಗೌಪ್ಯ ಮಾಹಿತಿ ಬಹಿರಂಗಪಡಿಸಲಾಗದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ

ಡಿಸೆಂಬರ್​ 5-7ರ ವರೆಗೆ ನಡೆಯಲಿರುವ ಹಣಕಾಸು ನೀತಿ ಸಭೆಯಲ್ಲಿ ಮತ್ತು ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ ಆರ್​ಬಿಐ ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಮೂಲಕ ರೆಪೊ ದರವನ್ನು ಶೇಕಡಾ 6.5ರ ವರೆಗೂ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೆಲವು ಮಂದಿ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವಾಗ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು?

ಮುಂದಿನ ಎರಡು ವರ್ಷಗಳ ಒಳಗೆ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದು ಶಕ್ತಿಕಾಂತ ದಾಸ್ ಅವರು ಸೆಪ್ಟೆಂಬರ್ 30ರಂದು ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ ಹೇಳಿದ್ದರು. 25ನೇ ಹಣಕಾಸು ವರ್ಷದ ವೇಳೆಗೆ ಹಣದುಬ್ಬರ ಪ್ರಮಾಣವನ್ನು ಶೇಕಡಾ 4ರ ಕೆಳಗೆ ತರುವ ಗುರಿ ಹಾಕಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ