ಬೆಂಗಳೂರು: ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ (Gold Rates Hike) ಆಗುತ್ತಿದೆ. ಶನಿವಾರ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಸ್ವಲ್ಪಸ್ವಲ್ಪವೇ ಹೆಚ್ಚುತ್ತಿದೆ. ಭಾರತದಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 52,160 ರುಪಾಯಿಗೆ ಏರಿದೆ. 10 ಗ್ರಾಮ್ಗೆ 100 ರುಪಾಯಿಯಷ್ಟು ಏರಿಕೆಯಾಗಿದೆ. ಶನಿವಾರವಷ್ಟೇ ಬೆಲೆಗಳು 51 ಸಾವಿರ ಮಟ್ಟಕ್ಕಿಂತ ಕಡಿಮೆ ಇತ್ತು. 24 ಕ್ಯಾರಟ್ ಚಿನ್ನದ ಬೆಲೆ ಎರಡು ದಿನ ಏರಿಕೆ ಕಂಡರೂ ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಭಾರತದಲ್ಲಿ 100 ಗ್ರಾಮ್ಗೆ 6,570 ರುಪಾಯಿ ಆಗಿದೆ. ಇನ್ನು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 10 ಗ್ರಾಮ್ಗೆ 52,210ರುಪಾಯಿಗೆ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 6,870 ರುಪಾಯಿ ಆಗಿದೆ. ದಕ್ಷಿಣ ಭಾರತದ ವಿವಿಧೆಡೆ ಮತ್ತು ಒಡಿಶಾದಲ್ಲಿ ಬೆಳ್ಳಿ ಬೆಲೆ ಏಕಸ್ಥಿತಿಯಲ್ಲಿದೆ.
ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ತುಸು ಏರಿಕೆಯಾಗಿದೆ. ಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 47 ಸಾವಿರ ರೂನಿಂದ 49 ಸಾವಿರ ರೂ ವರೆಗೂ ಇದೆ. ದುಬೈನಲ್ಲಿ ಮಾತ್ರ 47 ಸಾವಿರಕ್ಕಿಂತ ಕಡಿಮೆ ಬೆಲೆ ಇದೆ.
ಬೆಲೆ ಏರಿಕೆಗೆ ಏನು ಕಾರಣ?
ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.
ಭಾರತದಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,160 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,890 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 657 ರೂ
ಬೆಂಗಳೂರಿನಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,210 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 687 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 52,210 ರೂ
ಚೆನ್ನೈ: 52,710 ರೂ
ಮುಂಬೈ: 52,160 ರೂ
ದೆಹಲಿ: 52,310 ರೂ
ಕೋಲ್ಕತಾ: 52,160 ರೂ
ಕೇರಳ: 52,160 ರೂ
ಅಹ್ಮದಾಬಾದ್: 52,210 ರೂ
ಜೈಪುರ್: 52,310 ರೂ
ಲಕ್ನೋ: 52,310 ರೂ
ಭುವನೇಶ್ವರ್: 52,210 ರೂ
ಇದನ್ನೂ ಓದಿ: PhonePe: ಫೋನ್ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,700 ರಿಂಗಿಟ್ (48,967 ರುಪಾಯಿ)
ದುಬೈ: 2095 ಡಿರಾಮ್ (46,755 ರುಪಾಯಿ)
ಅಮೆರಿಕ: 575 ಡಾಲರ್ (47,130 ರುಪಾಯಿ)
ಸಿಂಗಾಪುರ: 784 ಸಿಂಗಾಪುರ್ ಡಾಲರ್ (47,639 ರುಪಾಯಿ)
ಕತಾರ್: 2,165 ಕತಾರಿ ರಿಯಾಲ್ (48,738 ರೂ)
ಓಮನ್: 229 ಒಮಾನಿ ರಿಯಾಲ್ (48,741 ರುಪಾಯಿ)
ಕುವೇತ್: 179 ಕುವೇತಿ ದಿನಾರ್ (47,786 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 6,870 ರೂ
ಚೆನ್ನೈ: 6,870 ರೂ
ಮುಂಬೈ: 6,570 ರೂ
ದೆಹಲಿ: 6,570 ರೂ
ಕೋಲ್ಕತಾ: 6,570 ರೂ
ಕೇರಳ: 6,870 ರೂ
ಅಹ್ಮದಾಬಾದ್: 6,570 ರೂ
ಜೈಪುರ್: 6,570 ರೂ
ಲಕ್ನೋ: 6,570 ರೂ
ಭುವನೇಶ್ವರ್: 6,870 ರೂ