Motor Insurance: ಪ್ರತೀ ವಾಹನದ ಮಾಹಿತಿಯೂ ಸರ್ಕಾರಕ್ಕಿದೆ; ಇನ್ಷೂರೆನ್ಸ್ ಮಾಡಿಸಿಲ್ಲದವರಿಗೆ ಕಾದಿದೆ ಬಿಗಿಕ್ರಮ; ಡೀಟೇಲ್ಸ್ ಓದಿ

Big Penalty For Driving Without Vehicle Insurance: ಇನ್ಷೂರೆನ್ಸ್ ಮಾಡಿಸದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆಗಳು ಶೀಘ್ರದಲ್ಲೇ ನೋಟೀಸ್ ಕೊಡಲಿವೆ. ನಿಮ್ಮ ವಾಹನಕ್ಕೆ ಇನ್ನೂ ಇನ್ಷೂರೆನ್ಸ್ ಮಾಡಿಸಿಲ್ಲದೇ ಇದ್ದರೆ ಅಥವಾ ರಿನಿವಲ್ ಮಾಡಿಸದೇ ಇದ್ದರೆ ಮೊದಲು ಆ ಕೆಲಸ ಮಾಡಿ...!

Motor Insurance: ಪ್ರತೀ ವಾಹನದ ಮಾಹಿತಿಯೂ ಸರ್ಕಾರಕ್ಕಿದೆ; ಇನ್ಷೂರೆನ್ಸ್ ಮಾಡಿಸಿಲ್ಲದವರಿಗೆ ಕಾದಿದೆ ಬಿಗಿಕ್ರಮ; ಡೀಟೇಲ್ಸ್ ಓದಿ
ಮೋಟಾರ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 07, 2023 | 2:39 PM

ನವದೆಹಲಿ: ರಸ್ತೆಗೆ ಇಳಿಯುವ ವಾಹನಕ್ಕೆ ನಿಗದಿ ಪಡಿಸಲಾಗಿರುವ ಕಡ್ಡಾಯ ದಾಖಲೆಗಳಲ್ಲಿ ಮೋಟಾರ್ ಇನ್ಷೂರೆನ್ಸ್ (Vehicle insurance) ಕೂಡ ಒಂದು. ಆದರೆ, ಬಹಳ ಮಂದಿ ತಮ್ಮ ವಾಹನಗಳಿಗೆ ಇನ್ಷೂರೆನ್ಸ್ ಮಾಡಿಸುವುದೇ ಇಲ್ಲ. ವಾಹನ ಖರೀದಿಸುವಾಗ ಇನ್ಷೂರೆನ್ಸ್ ಮಾಡಿಸಿರುತ್ತಾರಾದರೂ ಅದರ ರಿನಿವಿಲ್ ಮಾಡಿಸದೇ ಹಾಗೆ ಬಿಟ್ಟುಬಿಡುತ್ತಾರೆ. ಇನ್ಷೂರೆನ್ಸ್ ಇಲ್ಲದ ಇಂಥ ಕೋಟ್ಯಂತರ ವಾಹನಗಳು ಭಾರತದಲ್ಲಿ ನಿತ್ಯವೂ ಸಂಚರಿಸುತ್ತಿವೆ. ವಾಹನಕ್ಕೆ ಇನ್ಷೂರೆನ್ಸ್ ಮಾಡಿಸುವುದು ಕಡ್ಡಾಯ ಇದೆ. ಆದರೂ ವಿಮೆ ಮಾಡಿಸದೇ ವಾಹನ ಚಲಾಯಿಸುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ವಿಮೆ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈಗಾಗಲೇ ಎಲ್ಲಾ ವಾಹನಗಳಿಗೆ ಇನ್ಷೂರೆನ್ಸ್ ಅಳವಡಿಕೆ ಖಚಿತಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಇನ್ಷೂರೆನ್ಸ್ ಮಾಡಿಸದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆಗಳು ಶೀಘ್ರದಲ್ಲೇ ನೋಟೀಸ್ ಕೊಡಲಿವೆ. ನಿಮ್ಮ ವಾಹನಕ್ಕೆ ಇನ್ನೂ ಇನ್ಷೂರೆನ್ಸ್ ಮಾಡಿಸಿಲ್ಲದೇ ಇದ್ದರೆ ಅಥವಾ ರಿನಿವಲ್ ಮಾಡಿಸದೇ ಇದ್ದರೆ ಮೊದಲು ಆ ಕೆಲಸ ಮಾಡಿ…!

ಒಂದು ವೇಳೆ ನೀವು ಇನ್ಷೂರೆನ್ಸ್ ಮಾಡಿಸದೇ ವಾಹನ ಚಲಾಯಿಸಿದ್ದೇ ಆದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿಮಗೆ 2,000 ರೂ ದಂಡ ಹಾಕಲಿದ್ದಾರೆ. ಪ್ರತೀ ರಾಜ್ಯದಲ್ಲೂ ಇಂಥ ವಾಹನಗಳನ್ನು ಗುರುತಿಸಲು ಒಂದು ಇನ್ಷೂರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ. ಇನ್ಷೂರೆನ್ಸ್ ಮಾಡಿಸದ ವಾಹನಗಳ ಪಟ್ಟಿಯನ್ನು ಸಾರಿಗೆ ಇಲಾಖೆ ಮತ್ತು ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಪ್ರತಿಯೊಂದು ವಾಹನದ ಬಗ್ಗೆ ಇನ್ಷೂರೆನ್ಸ್ ಇನ್ಫಾರ್ಮೇಶನ್ ಬ್ಯೂರೋಗೆ ಮಾಹಿತಿ ಇದೆ.

ಇದನ್ನೂ ಓದಿ: Women’s Preferences: ಹಣಕಾಸು ಸೇವೆಗಳಲ್ಲಿ ಯಾವುದಕ್ಕೆ ಮಹಿಳೆಯರ ಆದ್ಯತೆ?: ಆರ್​ಬಿಐ ವರದಿ ನೋಡಿ

ಇನ್ಷೂರೆನ್ಸ್ ಮಾಡಿಸದಿದ್ದರೆ ಏನಾಗುತ್ತದೆ?

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ ಇನ್ಷೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ 2,000 ರೂ ದಂಡ ವಿಧಿಸಬಹುದು. ಇಂಥ ವಾಹನವನ್ನು ಗುರುತಿಸಿ ಆ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ನೋಟೀಸ್ ಜಾರಿ ಮಾಡುತ್ತದೆ. ವಾಹನ ಮಾಲೀಕರು ದಂಡದ ಮೊತ್ತದ ಜೊತೆಗೆ ವಾಹನಕ್ಕೆ ಇನ್ಷೂರೆನ್ಸ್ ಕೂಡ ಮಾಡಿಸಬೇಕಾಗುತ್ತದೆ. ಈ ರೀತಿಯಾಗಿ ಎಲ್ಲಾ ವಾಹನಗಳಿಗೂ ಇನ್ಷೂರೆನ್ಸ್ ಇರುವುದನ್ನು ಖಚಿತಪಡಿಸಲು ಐಆರ್​ಡಿಎಐ ಈ ಕ್ರಮ ಅನುಸರಿಸುತ್ತಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 30 ಕೋಟಿಗೂ ಹೆಚ್ಚು ವಾಹನಗಳು ಭಾರತದಲ್ಲಿ ಸಂಚರಿಸುತ್ತಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ವಾಹನಗಳಿಗೆ ಇನ್ಷೂರೆನ್ಸ್ ಇಲ್ಲವೇ ಇಲ್ಲ. ಭಾರತದಲ್ಲಿ ಪ್ರತೀ ವರ್ಷವೂ 4-5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಲ್ಲಿ ಸುಮಾರು ಒಂದೂವರೆ ಲಕ್ಷ ಅಪಘಾತಗಳು ಗಂಭೀರ ಸ್ವರೂಪದ್ದಾಗಿರುತ್ತವೆ. 18ರಿಂದ 45 ವರ್ಷ ವಯೋಮಾನದ ಜನರೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿದ್ದಾರೆನ್ನಲಾಗಿದೆ. ಹಾಗೆಯೇ, ಹೀಗಾಗಿ ವಾಹನಗಳಿಗೆ ವಿಮೆ ಮಾಡಿಸುವುದು ಬಹಳ ಮುಖ್ಯ ಎಂದು ಸರ್ಕಾರ ಪರಿಗಣಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Tue, 7 March 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು