AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Preferences: ಹಣಕಾಸು ಸೇವೆಗಳಲ್ಲಿ ಯಾವುದಕ್ಕೆ ಮಹಿಳೆಯರ ಆದ್ಯತೆ?: ಆರ್​ಬಿಐ ವರದಿ ನೋಡಿ

International Women's Day 2023 March 8th: ಹಣಕಾಸು ಸೇವೆಗಳ ಪೈಕಿ ಮಹಿಳೆಯರು ಅತಿ ಹೆಚ್ಚು ಉಪಯೋಗಿಸುವುದು ಕ್ಯಾಶ್ ವಿತ್​ಡ್ರಾವಲ್, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ ಸೇವೆಗಳನ್ನಂತೆ. ಎಂಟರ್ಟೈನ್ಮೆಂಟ್ ಸೇವೆಗಳನ್ನೂ ಹೆಚ್ಚು ಉಪಯೋಗಿಸುತ್ತಾರೆ.

Women's Preferences: ಹಣಕಾಸು ಸೇವೆಗಳಲ್ಲಿ ಯಾವುದಕ್ಕೆ ಮಹಿಳೆಯರ ಆದ್ಯತೆ?: ಆರ್​ಬಿಐ ವರದಿ ನೋಡಿ
ಮಹಿಳೆಯರ ಹಣಕಾಸು ಸೇವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2023 | 11:23 AM

ನವದೆಹಲಿ: ಷೇರುಪೇಟೆ ವಹಿವಾಟು, ಬ್ಯಾಂಕ್ ವಹಿವಾಟು, ಇನ್ಷೂರೆನ್ಸ್, ಯುಪಿಐ, ಕ್ರೆಡಿಟ್ ಕಾರ್ಡ್ ಇತ್ಯಾದಿ ಹಣಕಾಸು ಸೇವೆಗಳನ್ನು (Financial Services) ಮಹಿಳೆಯರು ಬಳಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಆದರೆ, ಒಟ್ಟಾರೆ ಹಣಕಾಸು ಸೇವೆಗಳನ್ನು ಮಹಿಳೆಯರು (Women) ಬಳಸುತ್ತಿರುವ ಪ್ರಮಾಣ ಶೇ. 1ಕ್ಕಿಂತಲೂ ಕಡಿಮೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಅಂಗಸಂಸ್ಥೆ ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ (Reserve Bank Innovation Hub Study) ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರ ಹಣಕಾಸು ಸೇವೆ ಬಳಕೆಯ ಪ್ರವೃತ್ತಿಯನ್ನು ಅಧ್ಯಯನ ಮಾಡಲಾಗಿದೆ. ಹಣಕಾಸು ಸೇವೆಗಳನ್ನು ಒದಗಿಸುವ 5,000 ರೀಟೇಲ್ ಸ್ಟೋರ್​ಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.

ಈ ಸಮೀಕ್ಷಾ ವರದಿ ಪ್ರಕಾರ, ಇಂಥ ರೀಟೇಲ್ ಸ್ಟೋರ್​ಗಳಲ್ಲಿ ಸಿಗುವ ಹಣಕಾಸು ಸೇವೆಗಳ ಪೈಕಿ ಮಹಿಳೆಯರು ಅತಿ ಹೆಚ್ಚು ಉಪಯೋಗಿಸುವುದು ಕ್ಯಾಶ್ ವಿತ್​ಡ್ರಾವಲ್, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ ಸೇವೆಗಳನ್ನಂತೆ. ಎಂಟರ್ಟೈನ್ಮೆಂಟ್ ಸೇವೆಗಳನ್ನೂ ಹೆಚ್ಚು ಉಪಯೋಗಿಸುತ್ತಾರೆ. ಹಾಗೆಯೇ, ಪ್ಯಾನ್ ಕಾರ್ಡ್ ಅಪ್ಲಿಕೇಶನ್, ಕಾಮರ್ಸ್, ಪ್ರವಾಸ ಸೇವೆಗಳಿಗೂ ಮಹಿಳೆಯರು ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರಮುಖ ಮತ್ತು ಅತಿದೊಡ್ಡ ಕಾರಣ ಮಕ್ಕಳ ಶಿಕ್ಷಣ. ಶೇ. 68ರಷ್ಟು ಮಹಿಳೆಯರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗೆಯೇ, ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸಲು ಮತ್ತು ಮನೆಗೆ ಎಲೆಕ್ಟ್ರಾನಿಕ್ ಐಟಂಗಳನ್ನು ತರುವುದು ಮಹಿಳೆಯರ ಹಣ ಉಳಿತಾಯಕ್ಕೆ ಇತರ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿMeta Layoffs- ಫೇಸ್​ಬುಕ್​ಗೆ ಶೇ.13ರಷ್ಟು ಲೇ ಆಫ್ ಸಾಕಾಗಿಲ್ಲ, ಮತ್ತೊಂದು ಸುತ್ತಿನ ಫೈರಿಂಗ್​ಗೆ ಮೆಟಾ ಅಣಿ

18ರಿಂದ 40 ವರ್ಷ ವಯೋಮಾನದ ಮಹಿಳೆಯರು ಇದೀಗ ಡಿಜಿಟಲ್ ತಂತ್ರಜ್ಞಾನಕ್ಕೆ ಚೆನ್ನಾಗಿಯೇ ಒಗ್ಗಿಹೋಗಿದ್ದಾರೆ. ಶೇ. 60ರಷ್ಟು ಮಹಿಳೆಯರ ಕೈಯಲ್ಲಿ ಸ್ಮಾರ್ಟ್​ಫೋನ್​ಗಳಿವೆ. ಬಹಳ ಮಂದಿ ಕೈಯಲ್ಲಿ ಯುಪಿಐ ವಾಲಟ್ ಆ್ಯಪ್​ಗಳೂ ಇವೆ. ಆದರೆ, ನಿತ್ಯದ ಹಣಕಾಸು ವಹಿವಾಟಿಗೆ ಯುಪಿಐ ಬಳಕೆ ಮಾಡುವ ಮಹಿಳೆಯರ ಪ್ರಮಾಣ ಶೇ. 5ರಿಂದ 20 ಇರಬಹುದು. ಶೇ. 48ರಷ್ಟು ಮಹಿಳೆಯರು ನಗದು ವಹಿವಾಟಿಗೇ ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು ಅಧ್ಯಯನದಿಂದ ಗೊತ್ತಾಗುತ್ತದೆ.

ಇನ್ನು, ಬ್ಯಾಂಕ್ ಮತ್ತು ಎಟಿಎಂಗಳಿಗೆ ಹೋಗುವ ಮಹಿಳೆಯರ ಪೈಕಿ ಶೇ. 78ರಷ್ಟು ಮಂದಿ ಕ್ಯಾಷ್ ವಿತ್​ಡ್ರಾ ಮಾಡಲು ಮಾತ್ರ ಹೋಗುತ್ತಾರಂತೆ. ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್​ನ ಈ ಸಮೀಕ್ಷೆ ಪ್ರಕಾರ ಶೇ. 74ರಷ್ಟು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸುತ್ತಾರೆ. ಆದರೆ, ಅವರ ವಹಿವಾಟು ಏನಿದ್ದರೂ ಕ್ಯಾಷ್ ಹಿಂಪಡೆಯುವುದು ಅಥವಾ ಕ್ಯಾಷ್ ಡೆಪಾಸಿಟ್ ಮಾಡುವುದು ಇವೇ ಹೆಚ್ಚಾಗಿರುತ್ತವೆ. ಕುತೂಹಲದ ಸಂಗತಿ ಎಂದರೆ ಶೇ. 20ಕ್ಕಿಂತಲೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳನ್ನು ಅವರ ಗಂಡಂದಿರೇ ನಿರ್ವಹಿಸುತ್ತಾರಂತೆ.

ಇನ್ನು, ಇನ್ಷೂರೆನ್ಸ್ ಪಾಲಿಸಿಗಳಿಗೆ ಮಹಿಳೆಯರು ಆದ್ಯತೆ ಕೊಡುತ್ತಾರಾದರೂ ಅದು ಜೀವ ವಿಮೆ ಮತ್ತು ಮೆಡಿಕಲ್ ಇನ್ಷೂರೆನ್ಸ್​ಗಳಿಗೆ ಮಾತ್ರ. ಬೇರೆ ರೀತಿಯ ವಿಮೆಗಳ ಬಗ್ಗೆ ಮಹಿಳೆಯರಿಗೆ ಹೆಚ್ಚು ಆಸಕ್ತಿ ಇಲ್ಲ.

ಇನ್ನಷ್ಟು ವ್ಯವಹಾರಗಳು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ